Google layoffs: ಗೂಗಲ್(Google)ತನ್ನ ಪ್ಲಾಟ್‌ಫಾರ್ಮ್ಸ್ ಮತ್ತು ಡಿವೈಸಸ್ ಘಟಕದಲ್ಲಿ ನೂರಾರು ಉದ್ಯೋಗಿಗಳನ್ನು ಉದ್ಯೋಗದಿಂದ ವಜಾ ಮಾಡಿದೆ ಎಂದು ದಿ ಇನ್ಫಾರ್ಮೇಶನ್ ಎನ್ನುವ ವೆಬ್ಸೈಟ್ನಲ್ಲಿ ಈ ಕುರಿತು ವರದಿ ಮಾಡಿದೆ.
ಹೌದು,ಗೂಗಲ್ ಸಂಸ್ಥೆಯಲ್ಲಿ ಹೊಸ ಸುತ್ತಿನ ಲೇ ಆಫ್ ನಡೆಯುತ್ತಿದೆ. ಅದರ ಪ್ಲಾಟ್‌ಫಾರ್ಮ್ಸ್ ಮತ್ತು ಡಿವೈಸ್ ಯೂನಿಟ್ನಿಂದ ನೂರಾರು ಉದ್ಯೋಗಿಗಳನ್ನು ಲೇ ಆಫ್ ಮಾಡಲಾಗುತ್ತಿದೆ.ಈ ಘಟಕವು ಆಂಡ್ರಾಯ್ಡ್ ಸಾಫ್ಟ್‌ವೇರ್, ಪಿಕ್ಸೆಲ್ ಫೋನ್ಸ್ ಮತ್ತು ಕ್ರೋಮ್ ಬ್ರೌಸರ್‌ನಂತಹ ಪ್ರಮುಖ ಉತ್ಪನ್ನಗಳನ್ನು ನಿರ್ವಹಿಸುತ್ತದೆ.

ಈ ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಗೂಗಲ್ ಅದೇ ಘಟಕದ ಕಾರ್ಮಿಕರಿಗೆ ಸ್ವಯಂಪ್ರೇರಿತ ನಿರ್ಗಮನ ಯೋಜನೆಯಕೆಲವೇ ತಿಂಗಳುಗಳ ನಂತರ ಈ ಉದ್ಯೋಗ ವಜಾಗಳು ಕಂಡುಬಂದಿವೆ.ಆದರೆ ಎಷ್ಟು ಉದ್ಯೋಗಿಗಳನ್ನು ಕೆಲಸದಿಂದ ತಗೆದು ಹಾಕಲಾಗುತ್ತಿದೆ ಎಂಬ ಮಾಹಿತಿ ಮಾತ್ರ ಇನ್ನೂ ತಿಳಿದುಬಂದಿಲ್ಲ.
ಗೂಗಲ್‌ನ ಪ್ರಸ್ತಾವನೆಯ ಹೇಳಿರುವ ಪ್ರಕಾರ ಈ ಕ್ರಮವು ಕಾರ್ಯಾಚರಣೆಯನ್ನು ಸರಳಗೊಳಿಸಲು ಮತ್ತು ಸಂಸ್ಥೆಯ ಚುರುಕನ್ನು ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಮಾಡಲಾಗಿದೆ. ಗೂಗಲ್ ಯಾವದಾದರೂ ಆಂತರಿಕ ಬದಲಾವಣೆ ಅಥವಾ ಉದ್ದೇಶಿತ ನಿರ್ಣಯವನ್ನು ಘೋಷಿಸಿರುವಂತಿದೆ.
ಗೂಗಲ್ ಮ್ಯಾನೇಜ್ಮೆಂಟ್ ಹೇಳಿರುವುದು ಏನು..?
ಗೂಗಲ್ ಪ್ಲಾಟ್ಫಾರ್ಮ್ ಮತ್ತು ಡಿವೈಸ್ ಯೂನಿಟ್ನಲ್ಲಿರುವ ಉದ್ಯೋಗಿಗಳು ಆಂಡ್ರಾಯ್ಡ್ ಸಾಫ್ಟ್‌ವೇರ್, ಪಿಕ್ಸೆಲ್ ಫೋನ್, ಕ್ರೋಮ್ ಬ್ರೌಸರ್ ಇತ್ಯಾದಿ ಉತ್ಪನ್ನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೂರಾರು ಮಂದಿಯನ್ನು ಕೆಲಸ ಬಿಡುವಂತೆ ಗೂಗಲ್ ಮ್ಯಾನೇಜ್ಮೆಂಟ್ ತಿಳಿಸಿದೆ ಎಂದು ವರದಿಗಳು ಆಗುತ್ತಿವೆ.
ಕಳೆದ ವರ್ಷ ಪ್ಲಾಟ್‌ಫಾರ್ಮ್‌ಗಳು ಮತ್ತು ಡಿವೈಸಸ್ ತಂಡಗಳನ್ನು ಒಟ್ಟಾಗೆ ಸೇರಿಸುವುದರಿಂದ ನಾವು ಹೆಚ್ಚು ಚುರುಕಾಗಲು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವತ್ತ ಗಮನಹರಿಸಿದ್ದೇವೆ ಮತ್ತು ಜನವರಿಯಲ್ಲಿ ನಾವು ನೀಡಿದ ಸ್ವಯಂಪ್ರೇರಿತ ನಿರ್ಗಮನ ಕ್ರಮದ ಜೊತೆಗೆ ಕೆಲವು ಉದ್ಯೋಗದಿಂದ ವಜಾಗೊಳಿಸಿದ್ದೇವೆ ಎಂದು ಗೂಗಲ್ ವಕ್ತಾರರು ಹೇಳಿದ್ದರು.
