ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳಿಗೆ ಹೋದಾಗ ನಿಮಗೆ ಬೇಕಾದ ಅಧಿಕಾರಿಗಳ ಚೇರ್ ಖಾಲಿ ಇರುತ್ತದೆ. ಆ ಅಧಿಕಾರಿಯ ಬಗ್ಗೆ ವಿಚಾರಿಸಿದಾಗ ಅವರು ಧಮ್ ಹೊಡೆಯಲು ಹೋಗಿದ್ದಾರೆ, ಅವರು ಎಲೆ ಅಡಿಕೆ ತಿನ್ನಲು ಹೋಗಿದ್ದಾರೆ ಎಂಬ ಸಬೂಬು ಇನ್ನು ಮುಂದೆ ಕೇಳಿಸುವುದು ಕಷ್ಟ. ಇದಕ್ಕೆಲ್ಲಾ ಕಾರಣ ಸರ್ಕಾರ ಹೊರ ತಂದ ಆ ಒಂದು ಆದೇಶ. ನಿಜಕ್ಕೂ ಆ ಆದೇಶ ಕೆಲ ಸರ್ಕಾರಿ ಅಧಿಕಾರಿಗಳ ನಿದ್ದೆಯನ್ನು ಹಾಳು ಮಾಡಿದೆ. ಯಾವುದದು ಆದೇಶ ಇಲ್ಲಿದೆ ವರದಿ.
ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದೆ. ಈ ಆದೇಶದಿಂದ ಸರ್ಕಾರಿ ನೌಕರನು ಕಚೇರಿಗಳಲ್ಲಿ ಹಾಗೂ ಕಚೇರಿಯ ಪ್ರದೇಶದಲ್ಲಿ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಸೇವನೆಯನ್ನು ನಿರ್ಬಂಧಿಸಿ ಆದೇಶದ ಹೊರಡಿಸಿದೆ. ಇನ್ನು ಮುಂದೆ ಕಚೇರಿ ಆವರಣದಲ್ಲಿ ತಾಂಬುಕ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಆದೇಶದಲ್ಲಿ ಏನಿದೆ?
ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳ ಹಿತದ ದೃಷ್ಟಿಯಿಂದ ಸರ್ಕಾರ ಈ ಆದೇಶವನ್ನು ಹೊರಡಿಸಿದೆ. ಧೂಮಪಾನ ಹಾಗೂ ತಂಬಾಕಿನ ಇತರೆ ಉತ್ಪನ್ನಗಳ ಸೇವನೆ ಆರೋಗ್ಯಕ್ಕೆ ಮಾರಕವಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿಇಂತಹ ಉತ್ಪನ್ನಗಳ ಸೇವೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮಗಳ 2021ರ 31ರಲ್ಲಿ ತಿಳಿಸಿರುವಂತೆ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಆದೇಶಿಸಲಾಗಿದೆ.
ಈ ನಿಯಮ ಜಾರಿಗೆ ತಂದಿರುವುದರಿಂದ ಸಿಬ್ಬಂದಿಗಳ ಆರೋಗ್ಯದ ಹಿತವನ್ನು ಕಾಯುವುದು ಪ್ರಮುಖ ಕರ್ತವ್ಯ ಆಗಿದೆ. ಸಾರ್ವಜನಿಕರನ್ನು ಧೂಮಪಾನದಿಂದ ರಕ್ಷಿಸುವ ಉದ್ದೇಶದಿಂದ ಈ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೆ ಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಯಾವುದೇ ಸರ್ಕಾರಿ ನೌಕರನು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಆವರಣದಲ್ಲಿ ತಂಬಾಕು ಉತ್ಪನ್ನಗಳ ಸೇವನೆಯನ್ನು ಬ್ಯಾನ್ ಮಾಡಲಾಗಿದೆ. ಇಷ್ಟೇ ಅಲ್ಲದೆ ಈ ಸಂಬಂಧ ಕಚೇರಿಗಳಲ್ಲಿ ಫಲಕವನ್ನು ಅಳಡಿಸುವಂತೆ ಸೂಚಿಸಲಾಗಿದೆ.
ಕಾನೂನಾತ್ವಕ ಸೂಚನೆಗಳ ಹೊರತಾಗಿಯೂ, ಸಹ ಸರ್ಕಾರಿ ಕಚೇರಿಗಳ ಆವಾರಣದಲ್ಲಿ ಧೂಮಪಾನ, ತಂಬಾಕು, ಗುಟ್ಕಾ ಸೇವನೆ ಮಾಡುವುದು ಕಂಡು ಬಂದಲ್ಲಿ ಆ ನೌಕರರ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ. ಇದಕ್ಕೂ ಮೊದಲು ಸಾರ್ವಜನಿಕರ ಪ್ರದೇಶಗಳಲ್ಲಿ ಧೂಮಪಾನ ನಿಷೇಧಿಸಲಾಗಿತ್ತು. ಈಗ ಈ ಆದೇಶ ಸರ್ಕಾರಿ ಕಚೇರಿಗಳಿಗೂ ಪ್ರವೇಶಿಸಿದೆ.
ತೆಲಂಗಾಣದಲ್ಲೂ ಬ್ಯಾನ್
ಇತ್ತೀಚಿಗೆ ತೆಲಂಗಾಣ ಸರ್ಕಾರ ರಾಜ್ಯಾದ್ಯಂತ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಕೆ ಸಂಗ್ರಹಣೆ, ವಿತರಣೆ, ಸಾಗಣೆ, ಮಾರಾಟವನ್ನು ಒಂದು ವರ್ಷದ ಅವಧಿಗೆ ಬ್ಯಾನ್ ಮಾಡಿದೆ. ತೆಲಂಗಾಣ ರಾಜ್ಯ ಸ್ಥಾಪನೆ ಆದಾಗಿನಿಂದ ರಾಜ್ಯದಲ್ಲಿ ಗುಟ್ಕಾ ನಿಷೇಧಿಸಲಾಗಿದೆ. ಸರ್ಕಾರದ ಈ ಕ್ರಮವನ್ನು ತೆಲಂಗಾಣ ಹೈಕೋರ್ಟ್ 2021ರಲ್ಲಿ ಎತ್ತಿ ಹಿಡಿದಿತ್ತು. ಗುಟ್ಕಾ ತಯಾರಿಕ ಕಂಪನಿಗಳು ಸುಪ್ರೀಂ ಕೊರ್ಟ್ ಮೆಟ್ಟಿಲು ಏರಿದ್ದವು. ಈ ಬ್ಯಾನ್ ಅಧಿಸೂಚನೆಗೆ 2022ರ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.


Click it and Unblock the Notifications