ಬೆಂಗಳೂರು, ಮೇ 9: ಅಮೆರಿಕಾದ ಟೆಕ್ ದೈತ್ಯ ಗೂಗಲ್ ಭಾರತದಲ್ಲಿಯೂ ತನ್ನ ವ್ಯಾಲೆಟ್ (Google Wallet) ಸೇವೆಗಳನ್ನು ಪ್ರಾರಂಭಿಸಿದೆ. "ಗೂಗಲ್ ವಾಲೆಟ್" ಹೆಸರಿನಲ್ಲಿ ಇವುಗಳನ್ನು ಲಭ್ಯವಾಗುವಂತೆ ಮಾಡಿದೆ. ಇದು ಡಿಜಿಟಲ್ ಯುಗದಲ್ಲಿ ಜನರಿಗೆ ಅನೇಕ ಪ್ರಯೋಜನಗಳನ್ನು ನೀಡಲಿದೆ.
'Google Pay app'ಭಿನ್ನವಾಗಿರುವ "ಗೂಗಲ್ ವಾಲೆಟ್" ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಲಾಯಲ್ಟಿ ಕಾರ್ಡ್, ಗಿಫ್ಟ್ ಕಾರ್ಡ್ ಸೇರಿದಂತೆ ಇತರೆ ಡಿಜಿಟಲ್ ಕಾರ್ಡ್‌ಗಳನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದಾಗಿದೆ.

Google 2022 ರಲ್ಲಿ ಅಮೇರಿಕಾದಲ್ಲಿ ಡಿಜಿಟಲ್ ವ್ಯಾಲೆಟ್ ಅಪ್ಲಿಕೇಶನ್ Google Wallet ಅನ್ನು ಪ್ರಾರಂಭಿಸಿತ್ತು. ಎರಡು ವರ್ಷಗಳ ನಂತರ, ಅಪ್ಲಿಕೇಶನ್ ಅಂತಿಮವಾಗಿ ಭಾರತೀಯ ಮಾರುಕಟ್ಟೆಯತ್ತ ಮುಖ ಮಾಡಿದ್ದು ಇದೀಗ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ .
ಗೂಗಲ್ ವಾಲೆಟ್ ಎಂದರೇನು?
Google Wallet ಸೇವೆಗಳು Google Pay ಗಿಂತ ಸಂಪೂರ್ಣವಾಗಿ ಭಿನ್ನವಾಗಿದ್ದು , ಇದು ಅತ್ಯಂತ ಸುರಕ್ಷಿತ ಮತ್ತು ಖಾಸಗಿ ಡಿಜಿಟಲ್ ವ್ಯಾಲೆಟ್ ಆಗಿದೆ
ಎಂದು ಕಂಪನಿ ಹೇಳಿದೆ. ಗೂಗಲ್ ವಾಲೆಟ್ ಬಳಕೆದಾರರು ಬೋರ್ಡಿಂಗ್ ಪಾಸ್‌ಗಳು, ಟಿಕೆಟ್‌ಗಳು , ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಇತರ ದೈನಂದಿನ ಅಗತ್ಯಗಳಿಗೆ ಸುಲಭವಾದ ಸಂಗ್ರಹಿಸಿಟ್ಟುಕೊಳ್ಳಲು ಬಳಕೆದಾರರಿಗೆ ಒಂದೇ, ಸಂಘಟಿತ ಸ್ಥಳವನ್ನು ನೀಡುತ್ತದೆ. ಸದ್ಯಕ್ಕೆ, ಗೂಗಲ್ ತನ್ನ ವ್ಯಾಲೆಟ್ ಅನ್ನು ಭಾರತದಲ್ಲಿನ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಬಿಡುಗಡೆ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಗೂಗಲ್ ವಾಲೆಟ್ ಭಾರತದಲ್ಲಿ ಈಗಾಗಲೇ ಲಭ್ಯವಿರುವ ಡಿಜಿಲಾಕರ್‌ನಂತೆಯೇ ಸೇವೆಗಳನ್ನು ನೀಡುತ್ತದೆ. "ಡಿಜಿಲಾಕರ್" ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (ಮೀಟಿವೈ), ಭಾರತ ಸರ್ಕಾರ ತನ್ನ ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿದೆ. ಇದರಲ್ಲಿದಾಖಲೆ ಪತ್ರಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿಡುವಂತೆ ನಾವು ನಮ್ಮ ಇ-ದಾಖಲೆಪತ್ರಗಳನ್ನು ಡಿಜಿ ಲಾಕರ್‌ನಲ್ಲಿ ಸುರಕ್ಷಿತವಾಗಿ ಇಡಬಹುದು
Google Pay ನಿಂದ Google Wallet ಹೇಗೆ ಭಿನ್ನವಾಗಿದೆ?
