ಜಾಗತಿಕವಾಗಿ ಪ್ರಮುಖವಾದ ಟೆಕ್ ದೈತ್ಯ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮುಂದುವರಿಸಿದೆ. ಗೂಗಲ್, ಮೆಟಾ, ಅಮೆಜಾನ್ ಸೇರಿದಂತೆ ಒಟ್ಟಾಗಿ ಸುಮಾರು 570 ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ. ಈಗಲೂ ಕೂಡಾ ತಮ್ಮ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಅನ್ನು ನೀಡುತ್ತಿದೆ. ಇನ್ನು 2023ರಲ್ಲಿ ಈವರೆಗೆ ಒಟ್ಟಾಗಿ 1,68,918 ಉದ್ಯೋಗಿಗಳನ್ನು ಸಂಸ್ಥೆಯು ಕೆಲಸದಿಂದ ವಜಾಗೊಳಿಸಿದೆ. ಇಷ್ಟು ಜನರನ್ನು ಉದ್ಯೋಗದಿಂದ ವಜಾಗೊಳಿಸಿದ್ದರೂ ಕೂಡಾ ಇನ್ನು ಕೂಡಾ ಈ ಉದ್ಯೋಗ ಕಡಿತ ಸೀಸನ್ ಕೊನೆಯಾಗಿಲ್ಲ, ಕೊನೆಯಾಗುವಂತೆ ಕಾಣುತ್ತಲೂ ಇಲ್ಲ.
ಕಳೆದ ವರ್ಷದಲ್ಲಿ ಆರಂಭವಾದ ಉದ್ಯೋಗ ಕಡಿತ ಪ್ರಕ್ರಿಯೆ ಈಗಲೂ ಮುಂದುವರಿದಿದೆ. ಪ್ರಮುಖವಾಗಿ ಈ ಹಣದುಬ್ಬರದ ಸಂದರ್ಭದಲ್ಲಿ ಸಂಸ್ಥೆಯಲ್ಲಿನ ವೆಚ್ಚವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತದ ಹಾದಿಯನ್ನು ಹಿಡಿದಿದೆ. ಕೆಲವು ಪ್ರದೇಶಗಳಲ್ಲಿ ಅಮೆಜಾನ್ ಹಾಗೂ ಗೂಗಲ್ ಈಗಾಗಲೇ ಉದ್ಯೋಗಿಗಳನ್ನು ವಜಾಗೊಳಿಸಿದೆ. ಆದರೆ ಯುರೋಪಿಯನ್ ದೇಶಗಳಲ್ಲಿ ಅಮೆಜಾನ್ ಹಾಗೂ ಗೂಗಲ್‌ಗೆ ಉದ್ಯೋಗ ಕಡಿತ ಪ್ರಕ್ರಿಯೆ ಅತೀ ಕಷ್ಟಕರವಾಗಿದೆ ಎಂದು ವರದಿಯು ಉಲ್ಲೇಖಿಸಿದೆ.

1 ವರ್ಷದ ವೇತನ ನೀಡುವ ಆಫರ್ ನೀಡಿದ್ದೇಕೆ?
ಯುಎಸ್ ಮೂಲದ ಟೆಕ್ ಸಂಸ್ಥೆಗಳು ಅತೀ ದೊಡ್ಡ ಉದ್ಯೋಗ ಕಡಿತವನ್ನು ಘೋಷಣೆ ಮಾಡಿದ ಬಳಿಕ ಈಗ ಯುರೋಪ್‌ನಲ್ಲಿಉದ್ಯೋಗ ಕಡಿತವನ್ನು ಮಾಡಲು ಮುಂದಾಗಿದೆ. ಆದರೆ ಯುರೋಪ್‌ನಲ್ಲಿ ಮಾತ್ರ ಈ ಸಂಸ್ಥೆಗಳಿಗೆ ಹಲವಾರು ಕಾನೂನಾತ್ಮಕ ಸಮಸ್ಯೆಗಳು ಎದುರಾಗಿದೆ. ಕಾರ್ಮಿಕ ರಕ್ಷಣಾ ನಿಯಮದಿಂದಾಗಿ ಯುರೋಪ್‌ನಲ್ಲಿ ಉದ್ಯೋಗ ಕಡಿತವನ್ನು ಮಾಡಲು ಈ ಟೆಕ್ ದೈತ್ಯಗಳಿಗೆ ಸಾಧ್ಯವಾಗುತ್ತಿಲ್ಲ. ಆದರೆ ವೆಚ್ಚ ಕಡಿತ ಮಾಡಬೇಕಾದರೆ ಉದ್ಯೋಗ ಕಡಿತವೇ ಪರಿಹಾರ ಎಂಬುವುದು ಈ ಸಂಸ್ಥೆಗಳ ನಿಲುವಾಗಿದೆ. ಅದಕ್ಕಾಗಿ ಅತೀ ದೊಡ್ಡ, ಉತ್ತಮ ಆಫರ್ ಅನ್ನು ಉದ್ಯೋಗಿಗಳಿಗೆ ಸಂಸ್ಥೆಯು ನೀಡಿದೆ.
