Karnataka-Ration Card: ರೇಷನ್‌ ಕಾರ್ಡ್‌ ಹೊಂದಿಲ್ಲದವರಿಗೆ ಗುಡ್‌ ನ್ಯೂಸ್‌! ಇನ್ನೆರಡು ತಿಂಗಳಲ್ಲಿ ಬಿಗ್‌ ಅಪ್ಡೇಟ್‌

ಇಂದಿನ ದಿನದಲ್ಲಿ ರೇಷನ್‌ ಕಾರ್ಡ್‌ (Ration Card) ಎಲ್ಲರಿಗೂ ಬಹುಮುಖ್ಯ ದಾಖಲೆಯಾಗಿದೆ. ಅದರಲ್ಲೂ ಸರ್ಕಾರಿ ಸೌಲಭ್ಯಗಳನ್ನು ಪಡೆಯಬೇಕೆಂದರೆ ರೇಷನ್‌ ಕಾರ್ಡ್‌ ಇರಲೇಬೇಕು. ಕರ್ನಾಟಕದಲ್ಲಿ ರೇಷನ್‌ ಕಾರ್ಡ್‌ ಎಂಬುದು ಸರ್ಕಾರದಿಂದ ಕೊಡಲಾಗುವ ಮುಖ್ಯ ದಾಖಲೆಗಳಲ್ಲಿ ಒಂದಾಗಿದೆ. ಅಲ್ಲದೇ ಈ ದಾಖಲೆ ಮೂಲಕ ಈಗಾಗಲೇ ಅರ್ಹ ಕುಟುಂಬಗಳು ಸಬ್ಸಿಡಿ ದರದಲ್ಲಿ ಅಕ್ಕಿ, ಗೋಧಿ, ಸಕ್ಕರೆ ಮುಂತಾದ ಅಗತ್ಯ ಆಹಾರ ಪದಾರ್ಥಗಳನ್ನು ಪಡೆಯುತ್ತಿದೆ. ಇನ್ನು ಇದು ನ್ಯಾಷನಲ್‌ ಫುಡ್‌ ಸೆಕ್ಯೂರಿಟಿ ಆಕ್ಟ್‌ (NFSA) ಅಡಿಯಲ್ಲಿ ಬರುತ್ತದೆ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇದನ್ನು ನಿರ್ವಹಿಸುತ್ತದೆ.

ರೇಷನ್‌ ಕಾರ್ಡ್‌ ಹೊಂದಿಲ್ಲದವರಿಗೆ ಗುಡ್‌ ನ್ಯೂಸ್‌; ಬಿಗ್‌ ಅಪ್ಡೇಟ್‌

ಇದೀಗ ರೇಷನ್‌ ಕಾರ್ಡ್‌ ಹೊಂದಿರದ ಕುಟುಂಬದವರಿಗೆ ಗುಡ್‌ ನ್ಯೂಸ್‌ ಒಂದಿದೆ. ಎರಡು ವರ್ಷಗಳಿಂದ ಹೊಸ ರೇಷನ್‌ ಕಾರ್ಡ್‌ಗಾಗಿ ಕಾಯುತ್ತಿದ್ದವರಿಗೆ ಕೊನೆಗೂ ಕರ್ನಾಟಕ ಸರ್ಕಾರ ಬಿಗ್‌ ಅಪ್ಡೇಟ್‌ ಕೊಟ್ಟಿದೆ. ಅದೇನೆಂದು ತಿಳಿಯುವ ಕುತೂಹಲ ನಿಮಗಿದ್ರೆ ಈ ಸುದ್ದಿ ಓದಿ.

ಹೊಸ ರೇಷನ್‌ ಕಾರ್ಡ್‌ ಪಡೆಯೋರಿಗೆ ಸಿಹಿಸುದ್ದಿ!
ಅದೆಷ್ಟೋ ಜನರು ಕಳೆದ ಎರಡೂವರೆ ವರ್ಷಗಳಿಂದ ಹೊಸ ರೇಷನ್‌ ಕಾರ್ಡ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ ಇದುವರೆಗೆ ಅರ್ಜಿ ಸಲ್ಲಿಸಲು ಯಾವುದೇ ಅವಕಾಶ ನೀಡಿರಲಿಲ್ಲ. ಆದ್ರೆ ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಹೆಚ್‌. ಮುನಿಯಪ್ಪ ಮುಂದಿನ ಎರಡು ತಿಂಗಳ ಒಳಗೆ ಪಡಿತರ ಚೀಟಿ (Ration Card) ವಿತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ನಗರದ ಐವಾನ್‌ ಎ ಶಾಹಿ ಅತಿಥಿಗೃಹದಲ್ಲಿ ಭಾನುವಾರ (ಜ.11) ಮಾತನಾಡಿದ ಸಚಿವ ಕೆ.ಹೆಚ್‌. ಮುನಿಯಪ್ಪ ತಿದ್ದುಪಡಿ ಸೇರಿ ಹಲವಾರು ಕಾರಣಗಳಿಂದ ಕಳೆದ ಎರಡೂವರೆ ವರ್ಷಗಳಿಂದ ಹೊಸ ರೇಷನ್‌ ಕಾರ್ಡ್‌ ನೀಡಲು ಸಾಧ್ಯವಾಗಿಲ್ಲ. ಈ ಪರಿಣಾಮ ಈಗಾಗಲೇ ಸುಮಾರು 2.5 ಲಕ್ಷದಿಂದ 3 ಲಕ್ಷ ಅರ್ಜಿಗಳು ಬಾಕಿ ಇದೆ ಎಂದು ವರದಿಯಾಗಿದೆ. ಆದ್ದರಿಂದ ಎಲ್ಲವೂ ಪರಿಶೀಲನೆ ನಡೆಸಿದ ನಂತರವೇ ಹೊಸ ಪಡಿತರ ಚೀಟಿಗಳನ್ನು ಮುಂಬರುವ ತಿಂಗಳಲ್ಲಿ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ ಮಹತ್ವದ ಯೋಜನೆ ಜಾರಿ!
ಇದೀಗ ಕರ್ನಾಟಕ ಸರ್ಕಾರ ಅನ್ನ ಭಾಗ್ಯ ಯೋಜನೆಯ 5 ಕೆಜಿ ಅಕ್ಕಿ ವಿತರಣೆಯ ಬದಲಾಗಿ, "ಇಂದಿರಾ ಕಿಟ್‌" ವಿತರಣಾ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲು ಮುಂದಾಗಿದೆ. ಇನ್ನು ಈ ಯೋಜನೆ ಜನವರಿ ತಿಂಗಳ ಅಂತ್ಯದಲ್ಲಿ ಅಥವಾ ಫೆಬ್ರವರಿಯಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಇನ್ನು ಇಂದಿರಾ ಕಿಟ್‌ನಲ್ಲಿ ತೊಗರಿ ಬೇಳೆ, ಸಕ್ಕರೆ, ಎಣ್ಣೆ ಮತ್ತು ಉಪ್ಪು ಇರುವ ಪೌಷ್ಠಿಕ ಆಹಾರ ನೀಡುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿದೆ.

ಒಂದು ಯೋಜನೆ, ಕೋಟಿಗಟ್ಟಲೆ ಜನರಿಗೆ ಪ್ರಯೋಜನ!
ಅನ್ನಭಾಗ್ಯ ಯೋಜನೆಯ ಬದಲಾಗಿ ಇದೀಗ ದೇಶದ ಮೊದಲ ಬಾರಿಗೆ ರಾಜ್ಯದ ಜನರ ಆರೋಗ್ಯದ ದೃಷ್ಟಿಯಿಂದ ದೇಶದಲ್ಲೇ ಮೊದಲ ಬಾರಿ ರೇಷನ್‌ ಕಾರ್ಡ್‌ ಮೂಲಕ ಪೌಷ್ಠಿಕ ಆಹಾರ ನೀಡಲು ಸರ್ಕಾರ ಮುಂದಾಗಿದೆ. ಇಂದಿರಾ ಕಿಟ್‌ ಮೂಲಕ ಪೌಷ್ಠಿಕ ಆಹಾರ ನೀಡುವ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಮಯ್ಯ ಅವರು ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಯೋಜನೆಗಾಗಿ ರಾಜ್ಯದಲ್ಲಿ 1.5 ಲಕ್ಷ ಕಾರ್ಡ್‌ಗಳಿಂದ, 4.50 ಕೋಟಿ ಜನರಿಗೆ ಲಾಭ ಸಿಗಲಿದೆ ಎಂದು ಹೇಳಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+