Google Wallet ನಲ್ಲಿಬಳಕೆದಾರರು ಹಣಕಾಸಿನ ಡೇಟಾವನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು. ಜನರು ತಮ್ಮ ಚಲನಚಿತ್ರ ಟಿಕೆಟ್‌ಗಳು ಮತ್ತು ಈವೆಂಟ್ ಟಿಕೆಟ್‌ಗಳನ್ನು ಭೌತಿಕವಾಗಿ ಇಟ್ಟುಕೊಳ್ಳುವ ಬದಲು ಇದರಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ದೇಶದ ದೊಡ್ಡ ಕಂಪನಿಗಳಾದ ಪಿವಿಪಿ ಮತ್ತು ಐನಾಕ್ಸ್‌ಗಳು ಈಗಾಗಲೇ ಗೂಗಲ್ ವಾಲೆಟ್‌ನಲ್ಲಿ ಲಭ್ಯವಿವೆ. ಹೆಚ್ಚು ಪ್ರಯಾಣ ಮಾಡುತ್ತಿರುವವರಿಗೆ ಗೂಗಲ್ ವಾಲೆಟ್ ಅನುಕೂಲವಾಗಿರುತ್ತದೆ.
Google Wallet ವೆಬ್‌ಸೈಟ್‌ನಲ್ಲಿನ FAQ ಪ್ರಕಾರ, Google Wallet ಎಂಬುದು 'ಸುರಕ್ಷಿತ ಮತ್ತು ಖಾಸಗಿ ಡಿಜಿಟಲ್ ವ್ಯಾಲೆಟ್' ಆಗಿದ್ದು ಅದು ಬಳಕೆದಾರರಿಗೆ ಲಾಯಲ್ಟಿ ಕಾರ್ಡ್‌ಗಳಿಗೆ ತ್ವರಿತ ಪ್ರವೇಶ ಒದಗಿಸುತ್ತದೆ. ಈ ಅಪ್ಲಿಕೇಶನ್ ಅನೇಕ ಬೋರ್ಡಿಂಗ್ ಪಾಸ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಪ್ರಯಾಣ ವಲಯದಲ್ಲಿ ಏರ್ ಇಂಡಿಯಾ, ಮೇಕ್ ಮೈ ಟ್ರಿಪ್, ಈಸಿ ಮೈ ಟ್ರಿಪ್, ಇಂಡಿಗೋ ಮೊದಲಾದ ಕಂಪನಿಗಳಿವೆ.
ಇದೇ ವೇಳೆ, ಗೂಲ್ ಪೇ ಆ್ಯಪ್ ಅನ್ನು ಹಿಂಪಡೆಯುವುದಿಲ್ಲ ಎಂದು ಹೇಳಿರುವ ಗೂಗಲ್, ಇದು ನಮ್ಮ ಪ್ರಾಥಮಿಕ ಪೇಮೆಂಟ್ಸ್ ಆ್ಯಪ್ ಆಗಿ ಮುಂದುವರಿಯಲಿದೆ. ಗೂಗಲ್ ವಾಲೆಟ್ ಅನ್ನು ಪಾವತಿರಹಿತ ಬಳಕೆಗಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದೆ.


Click it and Unblock the Notifications