ನಿಷ್ಕ್ರೀಯ ಗೂಗಲ್ ಖಾತೆಗಳ ಮೂಲಕ ನಡೆಯುವ ಅಪಾಯವನ್ನು ಕಡಿಮೆ ಮಾಡಲು ಟೆಕ್ ದೈತ್ಯ ಮಂಗಳವಾರ ತನ್ನ ನಿಷ್ಕ್ರಿಯತೆಯ ನೀತಿಯನ್ನು ಅಪ್‌ಡೇಟ್ ಮಾಡಿದೆ. ಹೊಸ ಮಾರ್ಗಸೂಚಿಗಳ ಅಡಿಯಲ್ಲಿ, ಕನಿಷ್ಠ 2 ವರ್ಷಗಳವರೆಗೆ ಬಳಸದ ಯಾವುದೇ ಗೂಗಲ್ ಖಾತೆಯನ್ನು ಡಿಲೀಟ್ ಮಾಡಲಾಗುತ್ತದೆ. ಇಂದಿನಿಂದ ಎರಡು ವರ್ಷಗಳವರೆಗೆ ಬಳಸದ ಖಾತೆಗಳಿಗೆ ಇದು ಅನ್ವಯವಾಗುತ್ತದೆ.
"ನಮ್ಮ ಆಂತರಿಕ ವಿಶ್ಲೇಷಣೆಯು ಖಾತೆಗಳು 2-ಹಂತದ ಪರಿಶೀಲನೆಯನ್ನು ಹೊಂದಿಸಲು ಸಕ್ರಿಯವಾಗಿರುವ ಖಾತೆಗಳಿಗಿಂತ ಕನಿಷ್ಠ 10x ಕಡಿಮೆ ಎಂದು ತೋರಿಸುತ್ತದೆ. ಅಂದರೆ ಸಾಮಾನ್ಯವಾಗಿ ದುರ್ಬಳಕೆ ಮಾಡಲಾಗುತ್ತದೆ. ಒಮ್ಮೆ ಹ್ಯಾಕ್ ಆದರೆ, ಸ್ಪ್ಯಾಮ್‌ನಂತಹ ಅನಗತ್ಯ ಅಥವಾ ದುರುದ್ದೇಶಪೂರಿತ ವಿಷಯಕ್ಕಾಗಿ ಅದನ್ನು ಬಳಕೆ ಮಾಡಲಾಗುತ್ತದೆ," ಎಂದು ಉತ್ಪನ್ನ ನಿರ್ವಹಣೆಯ ಉಪಾಧ್ಯಕ್ಷ ರುತ್ ಕ್ರಿಚೆಲ್ಲಿ ಅಧಿಕೃತ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಅಪ್‌ಡೇಟೆಡ್ ಪಾಲಿಸಿ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ
1. ಈಗಾಗಲೇ ಪರಿಣಾಮಕಾರಿಯಾಗಿದ್ದರೂ, ಇದು ತಕ್ಷಣವೇ ಜನರ ಮೇಲೆ ಪರಿಣಾಮ ಬೀರುವುದಿಲ್ಲ. ಕಂಪನಿಯು ಡಿಸೆಂಬರ್‌ನಿಂದ ಬಳಕೆಯಾಗದ ಖಾತೆಗಳನ್ನು ಡಿಲೀಟ್ ಮಾಡಲು ಪ್ರಾರಂಭ ಮಾಡುತ್ತದೆ.
2. ಖಾತೆಗಳನ್ನು ರಚಿಸಿದಾಗಿನಿಂದ ನಿಷ್ಕ್ರಿಯವಾಗಿರುವ ಖಾತೆಗಳ ಮೇಲೆ ಮೊದಲು ಪರಿಣಾಮ ಉಂಟು ಮಾಡುತ್ತದೆ.
3. ವೈಯಕ್ತಿಕ ಗೂಗಲ್ ಖಾತೆಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ. ಶಾಲೆಗಳು ಮತ್ತು ವ್ಯವಹಾರಗಳಂತಹ ಸಂಸ್ಥೆಗಳಿಗೆ ಸಂಬಂಧಿಸಿದ ಖಾತೆಗಳನ್ನು ಡಿಲೀಟ್ ಮಾಡಲಾಗುವುದಿಲ್ಲ.
