For Quick Alerts
ALLOW NOTIFICATIONS  
For Daily Alerts

ಹಳೆಯ ವಾಹನ ಸ್ಕ್ರ್ಯಾಪ್ ಮಾಡಲು ಸರ್ಕಾರದಿಂದ ಪ್ರೋತ್ಸಾಹ ಧನ ?

|

ನವದೆಹಲಿ, ಫೆಬ್ರವರಿ 06: ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಸರ್ಕಾರದಿಂದ ಪ್ರೋತ್ಸಾಹ ಧನ ಸಿಗಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕಾರ್ಯದರ್ಶಿ ಗಿರಿಧರ್ ಅರಮನೆ ಶುಕ್ರವಾರ ಪ್ರಕಟಿಸಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ 15 ವರ್ಷಗಳ ಹಳೆಯ, ಅನ್‌ಫಿಟ್ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಪಾಲಿಸಿ ತರುವುದಾಗಿ ಕೇಂದ್ರ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದರು. ವಾಯುಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಇಂಧನ ಆಮದು ತಗ್ಗಿಸುವುದು ನೂತನ ಪಾಲಿಸಿಯ ಉದ್ದೇಶವಾಗಿದೆ.

ಹಳೆಯ ವಾಹನ ಸ್ಕ್ರ್ಯಾಪ್ ಮಾಡಲು ಸರ್ಕಾರದಿಂದ ಪ್ರೋತ್ಸಾಹ ಧನ ?

20 ವರ್ಷದಾದ ಹಳೆಯದಾದ ಖಾಸಗಿ ವಾಹನಗಳು, 15 ವರ್ಷಗಳಿಗಿಂತ ಹಳೆಯದಾದ ವಾಣಿಜ್ಯ ವಾಹನಗಳು ಹೊಸ ಸ್ಕ್ರ್ಯಾಪಿಂಗ್ ಪಾಲಿಸಿಗೆ ಒಳಪಡುತ್ತವೆ.

''ಇದು ಇಂಧನ ಸಮರ್ಥ, ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ವಾಹನ ಮಾಲಿನ್ಯ ಮತ್ತು ತೈಲ ಆಮದು ವೆಚ್ಚ ಕಡಿಮೆಯಾಗುತ್ತದೆ. ಖಾಸಗಿ ವಾಹನಗಳು 20 ವರ್ಷಗಳ ನಂತರ ಮತ್ತು ವಾಣಿಜ್ಯ ವಾಹನಗಳು 15 ವರ್ಷಗಳ ನಂತರ ಸ್ವಯಂಚಾಲಿತ ಫಿಟ್‌ನೆಸ್ ಕೇಂದ್ರಗಳಲ್ಲಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗುತ್ತವೆ "ಎಂದು ಸೀತಾರಾಮನ್ ಫೆಬ್ರವರಿ 1 ರಂದು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಉದ್ದೇಶಿತ ವಾಹನ ಸ್ಕ್ರ್ಯಾಪೇಜ್ ನೀತಿಯಡಿಯಲ್ಲಿ, ಎಲ್ಲಾ ವಾಹನಗಳು ಸ್ವಯಂಚಾಲಿತ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅರಾಮನೆ ಪ್ರಕಾರ, ಪರೀಕ್ಷೆಯು ತಾರತಮ್ಯರಹಿತ ಮತ್ತು ಯಾವುದೇ ಹಸ್ತಚಾಲಿತ ಹಸ್ತಕ್ಷೇಪವಿಲ್ಲದೆ, ಭ್ರಷ್ಟಾಚಾರ ಅಥವಾ ದತ್ತಾಂಶದ ಮೋಸವಿಲ್ಲದೆ ವಾಹನದ ಫಿಟ್‌ನೆಸ್ ಮಟ್ಟವನ್ನು ಬಹಿರಂಗಪಡಿಸಲಾಗುವುದು ಎನ್ನಲಾಗಿದೆ.

ಹೀಗಾಗಿ ಹಳೆಯ ಮತ್ತು ಅನರ್ಹ ವಾಹನಗಳನ್ನು ಹೊರಹಾಕುವ ಉದ್ದೇಶದಿಂದ ಸ್ವಯಂಪ್ರೇರಿತವಾಗಿ ವಾಹನವನ್ನು ಸ್ಕ್ರ್ಯಾಪ್ ಮಾಡಲು ಮುಂದೆ ಬರುವವರಿಗೆ ಪ್ರೋತ್ಸಾಹಧನ ನೀಡುವ ಸಾಧ್ಯತೆ ಇದೆ.

English summary

Govt To Announce Incentive For Scrapping Old Vehicle Soon

The government will announce incentives for scrapping old, polluting vehicles in the next few weeks Giridhar Aramane on Friday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X