ಒಟ್ಟಾರೆ, ಗೂಗಲ್ ಈ ನಿರ್ಧಾರವು ತನ್ನ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಮತ್ತು ವೆಚ್ಚವನ್ನು ಕಡಿತಗೊಳಿಸುವ ಗೂಗಲ್‌ನ ಪ್ರಯತ್ನದ ಭಾಗವಾಗಿದೆ. ಅನೇಕ ತಂತ್ರಜ್ಞಾನ ದೈತ್ಯರಂತೆ, ಗೂಗಲ್ ಇತ್ತೀಚಿನ ತಿಂಗಳುಗಳಲ್ಲಿ ತನ್ನ ತಂಡದ ರಚನೆಗಳನ್ನು ಪುನರ್ವಿಮರ್ಶಿಸುತ್ತಿದೆ ಲೇ ಆಫ್ ಇತ್ಯಾದಿಗಳು ನಡೆಯುತ್ತಿವೆ.
2023ರಲ್ಲಿ ಟೆಕ್ ಕ್ಷೇತ್ರದಲ್ಲಿ ಲೇಆಫ್ಸ್ (Layoffs) ಒಂದು ದೊಡ್ಡ ಟ್ರೆಂಡ್ ಆಗಿತ್ತು, ಮತ್ತು ಗೂಗಲ್, ಮೆಟಾ, ಅಮೇಜಾನ್, ಮೈಕ್ರೋಸಾಫ್ಟ್, ಮತ್ತು ಇತರ ಹಲವಾರು ಟೆಕ್ ದೈತ್ಯ ಸಂಸ್ಥೆಗಳು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದವು.
ಗೂಗಲ್ 12,000 ಮಂದಿ ಕೆಲಲದಿಂದ ವಜಾಗೊಳಿಸಿತು
2023ರ ಜನವರಿಯಲ್ಲಿ, ಗೂಗಲ್ ತನ್ನ ಒಟ್ಟು ಉದ್ಯೋಗಿಗಳ ಶೇಕಡಾ 6 ಅನ್ನು ಲೇ ಆಫ್ ಮಾಡಿತು, ಇದಕ್ಕೆ ಅಂದಾಜು 12,000 ಉದ್ಯೋಗಿಗಳು ಉದ್ಯೋಗದಿಂದ ವಂಜಿತರದ್ದರು. ಇದಕ್ಕೆ ಗೂಗಲ್‌ನ CEO ಸುಂದರ್ ಪಿಚೈ, ಈ ನಿರ್ಧಾರವನ್ನು ಕಂಪನಿಯ "ಪರಿಸ್ಥಿತಿಗೆ ಹೊಂದಾಣಿಕೆಯಾಗಿ" ಹಾಗೂ ಹೊಸ ಆದ್ಯತೆಗಳು ಮತ್ತು AI-ಆಧಾರಿತ ಉದ್ದೇಶಗಳ ಹಿನ್ನೆಲೆಯಾಗಿ ಉದ್ಯೋಗದಿಂದ ತಗೆದಿದ್ದೇವೆ ಎಂದು ಕಾರಣವನ್ನು ಕೊಟ್ಟಿದ್ದರು. .
ಇನ್ನಿತರ ಪ್ರಮುಖ ಕಂಪನಿಗಳ ಲೇಆಫ್ಸ್
ಮೆಟಾ (Meta): ಸುಮಾರು 21,000 ಮಂದಿಯನ್ನು 2023ರಲ್ಲಿ ಎರಡು ಹಂತಗಳಲ್ಲಿ ಲೇಆಫ್ ಮಾಡಿತು.
ಅಮೆಜಾನ್ (Amazon): 27,000+ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತು.
ಮೈಕ್ರೋಸಾಫ್ಟ್ (Microsoft): ಸುಮಾರು 10,000 ಉದ್ಯೋಗಿಗಳು ಲೇಆಫ್‌ಗೆ ಒಳಗಾದರು
2024 ಮತ್ತು ಈಗ 2025ರಲ್ಲೂ ಗೂಗಲ್ ಲೇ ಆಫ್ ಮಾಡಿದೆ. ಸಾವಿರಾರು ಸಂಖ್ಯೆಯಲ್ಲಲ್ಲವಾದರೂ, ನೂರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ.
ಕೆಲವು ತಿಂಗಳ ಹಿಂದೆ ಇನ್ಫೋಸಿಸ್ ಕೂಡ ಉದ್ಯೋಗಿಗಳನ್ನು ವಜಾ ಮಾಡಿ ಹೆಚ್ಚಿನ ಚರ್ಚೆಗಳಿಗೆ ತುತ್ತು ಆಗಿತ್ತು.ಯಾವುದೇ ಕಂಪನಿ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ್ದರೆ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ.


Click it and Unblock the Notifications