ಇಂದು ಸರ್ಕಾರದಿಂದ ಹಲವು ಯೋಜನೆಗಳು ಜಾರಿಯಲ್ಲಿವೆ. ಈ ಎಲ್ಲಾ ಯೋಜನೆಗಳ ಮೂಲಕ ಜನರಿಗೆ ಸಾಲ ಸೌಲಭ್ಯಗಳು, ಶೈಕ್ಷಣಿಕ ನೆರವು, ಮನೆ ನಿರ್ಮಾಣಕ್ಕೆ ಸಹಾಯ, ಮಹಿಳೆಯರಿಗೆ ಸ್ವಂತ ದುಡಿಮೆಗಾಗಿ ಸಾಲ ಸೌಲಭ್ಯ ದೊರೆಯುತ್ತದೆ. ಸರ್ಕಾರದಿಂದ ಜಾರಿಯಾಗುವ ಈ ಯೋಜನೆಗಳು ಬಡ ಜನರಿಗೆ ಬಹಳಷ್ಟು ಸಹಾಯವಾಗಿವೆ. ಹಾಗೆಯೇ ಈಗ ಸರ್ಕಾರದಿಂದ ಕಾರ್ಮಿಕರಿಗೆ ಒಳ್ಳೆಯ ಸುದ್ದಿ ಬಂದಿದೆ.
ಸರ್ಕಾರವು ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅಸಂಘಟಿತ ಕಾರ್ಮಿಕರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಮುಖ್ಯ ಉದ್ದೇಶ ಶ್ರಮ ಜೀವಿಗಳಾದ ಕಾರ್ಮಿಕರ ಜೀವನ ಉತ್ತಮ ರೀತಿಯಲ್ಲಿ ಸಾಗಬೇಕು. ಮತ್ತು ಅವರು ಯಾವುದೇ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬುದಾಗಿದೆ.

ಈ ಯೋಜನೆಗಳ ಮೂಲಕ ಹಲವಾರು ಸವಲತ್ತುಗಳು ಕಾರ್ಮಿಕರಿಗೆ ದೊರೆಯಲಿದ್ದು, ಕಾರ್ಮಿಕರ ಕುಟುಂಬದಲ್ಲಿ ಜನನದಿಂದ ಹಿಡಿದು ಮರಣದ ವರೆಗೆ ಹಲವು ಯೋಜನೆಗಳಿದ್ದು, ಅದರ ಬಗ್ಗೆ ಮಾಹಿತಿ ಪಡೆದು ಅನುದಾನ ಪಡೆದುಕೊಳ್ಳಬೇಕು.
ಮದುವೆಗೆ 60,000 ರೂ. ಸಹಾಯಧನ
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೊಂದಾಯಿತ ಕಾರ್ಮಿಕರಿಗೆ ಮದುವೆಗೆ ಅಥವಾ ಅವರ ಮಕ್ಕಳ ಮದುವೆಗೆ 60,000 ರೂ. ಸಹಾಯಧನವನ್ನು ನೀಡುತ್ತದೆ. ಈ ಯೋಜನೆಯ ಮೂಲ ಉದ್ದೇಶ ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ನೆರವನ್ನು ನೀಡುವ ಮೂಲಕ ಅವರ ಜೀವನಮಟ್ಟವನ್ನು ಸುಧಾರಿಸುವುದಾಗಿದೆ. ಫಲಾನುಭವಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ನೋ೦ದಾಯಿತ ಕಾರ್ಮಿಕರ ಮದುವೆ ಅಥವಾ ಅವರ ಮಕ್ಕಳ ಮದುವೆಗೆ ಮ೦ಡಳಿಯು ಸಹಾಯಧನವನ್ನು ನೀಡುತ್ತದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
• ಮದುವೆಯ ದಿನಾಂಕದವರೆಗೆ ಕನಿಷ್ಠ ಒಂದು ವರ್ಷ ಮಂಡಳಿಯ ಸದಸ್ಯತ್ವವನ್ನು ಪೂರೈಸಿರಬೇಕು.
• ಒಂದು ಕುಟುಂಬವು ಎರಡು ಬಾರಿ ಮಾತ್ರ ಈ ಸೌಲಭ್ಯವನ್ನು ಪಡೆಯಲು ಅರ್ಹವಾಗಿರುತ್ತದೆ.
• ಸಹಾಯಧನವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ತಲುಪಿರಬೇಕು
• ವಿವಾಹದ ದಿನಾಂಕದಿಂದ ಆರು ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು.
• ಅರ್ಜಿಯೊಂದಿಗೆ ವಿವಾಹ ನೋಂದಣಿ ಅಧಿಕಾರಿಯಿಂದ ಪಡೆದ ವಿವಾಹ ನೋಂದಣಿ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು.
ಇತರ ಸಹಾಯಕ ದಾಖಲೆ:
ಅರ್ಜಿಯನ್ನು ಸಲ್ಲಿಸಲು ನಿಮ್ಮ ಬಳಿ ಕಾರ್ಮಿಕರ ನೋಂದಣಿ ಪ್ರಮಾಣಪತ್ರದ ಪ್ರತಿ ಇರಬೇಕು. ಮದುವೆಯಾದ ಬಗ್ಗೆ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಅರ್ಜಿದಾರರ ಆಧಾರ್ ಕಾರ್ಡ್ ಇರಬೇಕು. ಅರ್ಜಿದಾರರ ಜನನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕು. ಇದರ ಜೊತೆಗೆ, ಮಂಡಳಿಯಿಂದ ನೀಡಲಾದ ಫಲಾನುಭವಿ/ಮೂಲ ಗುರುತಿನ ಚೀಟಿ, ಉದ್ಯೋಗ ಪ್ರಮಾಣಪತ್ರ, ಬ್ಯಾಂಕ್ ಖಾತೆ ವಿವರಗಳು, ವಿವಾಹ ನೋಂದಣಿ ಅಧಿಕಾರಿಯಿಂದ ವಿವಾಹ ಪ್ರಮಾಣಪತ್ರ, ಮದುವೆ ಆಮಂತ್ರಣ ಪತ್ರ, ಕರ್ನಾಟಕ ರಾಜ್ಯದ ಹೊರಗೆ ಮದುವೆಯಾಗಿದ್ದರೆ ಅಫಿಡವಿಟ್ ಮತ್ತು ಪಡಿತರ ಚೀಟಿಯಂತಹ ಇತರ ಸಹಾಯಕ ದಾಖಲೆಗಳನ್ನು ಹೊಂದಿರಬೇಕು.
ಈ ರೀತಿ ಅರ್ಜಿ ಸಲ್ಲಿಸಿ
1) ಅಧಿಕೃತ ವೆಬ್ ಸೈಟ್ https://karbwwb.karnataka.gov.in/kn ಗೆ ಭೇಟಿ ನೀಡಿ
2) ಬಳಿಕ ಲಾಗಿನ್ ಆಗಬೇಕು
3) Registration ಮೇಲೆ ಕ್ಲಿಕ್ ಮಾಡಿ ಪೂರ್ಣಗೊಳಿಸಿ
4)ಬಳಿಕ ಅಲ್ಲಿ Schemes ಯೋಜನೆಗಳು ಮೇಲೆ ಕ್ಲಿಕ್ ಮಾಡಿ
5) ನಂತರ ಮದುವೆ ಸಹಾಯಧನ ಮೇಲೆ ಕ್ಲಿಕ್ ಮಾಡಿ
6) ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ದಾಖಲಾತಿಗಳನ್ನು ಅಪ್ ಲೋಡ್ ಮಾಡಿ
7) ಕೊನೆಗೆ submit ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ



Click it and Unblock the Notifications