For Quick Alerts
ALLOW NOTIFICATIONS  
For Daily Alerts

ITR Filing Deadline Extended : ಆದಾಯ ತೆರಿಗೆ ರಿಟರ್ನ್ಸ್ ಡೆಡ್‌ಲೈನ್ 2 ತಿಂಗಳು ವಿಸ್ತರಣೆ

|

ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್‌) ಸಲ್ಲಿಸುವ ದಿನಾಂಕವನ್ನು ಕೇಂದ್ರ ಸರ್ಕಾರ ಎರಡು ತಿಂಗಳ ಕಾಲ ವಿಸ್ತರಿಸಿದ್ದು, ಸೆಪ್ಟೆಂಬರ್ 30ರವರೆಗೆ ಅವಕಾಶ ನೀಡಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಕಂಪೆನಿಗಳಿಗೆ ಐಟಿಆರ್ ಸಲ್ಲಿಸುವ ಗಡುವನ್ನು ನವೆಂಬರ್ 30 ರವರೆಗೆ ವಿಸ್ತರಿಸಿದೆ.

 

ಕೋವಿಡ್‌-19 ಸಾಂಕ್ರಾಮಿಕ ಭೀತಿ: 2021ರ ಅತ್ಯುತ್ತಮ ಎಲ್‌ಐಸಿ ಯೋಜನೆಗಳು ಇಲ್ಲಿವೆಕೋವಿಡ್‌-19 ಸಾಂಕ್ರಾಮಿಕ ಭೀತಿ: 2021ರ ಅತ್ಯುತ್ತಮ ಎಲ್‌ಐಸಿ ಯೋಜನೆಗಳು ಇಲ್ಲಿವೆ

ಆದಾಯ ತೆರಿಗೆ ಕಾನೂನಿನ ಪ್ರಕಾರ, ಲೆಕ್ಕಪರಿಶೋಧನೆಯ ಅಗತ್ಯವಿಲ್ಲದ ಮತ್ತು ಸಾಮಾನ್ಯವಾಗಿ ಐಟಿಆರ್ -1 ಅಥವಾ ಐಟಿಆರ್ -4 ಬಳಸಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವ್ಯಕ್ತಿಗಳಿಗೆ ಐಟಿಆರ್ ಸಲ್ಲಿಸಲು ಗಡುವು ಜುಲೈ 31 ಆಗಿತ್ತು.

 
ಆದಾಯ ತೆರಿಗೆ ರಿಟರ್ನ್ಸ್ ಡೆಡ್‌ಲೈನ್ 2 ತಿಂಗಳು ವಿಸ್ತರಣೆ

ಜೊತೆಗೆ ಕಂಪನಿಗಳಂತೆ ತೆರಿಗೆ ಪಾವತಿದಾರರಿಗೆ ಗಡುವು ಅಥವಾ ಆಡಿಟ್ ಮಾಡಬೇಕಾದ ಸಂಸ್ಥೆಗಳ ಅವಧಿಯು ಅಕ್ಟೋಬರ್ 31 ಆಗಿದೆ. ಇದರೊಂದಿಗೆ ಜೂನ್ 7 ರಂದು ಆದಾಯ ತೆರಿಗೆ ಕಟ್ಟಲು ಹೊಸ ವೆಬ್ ತಾಣ http://www.incometaxindiaefiling.gov.in/homeವನ್ನು ಇಲಾಖೆ ಪರಿಚಯಿಸುತ್ತಿದೆ.

ಇನ್ನು ಉದ್ಯೋಗದಾತರಿಂದ(Employers) ಉದ್ಯೋಗಿಗಳಿಗೆ ಫಾರ್ಮ್- 16 ನೀಡುವ ಗಡುವನ್ನು ಜುಲೈ 15 ರವರೆಗೆ ಒಂದು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಸಿಬಿಡಿಟಿ ಹೇಳಿದೆ.

ಆಡಿಟ್ ರಿಪೋರ್ಟ್‌ ಮತ್ತು ಟ್ರಾನ್ಸ್‌ಫರ್ ಪ್ರೈಸಿಂಗ್ ಸರ್ಟಿಫಿಕೆಟ್ ಸಲ್ಲಿಸುವ ದಿನಾಂಕವನ್ನು ಕ್ರಮವಾಗಿ ಅಕ್ಟೋಬರ್ 31 ಮತ್ತು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಪರಿಷ್ಕೃತ ಆದಾಯವನ್ನು ಸಲ್ಲಿಸಲು, ಅಂತಿಮ ದಿನಾಂಕವು ಈಗ ಜನವರಿ 31, 2022 ಆಗಿದೆ.

English summary

Govt extends FY21 ITR filing deadline for individuals by 2 months till September 30

The government today extended the due date of filing ITR for 2020-21 for individuals by two months till 30 September.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X