ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಸಾಗರೋತ್ತರ ವೆಚ್ಚವನ್ನು ಉದಾರೀಕೃತ ರವಾನೆ ಯೋಜನೆ (ಎಲ್‌ಆರ್‌ಎಸ್) ಅಡಿಯಲ್ಲಿ ಸೇರಿಸಲಾಗುವುದಿಲ್ಲ. ಆದ್ದರಿಂದಾಗಿ ಟಿಸಿಎಸ್ ಇದಕ್ಕೆ ಅನ್ವಯವಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಬುಧವಾರ ಹೇಳಿದೆ. ಹಾಗೆಯೇ ಪ್ರವಾಸ ವೆಚ್ಚಗಳಂತಹ ಎಲ್‌ಆರ್‌ಎಸ್ ಅಡಿಯಲ್ಲಿ ವಿದೇಶಿ ರವಾನೆಗಳ ಮೇಲೆ ಶೇಕಡ 20ರಷ್ಟು ಟಿಸಿಎಸ್ ಅನುಷ್ಠಾನವನ್ನು ಮೂರು ತಿಂಗಳುಗಳ ಕಾಲ ಮುಂದೂಡುವುದಾಗಿದೆ ಹೇಳಿದೆ.
ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ವೆಚ್ಚಗಳನ್ನು ಟಿಸಿಎಸ್‌ಗೆ ಒಳಪಡಿಸಲಾಗುತ್ತದೆ. ಇದರರ್ಥ 7 ಲಕ್ಷ ರೂಪಾಯಿಗಿಂತ ಹೆಚ್ಚಿನ ವೆಚ್ಚಗಳಿಗೆ ಶೇಕಡ 20ರಷ್ಟು ಟಿಸಿಎಸ್ ಶುಲ್ಕವನ್ನು ವಿಧಿಸಲಾಗುತ್ತದೆ. ಆದರೆ, ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಗಳಿಗೆ ಈ ಶುಲ್ಕವನ್ನು ಶೇಕಡ 5ಕ್ಕೆ ಇಳಿಕೆ ಮಾಡಲಾಗುತ್ತದೆ. ಇದಲ್ಲದೆ, ನೀವು ವಿದೇಶದಲ್ಲಿ ಶಿಕ್ಷಣ ಪಡೆಯಲು ಶಿಕ್ಷಣ ಸಾಲವನ್ನು ಪಡೆಯುತ್ತಿದ್ದರೆ, ಟಿಸಿಎಸ್ ಶುಲ್ಕವನ್ನು ಶೇಕಡ 0.5ಕ್ಕೆ ಇಳಿಕೆ ಮಾಡಲಾಗುತ್ತದೆ.

ಈ ಟಿಸಿಎಸ್ ದರವು ಜುಲೈ 1ರಿಂದ ಜಾರಿಗೆ ಬರಲಿತ್ತು. ಆದರೆ ಇದನ್ನು ಮುಂದೂಡಿಕೆ ಮಾಡಲಾಗಿದ್ದು, ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಆದರೂ ಸಾಗರೋತ್ತರ ಕ್ರೆಡಿಟ್ ಕಾರ್ಡ್ ವೆಚ್ಚಕ್ಕೆ ಅಕ್ಟೋಬರ್ 1 ರಿಂದ ಟಿಸಿಎಸ್ ಅನ್ವಯವಾಗದು. ಎಲ್‌ಆರ್‌ಎಸ್ ಪಾವತಿ 7 ಲಕ್ಷ ರೂಪಾಯಿಯ ಮಿತಿಯನ್ನು ಮೀರಿದಾಗ ಮಾತ್ರ ಹೆಚ್ಚಿನ ಟಿಸಿಎಸ್ ದರವು ಅನ್ವಯವಾಗುತ್ತದೆ.
ಸರ್ಕಾರವು ಹಣಕಾಸು ಮಸೂದೆ 2023 ರಲ್ಲಿ, ಎಲ್‌ಆರ್‌ಎಸ್ ಅಡಿಯಲ್ಲಿ ಹಣ ರವಾನೆಗಾಗಿ ಹಾಗೂ ಸಾಗರೋತ್ತರ ಪ್ರವಾಸ ಪ್ಯಾಕೇಜ್‌ಗಳ ಖರೀದಿಗಾಗಿ ಟಿಸಿಎಸ್ ದರವನ್ನು ಶೇಕಡ 5ರಿಂದ ಶೇಕಡ 20ಕ್ಕೆ ಏರಿಕೆ ಮಾಡಲಾಗುತ್ತದೆ. ಎಲ್‌ಆರ್‌ಎಸ್‌ನಲ್ಲಿ ಟಿಸಿಎಸ್ ಅನ್ವಯವಾಗಲು 7 ಲಕ್ಷದ ಮಿತಿಯನ್ನು ತೆಗೆದು ಹಾಕಲಾಗಿದೆ. ಶಿಕ್ಷಣ ಅಥವಾ ವೈದ್ಯಕೀಯ ಉದ್ದೇಶಕ್ಕಾಗಿ ಹಣ ರವಾನೆಯಾದಾಗ ಈ ಎರಡು ಬದಲಾವಣೆಗಳು ಅನ್ವಯಿಸುವುದಿಲ್ಲ. ಈ ತಿದ್ದುಪಡಿಗಳು ಜುಲೈ 1, 2023 ರಿಂದ ಜಾರಿಗೆ ಬರಬೇಕಿತ್ತು.
