ರೈಲ್ವೇ ಇಲಾಖೆ ತನ್ನ ಪ್ರಯಾಣಿಕರಿಗೆ ಖುಷಿ ಸುದ್ದಿಯನ್ನು ನೀಡಿದೆ. ಕೋರೊನಾ ಸಾಂಕ್ರಾಮಿಕ ಸಮಯದಲ್ಲಿ ಜನಸಂದಣಿಯನ್ನು ತಡೆಗಟ್ಟಲು ಪ್ಯಾಸೆಂಜರ್ ರೈಲುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಅವುಗಳನ್ನು ಆರಂಭಿಸಿದೆ. ಅಲ್ಲದೆ ಪ್ರಯಾಣ ದರದಲ್ಲಿ ಇಳಿಕೆಯನ್ನು ಮಾಡಿದೆ.
ಟಿಕೆಟ್ ದರವು ಕೊರೊನಾ ಸಾಂಕ್ರಾಮಿಕದ ದರಕ್ಕೆ ಮತ್ತೆ ಮರಳಿದೆ. ದೈನಂದಿನ ಪ್ರಯಾಣಿಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಇದರ ಅಡಿಯಲ್ಲಿ, ರೈಲು ಟಿಕೆಟ್ ದರಗಳು ಸುಮಾರು 40-50 ಪ್ರತಿಶತದಷ್ಟು ಕಡಿಮೆಯಾಗಿದೆ. ಈ ಹಿಂದೆ ಪ್ಯಾಸೆಂಜರ್ ರೈಲುಗಳಲ್ಲಿ ಪ್ರಯಾಣಿಸಲು ಪ್ರಯಾಣಿಕರು ಎಕ್ಸ್‌ಪ್ರೆಸ್ ರೈಲಿನ ದರವನ್ನು ಪಾವತಿಸಬೇಕಾಗಿತ್ತು.

ಭಾರತೀಯ ರೈಲ್ವೆ ಫೆಬ್ರವರಿ 27 ರಿಂದ 'ಪ್ಯಾಸೆಂಜರ್ ರೈಲುಗಳಿಗೆ' ಸಾಮಾನ್ಯ ಎರಡನೇ ದರ್ಜೆಯ ದರವನ್ನು ನಿಗದಿ ಪಡಿಸಿದೆ. ಇವುಗಳನ್ನು ಈಗ 'ಎಕ್ಸ್‌ಪ್ರೆಸ್ ವಿಶೇಷ' ಅಥವಾ 'MEMU/DEMU ಎಕ್ಸ್‌ಪ್ರೆಸ್' ರೈಲುಗಳು ಎಂದು ಕರೆಯಲಾಗುತ್ತದೆ.
ರೈಲ್ವೇ ಅಧಿಕಾರಿಗಳು ಎಲ್ಲಾ ಮುಖ್ಯ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (MEMU) ರೈಲುಗಳು ಮತ್ತು 'ಜೀರೋ'ದಿಂದ ಪ್ರಾರಂಭವಾಗುವ ರೈಲುಗಳಿಗೆ ಸಾಮಾನ್ಯ ದರ್ಜೆಯ ದರವನ್ನು ಸುಮಾರು 50 ಪ್ರತಿಶತದಷ್ಟು ಕಡಿಮೆ ಮಾಡಿದ್ದಾರೆ. ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ (UTS) ಅಪ್ಲಿಕೇಶನ್‌ನಲ್ಲಿನ ದರದ ರಚನೆಯನ್ನು ಸಹ ಅದಕ್ಕೆ ಅನುಗುಣವಾಗಿ ಬದಲಾಯಿಸಲಾಗಿದೆ. ಈ ದರ ಕಡಿತವು ಮೊದಲು ಪ್ಯಾಸೆಂಜರ್ ರೈಲುಗಳಾಗಿ ವರ್ಗೀಕರಿಸಲ್ಪಟ್ಟ ಎಲ್ಲಾ ರೈಲುಗಳಿಗೆ ಅನ್ವಯಿಸುತ್ತದೆ.

COVID-19 ಸಾಂಕ್ರಾಮಿಕ ಸಮಯದಲ್ಲಿ ಪ್ಯಾಸೆಂಜರ್ ರೈಲುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅವುಗಳನ್ನು ಮತ್ತೆ ಆರಂಭಿಸಲಾಗಿದ್ದು ಕನಿಷ್ಠ ಟಿಕೆಟ್ ದರವನ್ನು 10 ರೂ.ನಿಂದ 30 ರೂ.ಗೆ ಹೆಚ್ಚಿಸಲಾಗಿತ್ತು. ಇದು ಎಕ್ಸ್‌ಪ್ರೆಸ್ ರೈಲುಗಳ ದರಕ್ಕೆ ಅನುಗುಣವಾಗಿತ್ತು. ಆದರೆ, ಇತ್ತೀಚಿನ ಘೋಷಣೆಯೊಂದಿಗೆ ರೈಲ್ವೆ ಅಧಿಕಾರಿಗಳು ಈ ನಿರ್ಧಾರವನ್ನು ಹಿಂಪಡೆದಿದ್ದಾರೆ. ಇದು ಪ್ರಯಾಣಿಕರಿಗೆ ನೆಮ್ಮದಿ ತಂದಿದೆ.
ಹಲವು ಸ್ಥಳಗಳಿಗೆ ಟಿಕೆಟ್ ದರವನ್ನು ಹಿಂದಿನ ದರಕ್ಕಿಂತ ಅರ್ಧಕ್ಕೆ ಇಳಿಸಲಾಗಿದೆ. ಇದು ಪ್ರಯಾಣಿಕರಿಗೆ ಅಗತ್ಯ ಪರಿಹಾರ ಒದಗಿಸಿದೆ. ಬದಲಾದ ದರಗಳು ಗುರುವಾರದಿಂದಲೇ ಜಾರಿಗೆ ಬಂದಿವೆ ಎಂದು ಕೇಂದ್ರ ರೈಲ್ವೆ ಪ್ರಯಾಣಿಕರ ಸಲಹಾ ಸಮಿತಿ ಸದಸ್ಯ ಶಿವನಾಥ ಬಿಜಾನಿ ತಿಳಿಸಿದ್ದಾರೆ.
ಟಿಕೆಟ್ ದರದಲ್ಲಿ ಕಡಿತದ ಬೇಡಿಕೆಯನ್ನು ಪ್ರತಿನಿಧಿಗಳು ಮತ್ತು ಪ್ರಯಾಣಿಕರ ಸಂಘಟನೆಗಳು ನಿರಂತರವಾಗಿ ಇಡುತ್ತಲೇ ಬಂದಿದ್ದವು. ಇತ್ತೀಚೆಗಷ್ಟೇ ಪ್ರಯಾಣ ದರದಲ್ಲಿ ಇಳಿಕೆ ಮಾಡಿರುವುದು ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಹೊಸ ಬೆಲೆಗಳ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications