ಭಾರತದ ಮಾರುಕಟ್ಟೆಗೆ ಪ್ರತಿ ತಿಂಗಳು ಹೊಸ ಹೊಸ ಮೊಬೈಲ್‌ಗಳು ಲಾಂಚ್ ಆಗುತ್ತವೆ. ಈ ಮೊಬೈಲ್‌ಗಳು ಗ್ರಾಹಕರನ್ನು ಸೆಳೆಯುವಲ್ಲಿ ಸಫಲವಾಗುತ್ತಿವೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಮೈಗೂಡಿಸಿಕೊಂಡು ಬರುವ ಈ ಮೊಬೈಲ್ ಆಕರ್ಷಕ ಲುಕ್ ಹಾಗೂ ಭರ್ಜರಿ ಫೀಚರ್ಸ್ ಹೊಂದಿರುತ್ತವೆ. ಇದೇ ತಿಂಗಳು 17ಕ್ಕೆ ಮಾರುಕಟ್ಟೆಗೆ ಇನ್ನೊಂದು ಮೊಬೈಲ್ ಕಾಲಿಡಲಿದೆ.
ಚೀನಾ ಕಂಪನಿಗಳು ಮೊಬೈಲ್ ಮಾರುಕಟ್ಟೆಯಲ್ಲಿ ತಮ್ಮದೇ ಆದ ಛಾಪು ಹೊಂದಿವೆ. ಇದರೊಂದಿಗೆ ಬೇರೆ ಬ್ರ್ಯಾಂಡ್ ಮೊಬೈಲ್‌ಗಳು ಸಹ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ. ಈ ಸಾಲಿನಲ್ಲಿ ನಿಲ್ಲು ಬ್ರ್ಯಾಂಡ್ ಗೂಗಲ್. ಅದೆಷ್ಟೋ ಮೊಬೈಲ್‌ಗಳನ್ನು ಲಾಂಚ್ ಮಾಡಿರುವ ಗೂಗಲ್ ಈಗ ಮತ್ತೊಂದು ಹೊಸ ಮೊಬೈಲ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಈ ಮೊಬೈಲ್‌ನ ಪ್ರಿ ಬುಕ್ಕಿಂಗ್ ದಿನಾಂಕ ಬಹಿರಂಗವಾಗಿದೆ.

ಗೂಗಲ್ ವಿಶ್ವದಲ್ಲಿ ಆಗಸ್ಟ್‌ನಲ್ಲಿ ಗೂಗಲ್ 9 ಸರಣಿಯ ಫೋನ್ ಬಿಡುಗಡೆ ಮಾಡಿತ್ತು. ಪಿಕ್ಸಲ್ 9, ಪಿಕ್ಸಲ್ 9 ಪ್ರೊ, ಪಿಕ್ಸಲ್ ಪ್ರೊ ಎಕ್ಸ್‌ಎಲ್, ಪಿಕ್ಸಲ್ 9 ಪ್ರೊ ಫೋಲ್ಡ್ ಗ್ರಾಹಕರನ್ನು ಸೆಳೆಯುತ್ತಿವೆ. ಭಾರತದ ಮಾರುಕಟ್ಟೆಯಲ್ಲಿ ಈ ಸರಣಿಯ ಪ್ರೊ ಮಾದರಿಯ ಮೊಬೈಲ್‌ಗಳನ್ನು ಬಿಟ್ಟರೆ ಉಳಿದೆಲ್ಲಾ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಸುಮಾರು ಎರಡು ತಿಂಗಳ ಬಳಿಕ ಕಂಪನಿ ಪ್ರೊ ಮೊಬೈಲ್‌ಗಳ ಪ್ರಿ-ಬುಕಿಂಗ್ ಅನ್ನು ಪ್ರಾರಂಭಿಸಲು ನಿರ್ಧರಿಸಿದೆ.
ಗೂಗಲ್‌ನ ಈ ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಮುಂಗಡ ಬುಕಿಂಗ್‌ಗಾಗಿ ಲೀಸ್ಟ್ ಮಾಡಲಾಗಿದೆ. ಈ ಫೋನ್ ಅನ್ನು ಅಕ್ಟೋಬರ್ 17 ರಿಂದ ಪ್ರಿ ಬುಕ್ಕಿಂಗ್ ಮಾಡಬಹುದಾಗಿದೆ. ಇದರ ಸ್ಟೋರೆಜ್ 16ಜಿಬಿ ಇರಲಿದ್ದು, 256 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರಲಿದೆ. ಈ ಫೋನ್ ಒಂದೇ ರೂಪಾಂತರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅಂದಹಾಗೆ ಈ ಫೋನ್ ಬೆಲೆ 1,09,999 ಆಗಿರಲಿದೆ. ಈ ಫೋನ್ ಐದು ವಿಭಿನ್ನ ಬಣ್ಣಗಳಲ್ಲಿ ಗ್ರಾಹಕರ ಸೆಳೆಯಲು ಸಿದ್ಧವಾಗಿದೆ.

ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ?
ಗೂಗಲ್ ಈ ಸ್ಮಾರ್ಟ್ ಫೋನ್ 6.3 ಇಂಚಿನ 1.5ಕೆ ಆಕ್ಟುವಾ ಒಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ದರವನ್ನು ಹೊಂದಿದೆ. ಈ ಫೋನ್ 1300 ನಿಟ್‌ಗಳ ಗರಿಷ್ಠ ಹೊಳಪನ್ನು ನೀಡುತ್ತದೆ. ಇದರಲ್ಲಿ ಗೂಗಲ್ ಟೆನ್ಸರ್ ಜಿ4 ಪ್ರೊಸೆಸರ್ ಮತ್ತು ಟೈಟಾನ್ ಎಂ2 ಸೆಕ್ಯುರಿಟಿ ಚಿಪ್ ನೀಡಿದ್ದು, ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಅಲ್ಲದೆ 4,700mAh ಬ್ಯಾಟರಿ ಇರಲಿದೆ. ಇದು 45 ವ್ಯಾಟ್ ವೈಯರ್ಡ್ ಮತ್ತು ವೇಗದ ವೈರ್‌ಲೆಸ್ ಚಾರ್ಜಿಂಗ್ ವಿಶೇಷತೆಗಳನ್ನು ಹೊಂದಿದೆ.
ಈ ಫೋನ್ ಹಿಂಬಾಗ ಸಹ ಆಕರ್ಷಕವಾಗಿದೆ. ಮೂರು ಕ್ಯಾಮೆರಾ ಸೆಟಪ್‌ಗಳನ್ನು ಇದು ಹೊಂದಿದೆ. ಪ್ರೈಮರಿ 50 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿದ್ದು, 48 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್ ಹಾಗೂ 48MP ಪೆರಿಸ್ಕೋಪ್ ಕ್ಯಾಮೆರಾ ಲಭ್ಯವಿದೆ. ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 42 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗುತ್ತದೆ.


Click it and Unblock the Notifications