ಆಧಾರ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡುವುದನ್ನು ಸರ್ಕಾರವು ಈ ಹಿಂದೆಯೇ ಕಡ್ಡಾಯಗೊಳಿಸಿದೆ. ಲಿಂಕಿಂಗ್ ಗಡುವು ಮೀರಿದರೆ ದಂಡವನ್ನು ಕೂಡಾ ವಿಧಿಸಿದೆ. ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ವಿಳಂಬ ಮಾಡಿದ್ದಕ್ಕಾಗಿ ಸರ್ಕಾರವು ಸುಮಾರು 600 ಕೋಟಿ ರೂಪಾಯಿಗಳನ್ನು ದಂಡವಾಗಿ ಸಂಗ್ರಹಿಸಿದೆ.
ಸುಮಾರು 11.48 ಕೋಟಿ ಖಾಯಂ ಖಾತೆ ಸಂಖ್ಯೆಗಳು ಇನ್ನೂ ಬಯೋಮೆಟ್ರಿಕ್ ಗುರುತಿನೊಂದಿಗೆ ಲಿಂಕ್ ಆಗಿಲ್ಲ ಎಂದು ಸಂಸತ್ತಿನಲ್ಲಿ ಸೋಮವಾರ ತಿಳಿಸಲಾಗಿದೆ. 2024 ರ ಜನವರಿ 29 ರಂತೆ ವಿನಾಯಿತಿ ಪಡೆದ ವರ್ಗಗಳನ್ನು ಹೊರತುಪಡಿಸಿ ಆಧಾರ್‌ನೊಂದಿಗೆ ಲಿಂಕ್ ಮಾಡದ ಪ್ಯಾನ್‌ಗಳ ಸಂಖ್ಯೆ 11.48 ಕೋಟಿಯಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಬಯೋಮೆಟ್ರಿಕ್ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಲು ಜೂನ್ 30, 2023 ಕೊನೆಯ ದಿನಾಂಕವಾಗಿದೆ. ಒಬ್ಬ ವ್ಯಕ್ತಿಯು ಜೂನ್ 30, 2023 ರೊಳಗೆ ತಮ್ಮ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲು ವಿಫಲರಾದರೆ ಮತ್ತು ನಂತರದ ದಿನಾಂಕದಲ್ಲಿ ಅದನ್ನು ಲಿಂಕ್ ಮಾಡಲು ಬಯಸಿದರೆ, ದಂಡವನ್ನು ಪಾವತಿಸಿದ ನಂತರ ಅವರು ಲಿಂಕ್ ಮಾಡಬಹುದಾಗಿದೆ.
ಜೂನ್ 30, 2023 ರ ಕೊನೆಯ ದಿನಾಂಕದ ನಂತರ ತಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದ ವ್ಯಕ್ತಿಗಳಿಂದ 1,000 ರೂಪಾಯಿಗಳ ತಡವಾದ ದಂಡದ ಮೂಲಕ ಸರ್ಕಾರ ಗಳಿಸಿದ ವಿವರಗಳ ಕುರಿತಾದ ಪ್ರಶ್ನೆಗೆ ಚೌಧರಿ ಉತ್ತರವನ್ನು ನೀಡಿದ್ದಾರೆ. "ಜನರು ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ಗಡುವು ಮೀರಿದ ಬಳಿಕ ಜುಲೈ 1, 2023 ರಿಂದ ಜನವರಿ 31, 2024 ರವರೆಗೆ 601.97 ಕೋಟಿ ರೂಪಾಯಿ ದಂಡವಾಗಿ ಸಂಗ್ರಹಿಸಲಾಗಿದೆ," ಎಂದು ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.
ತಮ್ಮ ಆಧಾರ್ ಅನ್ನು ಲಿಂಕ್ ಮಾಡಲು ವಿಫಲರಾದ ತೆರಿಗೆದಾರರ ಪ್ಯಾನ್ ಜುಲೈ 1, 2023 ರಿಂದ ನಿಷ್ಕ್ರಿಯಗೊಳ್ಳುತ್ತದೆ. ಅಂತಹ ಪ್ಯಾನ್‌ಗಳಿಗೆ ಯಾವುದೇ ಮರುಪಾವತಿಯನ್ನು ಮಾಡಲಾಗುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಅಲ್ಲದೆ, ಟಿಡಿಎಸ್ ಮತ್ತು ಟಿಸಿಎಸ್ ಅನ್ನು ಹೆಚ್ಚಿನ ದರದಲ್ಲಿ ಕಡಿತಗೊಳಿಸಲಾಗುತ್ತದೆ/ಸಂಗ್ರಹಿಸಲಾಗುತ್ತದೆ. 1,000 ರೂಪಾಯಿಗಳ ವಿಳಂಬ ಶುಲ್ಕವನ್ನು ಪಾವತಿಸುವ ಮೂಲಕ ಪ್ಯಾನ್ ಅನ್ನು ಮತ್ತೆ ಕಾರ್ಯಗತಗೊಳಿಸಬಹುದು.
ಆಧಾರ್- ಪ್ಯಾನ್ ಲಿಂಕ್‌ಗೆ ದಂಡ ಪಾವತಿಸುವುದು ಹೇಗೆ?
ಹಂತ 1: ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ.
ಹಂತ 2: ನಿಮ್ಮ ಖಾತೆಗೆ ಲಾಗಿನ್ ಆಗಬೇಕಾಗುತ್ತದೆ.
ಹಂತ 3: Link PAN with Aadhaar ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 4: ಎಲ್ಲ ಅಗತ್ಯ ಮಾಹಿತಿಗಳನ್ನು ನಮೂದಿಸಿ
ಹಂತ 5: ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇ-ಪೇ ತೆರಿಗೆಯನ್ನು ಬಳಸಿ.
ಹಂತ 6: PAN/TAN ವಿಭಾಗದಲ್ಲಿ ಪ್ಯಾನ್ ನಂಬರ್ ನಮೂದಿಸಿದ ಬಳಿಕ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
ಹಂತ 7: PAN/TANನಲ್ಲಿ ನಲ್ಲಿ ಎರಡನೇ ಬಾರಿಗೆ ಪ್ಯಾನ್ ಕಾರ್ಡ ನಮೂದಿಸಿ Confirm ಕ್ಲಿಕ್ ಮಾಡಿ
ಹಂತ 8: ಅದಾದ ಬಳಿಕ Continue ಬಟನ್ ಕ್ಲಿಕ್ ಮಾಡಿ
ಹಂತ 9: 2023-24 ವರ್ಷವನ್ನು ಆಯ್ಕೆ ಮಾಡಿ, ಇತರ ರಸೀದಿಗಳನ್ನು (500) ಆಯ್ಕೆ ಮಾಡಿ Proceed ಅನ್ನು ಕ್ಲಿಕ್ ಮಾಡಿ
ಹಂತ 10: Others ಆಯ್ಕೆಯು ಈಗಾಗಲೇ ತುಂಬಿದ ಮೊತ್ತವನ್ನು ಹೊಂದಿರುತ್ತದೆ. Continue ಬಟನ್ ಕ್ಲಿಕ್ ಮಾಡುವ ಮೂಲಕ ಪಾವತಿ ಮಾಡಿ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications