ಕೊಂಚ ಸಮಯ ಉದ್ಯೋಗ ಕಡಿತದ ಸುದ್ದಿ ಕೇಳುಬಂದಿರಲಿಲ್ಲ. ಆದರೆ ಅಷ್ಟಕ್ಕೇ ಎಲ್ಲ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ ನಿಂತಿದೆ ಎಂದುಕೊಳ್ಳಬೇಡಿ. ಈಗ ಗೂಗಲ್ ಉದ್ಯೋಗ ನೇಮಕಾತಿ ಮಾಡುವವರನ್ನೇ ಕೆಲಸದಿಂದ ವಜಾಗೊಳಿಸಿದೆ. ಹೌದು, ಗೂಗಲ್ ಬುಧವಾರ ಮತ್ತೊಂದು ಸುತ್ತಿನ ಉದ್ಯೋಗ ಕಡಿತ ಪ್ರಕ್ರಿಯೆಯನ್ನು ನಡೆಸಿದೆ.
ದಿನದ ಅಂತ್ಯದ ವೇಳೆಗೆ ನೂರಾರು ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ ಎಂದು ತನ್ನ ನೇಮಕಾತಿದಾರರಿಗೆ ತಿಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಒಂದು ಹಂತದಲ್ಲಿ 3,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದ ಗೂಗಲ್‌ನ ನೇಮಕಾತಿ ಗುಂಪು, ಈಗಾಗಲೇ ಉದ್ಯೋಗ ಕಡಿತದಿಂದಾಗಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. '

ಈ ಉದ್ಯೋಗ ಕಡಿತವು ಗೂಗಲ್ ಮತ್ತು ಅದರ ಮೂಲ ಕಂಪನಿಯಾದ ಆಲ್ಫಾಬೆಟ್, ಈ ವರ್ಷ ಕಂಪನಿಯಲ್ಲಿ ಹಲವಾರು ಬಾರಿ ಉದ್ಯೋಗ ಕಡಿತವನ್ನು ಮಾಡಿದೆ. ಹಾಗೆಯೇ ಕೃತಕ ಬುದ್ಧಿಮತ್ತೆ ಅಥವಾ ಎಐನಲ್ಲಿ ಹೂಡಿಕೆಯನ್ನು ಗೂಗಲ್ ಕಂಪನಿಯು ದ್ವಿಗುಣಗೊಳಿಸಿದೆ ಎಂದು ವರದಿ ಹೇಳುತ್ತದೆ.
ದಿ ನ್ಯೂಯಾರ್ಕ್ ಟೈಮ್ಸ್ ಪರಿಶೀಲಿಸಿದ ಆಂತರಿಕ ಗೂಗಲ್ ಮೆಸೇಜಿಂಗ್ ಬೋರ್ಡ್‌ನಲ್ಲಿನ ಪೋಸ್ಟ್‌ನ ಪ್ರಕಾರ, ನೇಮಕಾತಿದಾರರು ಮತ್ತು ಸಂಬಂಧಿತ ಸಿಬ್ಬಂದಿ ಸದಸ್ಯರನ್ನು ಈ ಹಿಂದೆ ಉದ್ಯೋಗ ಕಡಿತವನ್ನು ಘೋಷಿಸಲು ಕೊನೆಯ ನಿಮಿಷಕ್ಕೆ ಆಹ್ವಾನಿಸಲಾಗಿತ್ತು.
ನೇಮಕಾತಿಯ ಉಪಾಧ್ಯಕ್ಷರಾದ ಬ್ರಿಯಾನ್ ಒಂಗ್, ಕೆಲಸದಿಂದ ವಜಾಗೊಂಡವರು ಕಚೇರಿಯಲ್ಲಿದ್ದರೆ ಮನೆಗೆ ಹೋಗಬಹುದು, ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ, ಕೆಲಸ ನಿಲ್ಲಿಸಬಹುದು ಎಂದು ಹೇಳಿದ್ದರು. "ಕಂಪನಿಯ ನೇಮಕಾತಿಗಾಗಿ ವಿನಂತಿಗಳ ಪ್ರಮಾಣವು ಕಡಿಮೆಯಾದ ಕಾರಣ, ನಮ್ಮ ನೇಮಕಾತಿ ತಂಡದ ಗಾತ್ರವನ್ನು ಕಡಿಮೆ ಮಾಡಲು ನಾವು ಕಠಿಣ ನಿರ್ಧಾರವನ್ನು ಮಾಡಿದ್ದೇವೆ," ಎಂದು ಗೂಗಲ್ ವಕ್ತಾರ ಕೋರ್ಟೇನೆ ಮೆನ್ಸಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ನಾವು ಹೇಳಿದಂತೆ, ನಾವು ಉನ್ನತ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾರ್ಯ ಮಾಡುವವರಿಗಾಗಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ನಮ್ಮ ಒಟ್ಟಾರೆ ನೇಮಕಾತಿಯ ವೇಗವನ್ನು ಅರ್ಥಪೂರ್ಣವಾಗಿ ನಿಧಾನಗೊಳಿಸುತ್ತೇವೆ," ಎಂದು ಕೂಡಾ ಮಾಹಿತಿ ನೀಡಿದ್ದಾರೆ.
ಈ ಉದ್ಯೋಗ ಕಡಿತವು ಸಂಸ್ಥೆಯಲ್ಲಿ ಈ ಹಿಂದೆ ಮಾಡಲಾದ ಉದ್ಯೋಗ ಕಡಿತದ ಭಾಗವಲ್ಲ ಎಂದು ಕೂಡಾ ವರದಿಯಾಗಿದೆ. ಜನವರಿ ತಿಂಗಳಲ್ಲಿ ಗೂಗಲ್‌ನಲ್ಲಿ 12 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅಂದರೆ ಗೂಗಲ್‌ನ ಸಂಪೂರ್ಣ ಉದ್ಯೋಗಿಗಳ ಪೈಕಿ ಶೇಕಡ 6ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ.
ಜಾಗತಿಕವಾಗಿ ಉದ್ಯೋಗ ಕಡಿತದ ಪರ್ವ ಮುಂದುವರಿದಿರುವಂತೆ, ಗೂಗಲ್‌ನ ಮಾತೃ ಕಂಪನಿಯಾದ ಆಲ್ಬಾಬೆಟ್ ಇದೀಗ ತನ್ನ ಪ್ರಧಾನ ಕಚೇರಿಯಲ್ಲಿದ್ದ ಕೆಫೆಟೇರಿಯಾಗಳನ್ನು ಸ್ವಚ್ಚಗೊಳಿಸುವ ರೋಬೋಟ್‌ಗಳನ್ನು ಕೂಡಾ ಕೆಲಸದಿಂದ ತೆಗೆದು ಹಾಕಿದೆ. ಆಲ್ಬಾಬೆಟ್‌ನ "ಎವರಿಡೇ ರೋಬೋಟ್ಸ್" ಪ್ರಾಜೆಕ್ಟ್‌ನಡಿ ಗೂಗಲ್‌ನ ಎಕ್ಸಿಪಿರಿಮೆಂಟ್ ಎಕ್ಸ್ ಲ್ಯಾಬೋರೇಟರಿಯನ್ನು ಸಿಇಒ ಸುಂದರ್ ಪಿಚ್ಚೈ ಮುಚ್ಚಿದ್ದಾರೆ.


Click it and Unblock the Notifications