ಜನವರಿ ತಿಂಗಳಲ್ಲಿ ಗೂಗಲ್‌ನಲ್ಲಿ 12 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅಂದರೆ ಗೂಗಲ್‌ನ ಸಂಪೂರ್ಣ ಉದ್ಯೋಗಿಗಳ ಪೈಕಿ ಶೇಕಡ 6ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಆದರೆ ಇಷ್ಟು ಉದ್ಯೋಗ ಕಡಿತ ಸಾಲದು ಇನ್ನೂ ಕೂಡಾ ಉದ್ಯೋಗ ಕಡಿತ ಮಾಡಲಾಗುವುದು ಎಂಬ ಸುಳಿವನ್ನು ಗೂಗಲ್ ಸಿಇಒ ಸುಂದರ್ ಪಿಚೈ ನೀಡಿದ್ದಾರೆ. ವಾಲ್‌ಸ್ಟೀಟ್ ಜರ್ನಲ್‌ನ ಸಂದರ್ಶನದಲ್ಲಿ ಸುಂದರ್ ಪಿಚೈ ಈ ಸುಳಿವು ನೀಡಿದ್ದಾರೆ.
ಜನವರಿಯಲ್ಲಿ ಸುಮಾರು 12000 ಮಂದಿಯನ್ನು ಗೂಗಲ್ ವಜಾಗೊಳಿಸಿರುವುದು ಒಂದು ಆಶ್ಚರ್ಯಕರ ಬೆಳವಣಿಗೆಯಾಗಿದೆ. ಹಲವಾರು ಉದ್ಯೋಗಿಗಳಿಗೆ ಇದೊಂದು ಶಾಕಿಂಗ್ ಬೆಳವಣಿಗೆಯಾಗಿದೆ. ಆದರೆ ಈಗ ಮತ್ತೆ ಉದ್ಯೋಗ ಕಡಿತದ ಸುದ್ದಿ ಕೇಳಿ ಬಂದಿದೆ. "ನಮ್ಮ ಸಂಸ್ಥೆಯಲ್ಲಿ 12000 ಉದ್ಯೋಗಿಗಳ ವಜಾಗೊಳಿಸುವ ಬಗ್ಗೆ ನಾವು ಈಗಾಗಲೇ ಘೋಷಣೆ ಮಾಡಿದ್ದೇವೆ. ಈ ಬಗ್ಗೆ ಈಗಾಗಲೇ ಯುಎಸ್‌ನ ಉದ್ಯೋಗಿಗಳಿಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗಿದೆ," ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

"ಕೆಲ ದೇಶಗಳಲ್ಲಿ ಈ ಉದ್ಯೋಗ ಕಡಿತ ಪ್ರಕ್ರಿಯೆ ಕೊಂಚ ವಿಳಂಬವಾಗುತ್ತಿದೆ. ಬೇರೆ ಬೇರೆ ದೇಶದಲ್ಲಿ ಅದರದ್ದೆ ಆದ ಒಂದು ನಿಯಮಗಳು ಇರುತ್ತದೆ. ಕೆಲವು ದೇಶಗಳಲ್ಲಿ ಈ ಪ್ರಕ್ರಿಯೆ ದೀರ್ಘವಾಗಿದೆ. ಅಲ್ಲಿನ ಕಾನೂನು ಹಾಗೂ ನಿಯಮ ಅದಕ್ಕೆ ಕಾರಣವಾಗಿದೆ," ಎಂದು ಕೂಡಾ ಗೂಗಲ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ. ಡಬ್ಲ್ಯೂಎಸ್‌ಜೆ ಜೊತೆ ನಡೆದ ಸಂದರ್ಶನದಲ್ಲಿ ಈ ಬಗ್ಗೆ ಮಾತಾನಾಡುತ್ತಾ ಗೂಗಲ್ ಸಿಇಒ ಮಾಹಿತಿ ನೀಡಿದ್ದಾರೆ.