"ಹಲವಾರು ಮಂದಿಯ ಸಲಹೆ ಹಾಗೂ ಅಭಿಪ್ರಾಯಗಳ ಆಧಾರದಲ್ಲಿ ನಾವು ಕೆಲವು ಬದಲಾವಣೆಗಳನ್ನು ತರುವ ನಿರ್ಧಾರವನ್ನು ಮಾಡಿದ್ದೇವೆ. ಮೊದಲನೆಯದಾಗಿ ಎಲ್‌ಆರ್‌ಎಎಸ್ ಅಡಿಯಲ್ಲಿ ಎಲ್ಲಾ ಉದ್ದೇಶಗಳಿಗಾಗಿ ವಿದೇಶಿ ಪ್ರಯಾಣ ಪ್ರವಾಸ ಪ್ಯಾಕೇಜ್‌ಗಳಿಗೆ, ಪಾವತಿ ವಿಧಾನವನ್ನು ಲೆಕ್ಕಿಸದೆ, ಪ್ರತಿ ವ್ಯಕ್ತಿಗೆ ವಾರ್ಷಿಕ 7 ಲಕ್ಷ ರೂಪಾಯಿಗಳಿಗೆ ಟಿಸಿಎಸ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನಿರ್ಧಾರ ಮಾಡಲಾಗಿದೆ. ಹಾಗೆಯೇ ನೂತನ ದರ ಅನ್ವಯಕ್ಕೆ ಸ್ವಲ್ಪ ಸಮಯ ನೀಡಲಾಗುತ್ತದೆ," ಎಂದು ಉಲ್ಲೇಖಿಸಲಾಗಿದೆ.
ಈ ಹಿಂದೆ ದರ ಎಷ್ಟಿತ್ತು?
ಶಿಕ್ಷಣ ಸಾಲಕ್ಕೆ ಎಲ್‌ಆರ್‌ಎಸ್: 7 ಲಕ್ಷ ರೂಪಾಯಿವರೆಗೆ ಇಲ್ಲ, 7 ಲಕ್ಷ ರೂಪಾಯಿ ಬಳಿಕ ಶೇಕಡ 0.5ರಷ್ಟು
ಆರೋಗ್ಯ ವೆಚ್ಚ, ಚಿಕಿತ್ಸೆ, ವೈದ್ಯಕೀಯ ಶಿಕ್ಷಣ: 7 ಲಕ್ಷ ರೂಪಾಯಿವರೆಗೆ ಇಲ್ಲ, 7 ಲಕ್ಷ ರೂಪಾಯಿ ಬಳಿಕ ಶೇಕಡ 5ರಷ್ಟು
ಇತರೆ ಉದ್ದೇಶಕ್ಕಾಗಿ ಎಲ್‌ಆರ್‌ಎಸ್: 7 ಲಕ್ಷ ರೂಪಾಯಿವರೆಗೆ ಇಲ್ಲ, 7 ಲಕ್ಷ ರೂಪಾಯಿ ಬಳಿಕ ಶೇಕಡ 5ರಷ್ಟು
ಸಾಗರೋತ್ತರ ಪ್ರವಾಸ ಪ್ಯಾಕೇಶ್ ಖರೀದಿ: ಶೇಕಡ 5ರಷ್ಟು
ಅಕ್ಟೋಬರ್ 1ರಿಂದ ಜಾರಿಗೆ ಬರುವ ಹೊಸ ದರ
ಶಿಕ್ಷಣ ಸಾಲಕ್ಕೆ ಎಲ್‌ಆರ್‌ಎಸ್: 7 ಲಕ್ಷ ರೂಪಾಯಿವರೆಗೆ ಇಲ್ಲ, 7 ಲಕ್ಷ ರೂಪಾಯಿ ಬಳಿಕ ಶೇಕಡ 0.5ರಷ್ಟು
ಆರೋಗ್ಯ ವೆಚ್ಚ, ಚಿಕಿತ್ಸೆ, ವೈದ್ಯಕೀಯ ಶಿಕ್ಷಣ: 7 ಲಕ್ಷ ರೂಪಾಯಿವರೆಗೆ ಇಲ್ಲ, 7 ಲಕ್ಷ ರೂಪಾಯಿ ಬಳಿಕ ಶೇಕಡ 5ರಷ್ಟು
ಇತರೆ ಉದ್ದೇಶಕ್ಕಾಗಿ ಎಲ್‌ಆರ್‌ಎಸ್: 7 ಲಕ್ಷ ರೂಪಾಯಿವರೆಗೆ ಇಲ್ಲ, 7 ಲಕ್ಷ ರೂಪಾಯಿ ಬಳಿಕ ಶೇಕಡ 20ರಷ್ಟು
ಸಾಗರೋತ್ತರ ಪ್ರವಾಸ ಪ್ಯಾಕೇಶ್ ಖರೀದಿ: 7 ಲಕ್ಷ ರೂಪಾಯಿವರೆಗೆ ಶೇಕಡ 5ರಷ್ಟು, ಅದಾದ ಬಳಿಕ ಶೇಕಡ 20ರಷ್ಟು


Click it and Unblock the Notifications