ಕಾನೂನು ಪ್ರಕಾರ, "ಉದ್ಯೋಗ ಕಡಿತವನ್ನು ಮಾಡುವ ಮುನ್ನ ಸಂಸ್ಥೆಗಳು ಹಲವಾರು ಪ್ರಕ್ರಿಯೆಗಳನ್ನು ಪಾಲನೆ ಮಾಡಬೇಕಾಗುತ್ತದೆ. ಡೇಟಾ ಸಂಗ್ರಹಣೆ, ಚರ್ಚೆ ಹಾಗೂ ಮನವಿ ಸೇರಿದಂತೆ ಈ ಪ್ರಕ್ರಿಯೆಯು ಅತೀ ಅಧಿಕ ಸಮಯವನ್ನು ತೆಗೆದುಕೊಳ್ಳುತ್ತದೆ." ಜರ್ಮನಿ ಹಾಗೂ ಫ್ರಾನ್ಸ್‌ನಲ್ಲಿ ಉದ್ಯೋಗ ಕಡಿತಕ್ಕಾಗಿ ಗೂಗಲ್ ಈ ಕೌನ್ಸಿಲ್ ತಂಡಗಳ ಸಹಾಯವನ್ನೇ ಕೋರಿದೆ. ವರದಿ ಪ್ರಕಾರ ಈ ತಲೆ ಬಿಸಿಯನ್ನು ಕಡಿಮೆ ಮಾಡಲೆಂದು ಫ್ರಾನ್ಸ್‌ನಲ್ಲಿ ಗೂಗಲ್ ಪೋಷಕ ಸಂಸ್ಥೆ ಆಲ್ಫಾಬೇಟ್ ಉದ್ಯೋಗಿಗಳು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿ, ಹೀಗೆ ರಾಜೀನಾಮೆ ನೀಡಿದರೆ ಅಧಿಕ ಮೊತ್ತವನ್ನು ನಿಮಗೆ ನೀಡಲಾಗುವುದು ಎಂದು ಮನವಿ ಮಾಡಿಕೊಂಡಿದೆ.
ಇನ್ನು ಅಮೆಜಾನ್ ಸಂಸ್ಥೆಯು 5ರಿಂದ 8 ವರ್ಷಗಳ ವೃತ್ತಿ ಅನುಭವ ಹೊಂದಿರುವ ಹಿರಿಯ ಉದ್ಯೋಗಿಗಳು ಕೆಲಸಕ್ಕೆ ತಾವಾಗಿಯೇ ರಾಜೀನಾಮೆಯನ್ನು ನೀಡಿದರೆ ಒಂದು ವರ್ಷದ ವೇತನವನ್ನು ನೀಡಲಾಗುತ್ತದೆ ಎಂಬ ಆಫರ್ ನೀಡಿದೆ. ಇನ್ನು ಹೀಗೆ ರಾಜೀನಾಮೆ ನೀಡುವವರನ್ನು ಶೀಘ್ರವೇ ರಿಲೀವ್ ಮಾಡಲಾಗುತ್ತದೆ ಮತ್ತು ಅವರಿಗೆ ಒಂದು ವರ್ಷದ ವೇತನದೊಂದಿಗೆ ಬೋನಸ್ ನೀಡಲಾಗುತ್ತದೆ ಎಂಬ ಆಫರ್ ಅನ್ನು ಅಮೆಜಾನ್ ನೀಡಿದೆ.
ಜಮರ್ನಿಯಲ್ಲಿ ಉದ್ಯೋಗ ಕಡಿತ ವೇಳೆ ಕೆಲಸ ಕಳೆದುಕೊಂಡು ಈಗ ನಿರ್ದಿಷ್ಟ ಅವಧಿಯ ಕಾರ್ಯನಿರ್ವಹಣೆ ಮಾಡುತ್ತಿರುವವರು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿ ಎಂದು ಅಮೆಜಾನ್ ಕೇಳಿಕೊಂಡಿದೆ. ಉನ್ನು ಬೇರೆ ದೇಶಗಳಲ್ಲಿ ಒಂದೊಂದು ನಿಯಮ ಇರುತ್ತದೆ, ಅದಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಣೆ ಮಾಡಬೇಕಾಗಿದೆ. "ನಾವು ಅತೀ ಸೂಕ್ಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದೇವೆ, ಯಾವೆಲ್ಲ ದೇಶಗಳಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತದೆಯೋ ಅಲ್ಲಿ ಅತೀ ಸೂಕ್ಮವಾಗಿ ನಾವು ಪ್ರಕ್ರಿಯೆ ನಡೆಸುತ್ತಿದ್ದೇವೆ," ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ.


Click it and Unblock the Notifications