IRCTC ಪಾಲನ್ನು ಮಾರಾಟ ಮಾಡಲು ಮುಂದಾದ ಸರ್ಕಾರ: OFS ಮೂಲಕ ಮಾರಾಟ; ಅಗ್ಗವಾಗಿ ಖರೀದಿಗೆ ಅವಕಾಶ!
ಕೇಂದ್ರ ಸರ್ಕಾರ ಈಗಾಗಲೇ ಹಲವಾರು ಸರ್ಕಾರಿ ಕಂಪನಿಗಳ ಪಾಲನ್ನು ಮಾರಾಟ ಮಾಡಿದೆ. ಎಲ್ಐಸಿ ಸೇರಿದಂತೆ ಹಲವಾರು ಕಂಪನಿಗಳಲ್ಲಿ ಪಾಲನ್ನು ಮಾರಾಟ ಮಾಡಲು ಸರ್ಕಾರ ಸಜ್ಜಾಗಿದೆ. ಮೊದಲನೆಯದಾಗಿ, ಈಗ ಕೇಂದ್ರ ಸರ್ಕಾರವು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಪಾಲನ್ನು ಮಾರಾಟ ಮಾಡಲು ಹೊರಟಿದೆ.
ಐಆರ್‌ಸಿಟಿಸಿ ಷೇರು ಮಾರುಕಟ್ಟೆಯಲ್ಲಿ ಪಟ್ಟಿಮಾಡಿದ ಕಂಪನಿಯಾಗಿದ್ದು, ಅದರ ಪಾಲನ್ನು ಆಫರ್-ಫಾರ್-ಸೇಲ್ (ಒಎಫ್ಎಸ್) ಮೂಲಕ ಮಾರಾಟ ಮಾಡಲಾಗುತ್ತದೆ. ಈ ಮೂಲಕ ನೀವು ಹಣ ಗಳಿಸಲು ಅವಕಾಶವಿರಬಹುದು. ವಾಸ್ತವವಾಗಿ, OFS ನಲ್ಲಿ ಹೂಡಿಕೆದಾರರು ಐಆರ್‌ಸಿಟಿಸಿ ಷೇರುಗಳನ್ನು ಅಗ್ಗವಾಗಿ ಖರೀದಿಸಲು ಅವಕಾಶವನ್ನು ಪಡೆಯುತ್ತಾರೆ.