4. ಅಂತಿಮವಾಗಿ ಡಿಲೀಟ್ ಮಾಡುವ ಮುನ್ನ, ಪ್ರಾಥಮಿಕ ಇಮೇಲ್ ವಿಳಾಸ (Gmail) ಮತ್ತು ರಿಕವರಿ ಇಮೇಲ್ (ಒದಗಿಸಿದರೆ) ಎರಡರಲ್ಲೂ ರಿಮೈಂಡರ್ ಕಳುಹಿಸಲಾಗುತ್ತದೆ.
5. ಖಾತೆಯ ಡಿಲೀಟ್ ಪ್ರಕ್ರಿಯೆ ಗೂಗಲ್ ವರ್ಕ್‌ಫೋರ್ಸ್ ಯೂಟ್ಯೂಬ್ ಮತ್ತು ಗೂಗಲ್ಫೋಟೋಗಳಲ್ಲಿನ ವಿಷಯದ ಮೇಲೂ ಪರಿಣಾಮ ಬೀರುತ್ತದೆ. (ಜಿಮೇಲ್, ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್)
6. ಗೂಗಲ್ ಖಾತೆಯನ್ನು ಕ್ರಿಯಾತ್ಮಕವಾಗಿಡಲು, ನಿಯಮಿತವಾಗಿ ಅಥವಾ ಪ್ರತಿದಿನವಲ್ಲದಿದ್ದರೂ ಕನಿಷ್ಠ 2 ವರ್ಷಗಳಿಗೊಮ್ಮೆ ಸೈನ್-ಇನ್ ಮಾಡಬೇಕು.
ಖಾತೆ ಸಕ್ರಿಯವಾಗಿರಿಸಲು ಮಾಡುವುದೇನು?
ಪೋಸ್ಟ್‌ನಲ್ಲಿ, ಅವನ/ಅವಳ ಗೂಗಲ್ ಖಾತೆಯು ಸಕ್ರಿಯವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬಳಕೆದಾರರು ಕೈಗೊಳ್ಳಬಹುದಾದ ಕೆಲವು ಕ್ರಮಗಳನ್ನು ಗೂಗಲ್ ಉಲ್ಲೇಖ ಮಾಡಿದೆ.
* ಇಮೇಲ್ ಓದುವುದು ಮತ್ತು ಇಮೇಲ್ ಸೆಂಡ್ ಮಾಡುವುದು
* ಗೂಗಲ್ ಡ್ರೈವ್ ಅನ್ನು ಬಳಸುವುದು
* ಯೂಟ್ಯೂಬ್ ವಿಡಿಯೋವನ್ನು ನೋಡಿ
* ಗೂಗಲ್ ಪ್ಲೇಸ್ಟೋರ್‌ನಲ್ಲಿ ಆಪ್‌ಗಳನ್ನು ಡೌನ್‌ಲೋಡ್ ಮಾಡುವುದು
* ಗೂಗಲ್ ಸರ್ಚ್ ಅನ್ನು ಬಳಕೆ ಮಾಡುವುದು
* ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಅಥವಾ ಸೇವೆಗೆ ಸೈನ್ ಇನ್ ಮಾಡಲು ಗೂಗಲ್‌ನೊಂದಿಗೆ ಸೈನ್ ಇನ್ ಅನ್ನು ಬಳಸುವುದು.
ಹೊಸ ನೀತಿಯು ವೈಯಕ್ತಿಕ ಗೂಗಲ್ ಖಾತೆಗಳಿಗೆ ಮಾತ್ರ ಅನ್ವಯವಾಗುತ್ತದೆ. ಶಾಲೆಗಳು ಅಥವಾ ವ್ಯವಹಾರಗಳಂತಹ ಸಂಸ್ಥೆಗಳ ಖಾತೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ಅಲ್ಲದೆ, ಈ ನೀತಿಯು ತಕ್ಷಣವೇ ಜಾರಿಗೆ ಬಂದರೆ, ಈ ವರ್ಷದ ಡಿಸೆಂಬರ್‌ನಿಂದ ಗೂಗಲ್ ಖಾತೆಗಳನ್ನು ನಿಷ್ಕ್ರೀಯಗೊಳಿಸಲು ಪ್ರಾರಂಭ ಮಾಡಲಾಗುತ್ತದೆ.


Click it and Unblock the Notifications