ಡಬ್ಲ್ಯೂಎಸ್‌ಜೆ ಜೊತೆ ನಡೆದ ಸಂದರ್ಶನದಲ್ಲಿ ಸುಂದರ್ ಪಿಚೈ ಗೂಗಲ್‌ನ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ಬಾರ್ಡ್, ಜಿಮೇಲ್‌ನ ಸಾಮರ್ಥ್ಯ, ಗೂಗಲ್‌ನ ಡಾಕ್ಸ್ ಮತ್ತು ಇತರೆ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. "ನಮ್ಮಲ್ಲಿರುವ ಈ ಅವಕಾಶಗಳ ಮೇಲೆ ನಾವು ತುಂಬಾ ಗಮನಹರಿಸಿದ್ದೇವೆ. ಇನ್ನು ಕೂಡಾ ಹಲವಾರು ಕೆಲಸಗಳು ಬಾಕಿ ಉಳಿದಿದೆ ಎಂಬುವುದು ನಮ್ಮ ಭಾವನೆ," ಎಂದು ಗೂಗಲ್ ಸಿಇಒ ಹೇಳಿದ್ದಾರೆ.
ಹಾಗೆಯೇ ಕೃತಕ ಬುದ್ಧಿಮತ್ತೆ (AI) ಬಗ್ಗೆ ಗಮನ ಹರಿಸಲಾಗುತ್ತದೆ. ನಾವು ಎಲ್ಲಿ ಸಾಧ್ಯವೋ ಅಲ್ಲಿ, ನಾವು ಖಂಡಿತವಾಗಿಯೂ ಆದ್ಯತೆ ನೀಡುತ್ತೇವೆ. ನಮ್ಮ ಉದ್ಯೋಗಿಗಳನ್ನು ಪ್ರಮುಖ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗುವುದು. ಉದ್ಯೋಗಕ್ಕೆ ಸಂಬಂಧಿಸಿದ ನಮ್ಮ ಈ ಕಾರ್ಯಗಳು ನಿರಂತರ ನಡೆಯುವ ಪ್ರಕ್ರಿಯೆಯಾಗಿದೆ," ಎಂದು ತಿಳಿಸಿದ್ದಾರೆ.
ಸಂಸ್ಥೆಯು ಶೇಕಡ 20ರಷ್ಟು ದಕ್ಷತೆಯನ್ನು ಹೇಗೆ ಹೆಚ್ಚಿಸುವ ನಿರೀಕ್ಷೆಯಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಗೂಗಲ್ ಸಿಇಒ ಸುಂದರ್ ಪಿಚೈ ಕಂಪನಿಯು ತನ್ನ ವೆಚ್ಚದ ಮೂಲವನ್ನು ಶಾಶ್ವತವಾಗಿ ಮರು-ಇಂಜಿನಿಯರ್ ಮಾಡುವ ಪ್ರಯತ್ನದಲ್ಲಿದೆ, ನಾವು ಎಲ್ಲ ಅಂಶವನ್ನು ಸರಿಯಾಗಿ ಪರಿಶೀಲನೆ ಮಾಡುತ್ತೇವೆ. ಸುಧಾರಣೆ ಕಂಡರೂ ಇನ್ನಷ್ಟು ಕೆಲಸಗಳು ಆಗಬೇಕಿದೆ ಎಂದು ಒತ್ತಿ ಹೇಳಿದ್ದಾರೆ.
"ನಾವು ವಿವಿಧ ರೀತಿಯಲ್ಲಿ ಪ್ರಕ್ರಿಯೆ ಸಂಪೂರ್ಣಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಹಾಗೆಯೇ ನಾವು ಏನು ಮಾಡುತ್ತಿದ್ದೇವೆ ಎಂಬುವುದನ್ನು ಸರಿಯಾಗಿ ನೋಡಿ, ಚಿಂತನೆ ಮಾಡುತ್ತಿದ್ದೇವೆ. ನಾವು ಪುನರ್ ರಚನೆಯ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ನಾವು ಖಂಡಿತವಾಗಿಯೂ ಯಾವುದರಿಂದ ಸಂಸ್ಥೆಗೆ ಲಾಭ, ಯಾವುದ ಬಾಳಿಕೆ ಬರುತ್ತದೆ ಎಂಬುವುದನ್ನು ನೋಡುತ್ತೇವೆ. ನಾವು ಪ್ರಗತಿಯಿಂದ ಸಂತಸಗೊಂಡಿದ್ದೇವೆ, ಆದರೆ ಇನ್ನೂ ಹೆಚ್ಚಿನ ಕೆಲಸಗಳು ಉಳಿದಿವೆ," ಎಂದು ವಿವರಿಸಿದ್ದಾರೆ.


Click it and Unblock the Notifications