ಐಆರ್‌ಸಿಟಿಸಿ ಷೇರು ಖರೀದಿಯಲ್ಲಿನ ಲಾಭ
ಐಎಫ್‌ಎಸ್‌ನಲ್ಲಿನ ಐಆರ್‌ಸಿಟಿಸಿ ಷೇರುಗಳ ದರವು ಈ ಸಮಯದಲ್ಲಿ (ಮಧ್ಯಾಹ್ನ 1.30 ಗಂಟೆ), ಸ್ಟಾಕ್ ಸುಮಾರು 1486 ರೂ. ಹೊಂದಿದ್ದು, 130.90 ರೂಪಾಯಿ ಕುಸಿತ ಕಂಡಿದೆ. ಆದರೆ ನೀವು ಈಗಿರುವ ಬೆಲೆಗಿಂತ ಹೆಚ್ಚಿನ ಲಾಭ ಗಳಿಸಬಹುದು.
ಷೇರು ಬೆಲೆಯಲ್ಲಿನ ಕುಸಿತವು ಹೂಡಿಕೆದಾರರಿಗೆ "ತಮ್ಮ ಬಂಡವಾಳಕ್ಕೆ ಷೇರುಗಳನ್ನು ಸೇರಿಸಲು" ಉತ್ತಮ ಅವಕಾಶವಾಗಿದೆ ಎಂದು ಕ್ಯಾಪಿಟಲ್ವಿಯಾ ಗ್ಲೋಬಲ್ ರಿಸರ್ಚ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಗೌರವ್ ಗರ್ಗ್ ಹೇಳುತ್ತಾರೆ. ಇಂದು ಚಂದಾದಾರಿಕೆಗಾಗಿ ತೆರೆಯುವ ಆಫರ್ ಫಾರ್ ಸೇಲ್ (ಒಎಫ್ಎಸ್) ಮೂಲಕ ಕಂಪನಿಯ ಶೇ. 20ರಷ್ಟು ಪಾಲನ್ನು ಮಾರಾಟ ಮಾಡುವುದಾಗಿ ಸರ್ಕಾರ ಘೋಷಿಸಿದ ನಂತರ ಐಆರ್‌ಸಿಟಿಸಿ ಷೇರುಗಳು ಇಂದು ಶೇ. 13 ರಷ್ಟು ಇಳಿದು ಕನಿಷ್ಠ 1,405 ಕ್ಕೆ ತಲುಪಿದೆ.
ಸ್ಟಾಕ್ ಮೂಲ ಬೆಲೆ 1367 ರೂ. ಎಂದು ನಿಗದಿಪಡಿಸಿದ್ದು, ಷೇರು ಬೆಲೆ ಹೆಚ್ಚಳಗೊಂಡರೆ ನೀವು ಅದಕ್ಕೆ ಅನುಗುಣವಾಗಿ ಲಾಭ ಗಳಿಸಬಹುದು. ಆದರೆ ಇಂದು ಈ ವಿಷಯವು ಸಾಮಾನ್ಯ ಹೂಡಿಕೆದಾರರಿಗೆ ಮುಕ್ತವಾಗಿಲ್ಲ. ಬದಲಿಗೆ ಇಂದು ಇದು ಚಿಲ್ಲರೆ ಅಲ್ಲದ ಹೂಡಿಕೆದಾರರಿಗೆ ಮಾತ್ರ ತೆರೆದಿರುತ್ತದೆ. ನಾಳೆ, ಡಿಸೆಂಬರ್ 11 ರಂದು, ಚಿಲ್ಲರೆ ಹೂಡಿಕೆದಾರರಿಗೆ ಈ ಆಫರ್ ಮುಕ್ತವಾಗಿರುತ್ತದೆ.

ಉತ್ತಮ ಹೂಡಿಕೆಯ ಅವಕಾಶವಿದೆ
2020 ರಲ್ಲಿ ಕೊರೊನಾ ಬಿಕ್ಕಟ್ಟಿನ ಹೊರತಾಗಿಯೂ ಷೇರು ಮಾರುಕಟ್ಟೆ ಉತ್ತಮ ಲಾಭವನ್ನು ನೀಡಿದೆ. ಐಆರ್‌ಸಿಟಿಸಿಯ ಷೇರು ಹೂಡಿಕೆದಾರರಿಗೆ ಬಲವಾದ ಲಾಭವನ್ನು ನೀಡಿದೆ. ಇದು ಜನವರಿ 1 ರಂದು 944 ರೂ.ಗಳಷ್ಟಿತ್ತು, ಇದು ಪ್ರಸ್ತುತ 1488 ರೂ. ನಷ್ಟಿದ್ದು, ಹೊಸ ವರ್ಷದ ಮೊದಲು ನೀವು ಈ ಸ್ಟಾಕ್ ಮೇಲೆ ಹೂಡಿಕೆ ಮಾಡಿದರೆ ಲಾಭಗಳಿಸುವ ಸಾಧ್ಯತೆ ಇದೆ.

