ಮುಂದಿನ 3 ತಿಂಗಳು ಸರ್ಕಾರವೇ ಪಾವತಿಸಲಿದೆ PF ಹಣ: 75% ಇಪಿಎಫ್ ಮುಂಗಡ ಮೊತ್ತ ಪಡೆಯಲು ಅವಕಾಶ

ದೇಶವ್ಯಾಪಿ ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಬಿಕಟ್ಟಿನಲ್ಲಿ ಸಿಲುಕಿದ್ದು, ರಿಲೀಫ್ ನೀಡಲು ಕೇಂದ್ರ ಸರ್ಕಾರ 1.70 ಲಕ್ಷ ಕೋಟಿ ರುಪಾಯಿಯ ಗರೀಬ್ ಕಲ್ಯಾಣ್ ಯೋಜನೆಯನ್ನು ಇಂದು ಘೋಷಿಸಿದೆ.

ಅನೇಕ ಯೋಜನೆಗಳನ್ನು ಜಾರಿಗೆ ತರಲಿರುವ ಕೇಂದ್ರ ಸರ್ಕಾರ ಲಕ್ಷಾಂತರ ಉದ್ಯೋಗಿಗಳಗೆ ನೆರವಾಗುವಂತೆ ಹಾಗೂ ಉದ್ಯೋಗದಾತರ ಹೊರೆಯನ್ನು ತಗ್ಗಿಸಲು ತಾನೇ ಸ್ವತಃ ಮುಂದಿನ 3 ತಿಂಗಳ ಕಾಲ ಪಿಎಫ್ ಹಣ ಪಾವತಿಸುವುದಾಗಿ ತಿಳಿಸಿದೆ.

ಮುಂದಿನ 3 ತಿಂಗಳು ಸರ್ಕಾರವೇ ಪಾವತಿಸಲಿದೆ PF ಹಣ

ಒಟ್ಟು 24 ಪರ್ಸೆಂಟ್ ಪಿಎಫ್ ಹಣವನ್ನು ಸರ್ಕಾರವೇ ಪಾವತಿ ಮಾಡುವುದಾಗಿ ಹೇಳಿದೆ. ಎರಡೂ ಕಡೆಯ ಪಿಎಫ್ ಹಣವನ್ನು ಅಂದರೆ ಉದ್ಯೋಗದಾತ ಹಾಗೂ ಉದ್ಯೋಗಿಯ ಎರಡೂ ಕಡೆಯ ಹಣ ಕಟ್ಟಲಿದೆ. ಉದ್ಯೋಗದಾತರ 12 ಪರ್ಸೆಂಟ್, ಹಾಗೂ ಉದ್ಯೋಗಿಯ 12 ಪರ್ಸೆಂಟ್ ಪಿಎಫ್ ಹಣವನ್ನು ಸರ್ಕಾರ ಕಟ್ಟಲಿದೆ.

ಆದರೆ ಈ ನಿಯಮ ಅನ್ವಯವಾಗುವುದು ಯಾವ ಸಂಸ್ಥೆಯಲ್ಲಿ 100ಕ್ಕಿಂತ ಕಮ್ಮಿ ಇರುವ ಉದ್ಯೋಗಿಗಳಿರುವ ಸಂಸ್ಥೆಗೆ ಅನ್ವಯವಾಗಲಿದೆ. ಅದರಲ್ಲೂ 90 ಪರ್ಸೆಂಟ್ ಉದ್ಯೋಗಿಗಳ ಸಂಬಳ 15,000ದೊಳಗೆ ಇದ್ದರೆ ಈ ಫಲಾನುಭವ ಸಿಗಲಿದೆ. ಸರ್ಕಾರದ ಈ ಯೋಜನೆಯಿಂದಾಗಿ 4 ಲಕ್ಷ ಸಂಸ್ಥೆಗಳ 80 ಲಕ್ಷ ಉದ್ಯೋಗಿಗಳಿಗೆ ಸಹಾಯವಾಗಲಿದೆ.

ಇದರ ಜೊತೆಗೆ ಇಪಿಎಫ್ ಯೋಜನೆಗೆ ತಿದ್ದುಪಡಿ ತರಲಾಗಿದ್ದು, ಮರುಪಾವತಿ ಮಾಡದಿರದ ವ್ಯವಸ್ಥೆಯಡಿ 75 ಪರ್ಸೆಂಟ್ ಇಪಿಎಫ್ ಮುಂಗಡ ಮೊತ್ತ ಪಡೆಯಲು ಅವಕಾಶ ನೀಡಲಾಗುತ್ತದೆ. ಕಾರ್ಮಿಕರು 3 ತಿಂಗಳ ಸಂಬಳ ಅಥವಾ 75 ಪರ್ಸೆಂಟ್‌ರಷ್ಟು ಮುಂಗಡ ಮೊತ್ತ. ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಪಡೆಯಬಹುದಾಗಿದೆ. ಇದರಿಂದ ಇಪಿಎಫ್ ನೋಂದಾಯಿಸಿರುವ 4.8 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+