ಬೆಂಗಳೂರು, ಮೇ 31: ದೇಶದ ಅತಿದೊಡ್ಡ ಆನ್ ಲೈನ್ ಸ್ಟಾಕ್ ಬ್ರೋಕರೇಜ್ ಸಂಸ್ಥೆ ಝೆರೋಧಾ ತನ್ನ ಅಪ್ಲಿಕೇಶನ್ ಬಳಕೆದಾರರಿಗೆ ಹೊಸ ಫೀಚರ್ ನ್ನು ಪರಿಚಯಿಸಿದೆ. ಈ ಹೊಸ ವೈಶಿಷ್ಟ್ಯದ ಮೂಲಕ ಬಳಕೆದಾರರು ತ್ವರಿತ ಹಿಂಪಡೆಯುವಿಕೆ(instant withdrawal ) ಮಾಡಬಹುದಾಗಿದೆ.
ಅಂದರೆ ಪ್ರಾಥಮಿಕ ಬ್ಯಾಂಕ್ ಖಾತೆಯಿಂದ ಸೆಕೆಂಡುಗಳಲ್ಲಿ ಹಣವನ್ನು ಹಿಂಪಡೆಯಬಹುದು. ಈ ಫೀಚರ್ ಬಳಕೆದಾರರಿಗೆ ದಿನಕ್ಕೆ ₹ 1,00,000 ವರೆಗೆ ತ್ವರಿತ ಹಣವನ್ನು ಹಿಂಪಡೆಯಲು ಮಾತ್ರ ಅನುವು ಮಾಡಿಕೊಡುತ್ತದೆ. ಈ ಬಗ್ಗೆ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ " ಬಳಕೆದಾರರು ವಾರಾಂತ್ಯ ಸೇರಿದಂತೆ ವಾರದ ಏಳು ದಿನಗಳು, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, 9 ರಿಂದ ೪ ರವರೆಗೆ ತತಕ್ಷಣ ಒಂದು ಲಕ್ಷ ರೂ. ವರೆಗೆ ಹಣ ಹಿಂಪಡೆಯಬಹುದು "ಎಂದು ಗುರುವಾರ ಪೋಸ್ಟ್ ಮಾಡಿದ್ದಾರೆ.

ಭಾರತದ ಅತಿದೊಡ್ಡ ಚಿಲ್ಲರೆ ಸ್ಟಾಕ್ ಬ್ರೋಕರ್ ಗಳಲ್ಲಿ ಒಂದಾದ ಝೆರೋಧಾ ಈ ಹೊಸ ಫೀಚರ್ ಮೂಲಕ ತನ್ನ ಗ್ರಾಹಕರಿಗೆ ಹಣಕಾಸು ಸೇವೆಗಳನ್ನು ಗಮನಾರ್ಹವಾಗಿ ಉನ್ನತೀಕರಿಸಿದೆ. ಹಣವನ್ನು ವಾಪಾಸ್ ಪಡೆದುಕೊಳ್ಳವ ಈ ಫೀಚರ್ ನಿಂದ ತನ್ನ ಗ್ರಾಹಕರಿಗೆ ತಡೆರಹಿತ ಮತ್ತು ಪರಿಣಾಮಕಾರಿ ಸೇವೆಗಳನ್ನು ನೀಡುವ ಕಂಪನಿಯ ಧ್ಯೇಯದೊಂದು ಈ ಹೊಸ ವೈಶಿಷ್ಟ್ಯ ಹೊಂದಾಣಿಕೆಯಾಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮೂಲಕ ಸುಗಮಗೊಳಿಸಲಾದ ದೃಢವಾದ ಪಾವತಿ ವ್ಯವಸ್ಥೆಗಳು Zerodhaದಲ್ಲಿ instant withdrawal ಯಾವುದೇ ಹಿಂಜರಿಕೆಯಿಲ್ಲದೇ ಪಡೆದುಕೊಳ್ಳಬಹುದಾಗಿದೆ.
ಈ ನೂತನ ಫೀಚರ್ ಮೂಲಕ ಬಳಕೆದಾರರು ವಿತ್ ಡ್ರಾ ರಿಕ್ವೆಸ್ ಗಳನ್ನು ಕನಿಷ್ಠ ₹ 100 ದಿಂದ ದಿನಕ್ಕೆ ₹ 1,00,000 ಮಾಡಬಹುದಾಗಿದ್ದು, ಒಂದು ಲಕ್ಷದ ಮಿತಿಯನು ಮೀರಬಾರದು.
ಅಲ್ಲದೇ ಒಂದೇ ದಿನದಲ್ಲಿ ಠೇವಣಿ ಮಾಡಿದ ಹಣಕ್ಕೆ ಇನ್ಸ್ಟೆಂಟ್ ವಿತ್ ಡ್ರಾ ವೈಶಿಷ್ಟ್ಯವು ಲಭ್ಯವಿರುವುದಿಲ್ಲ. ಜೊತೆಗೆ ತ್ವರಿತ ಹಿಂಪಡೆಯುವಿಕೆಯನ್ನು ಪ್ರಸ್ತುತ Paytm ಪಾವತಿಗಳ ಬ್ಯಾಂಕ್ ಬೆಂಬಲಿಸುವುದಿಲ್ಲ. ಅಲ್ಲದೇ ಹಣವನ್ನು ತಕ್ಷಣವೇ ಹಿಂಪಡೆಯಲು ಯಾವುದೇ ಶುಲ್ಕಗಳಿಲ್ಲ ಎಂದು ಝೆರೋಧಾ ಹೇಳಿದೆ.
'ಇನ್ಸ್ಟೆಂಟ್ ವಿತ್ ಡ್ರಾ' ಬಳಕೆ ಹೇಗೆ?
ಯೂಸರ್ ID ಮೇಲೆ ಟ್ಯಾಪ್ ಮಾಡಿ.
'ಫಂಡ್ಸ್' ಮೇಲೆ ಕ್ಲಿಕ್ ಮಾಡಿ.
'Instant' ಮೇಲೆ ಕ್ಲಿಕ್ ಮಾಡಿ.
ನಿಮಗೆ ಬೇಕಾದ ಮೊತ್ತವನ್ನು ನಮೂದಿಸಿ. (ಕನಿಷ್ಠ ₹ 100 ಮತ್ತು ₹ 1,00,000 ವರೆಗೆ ವಿಥ್ ಡ್ರಾ ಮಾಡಬಹುದು)
ಮುಂದುವರಿಸಿ ಮತ್ತು ನಂತರ ಕರ್ನ್ಪರ್ಮ್ ಮೇಲೆ ಟ್ಯಾಪ್ ಮಾಡಿ.
Zerodha ನ ನವೀನ ವಿಧಾನ ಮತ್ತು ಗ್ರಾಹಕ-ಕೇಂದ್ರಿತ ನೀತಿಗಳು ಅದನ್ನು ಇಂದಿಗೂ ಭಾರತೀಯ ಬ್ರೋಕರೇಜ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿದೆ.


Click it and Unblock the Notifications