ಷೇರು ಮಾರಾಟಕ್ಕೆ ಏನು ಆಫರ್ ಇದೆ?
ಆಫರ್ ಫಾರ್ ಸೇಲ್ ಸಾರ್ವಜನಿಕ ಕಂಪನಿಗಳಲ್ಲಿನ ಪ್ರವರ್ತಕರು(ಪ್ರೊಮೊಟರ್ಸ್) ತಮ್ಮ ಷೇರುಗಳನ್ನು ಮಾರಾಟ ಮಾಡಬಹುದು ಮತ್ತು ವಿನಿಮಯಕ್ಕಾಗಿ ಬಿಡ್ಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ಪಾರದರ್ಶಕ ರೀತಿಯಲ್ಲಿ ತಮ್ಮ ಪಾಲನ್ನು ಕಡಿಮೆ ಮಾಡಬಹುದು. ಪ್ರವರ್ತಕರು ಐಆರ್‌ಸಿಟಿಸಿಯ 2,40,00,000 ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದ್ದು, ಇದು 15 ಪ್ರತಿಶತದಷ್ಟು ಪಾಲಿಗೆ ಸಮನಾಗಿರುತ್ತದೆ. ಇದಲ್ಲದೆ, ಗ್ರೀನ್ ಶ್ಯು ಆಯ್ಕೆಯ ಮೂಲಕ 80,00,000 ಷೇರುಗಳನ್ನು ಮಾರಾಟ ಮಾಡುವ ಆಯ್ಕೆಯೂ ಇದೆ. ಇದು ಅದರ ಶೇ. 5ರಷ್ಟು ಪಾಲಿಗೆ ಸಮನಾಗಿರುತ್ತದೆ. ಹೂಡಿಕೆದಾರರಿಂದ ಹೆಚ್ಚಿನ ಬೇಡಿಕೆ ಇದ್ದಾಗ ಈ ಆಯ್ಕೆಯನ್ನು ಬಳಸಲಾಗುತ್ತದೆ.

ಪಾಲು ಮಾರಾಟದಿಂದ ಸರ್ಕಾರಕ್ಕೆ ಎಷ್ಟು ಲಾಭ?
ಐಆರ್‌ಸಿಟಿಸಿಯ ತನ್ನ ಒಟ್ಟು 3.2 ಕೋಟಿ ಷೇರುಗಳನ್ನು ಒಎಫ್‌ಎಸ್‌ನಲ್ಲಿ ಸರ್ಕಾರ ಮಾರಾಟ ಮಾಡಲಿದೆ. ಇದು ಕೋವಿಡ್-19 ಬಿಕ್ಕಟ್ಟಿನಿಂದಾಗಿ ಬಳಲುತ್ತಿರುವ ಖಜಾನೆಗೆ 4,374 ಕೋಟಿ ಗಳಿಸುವ ನಿರೀಕ್ಷೆಯಿದೆ.
ಸರ್ಕಾರವು ಪ್ರಸ್ತುತ ಐಆರ್‌ಸಿಟಿಸಿಯಲ್ಲಿ ಶೇ 87.40 ರಷ್ಟು ಪಾಲನ್ನು ಹೊಂದಿದೆ. ಸೆಬಿಯ ಸಾರ್ವಜನಿಕ ಹಿಡುವಳಿ ನಿಯಮಗಳನ್ನು ಪೂರೈಸಲು ಸರ್ಕಾರವು ಕಂಪನಿಯ ತನ್ನ ಪಾಲನ್ನು 75 ಪ್ರತಿಶತಕ್ಕೆ ಇಳಿಸಬೇಕಾಗುತ್ತದೆ.

2019ರಲ್ಲಿ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲಾಗಿದೆ
ಐಆರ್‌ಸಿಟಿಸಿಯನ್ನು 2019 ರ ಅಕ್ಟೋಬರ್‌ನಲ್ಲಿ ಸ್ಟಾಕ್ ಎಕ್ಸ್ಚೇಂಜ್‌ನಲ್ಲಿ ಪಟ್ಟಿ ಮಾಡಲಾಗಿದೆ. ಭಾರತದ ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಅಡುಗೆ ಸೇವೆಗಳು, ಆನ್‌ಲೈನ್ ರೈಲ್ವೆ ಟಿಕೆಟ್‌ಗಳು ಮತ್ತು ಪ್ಯಾಕೇಜ್ ಮಾಡಿದ ಕುಡಿಯುವ ನೀರನ್ನು ಒದಗಿಸಲು ಭಾರತೀಯ ರೈಲ್ವೆ ಅಧಿಕಾರ ಹೊಂದಿರುವ ಏಕೈಕ ಘಟಕವಾದ ಐಆರ್‌ಸಿಟಿಸಿ ಕಂಪನಿಯು ಐಪಿಒ ಮೂಲಕ 645 ಕೋಟಿ ರೂ. ಸಂಗ್ರಹಿಸಿದೆ.