For Quick Alerts
ALLOW NOTIFICATIONS  
For Daily Alerts

ಜೂನ್ 1ರಿಂದ ಚಿನ್ನಾಭರಣಗಳ ಮೇಲೆ ಹಾಲ್‌ಮಾರ್ಕ್ ಕಡ್ಡಾಯ

|

ಗ್ರಾಹಕರ ಹಿತ ರಕ್ಷಿಸಲು ಭಾರತದ ಮಹಾಲೇಖಪಾಲಕರು(CAG) ನೀಡಿರುವ ಸಲಹೆಯಂತೆ ಚಿನ್ನಾಭರಣಗಳ ಮೇಲೆ ಹಾಲ್‌ಮಾರ್ಕ್ ಕಡ್ಡಾಯಗೊಳಿಸಲಾಗುತ್ತಿದೆ, ಜೂನ್ 1 ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

 

ಪ್ರತಿಷ್ಠಿತ ಲೋಹದ ಪರಿಶುದ್ಧತೆಯನ್ನು ಖಾತ್ರಿ ಪಡಿಸಲು ಇದು ಕಡ್ಡಾಯವಾಗಬೇಕಿದ್ದು, ಗ್ರಾಹಕ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿರುವ ಭಾರತೀಯ ಗುಣಮಟ್ಟ ದಳ (ಬಿಐಎಸ್)ಗೆ ಅಧಿಕೃತವಾಗಿ ಹಾಲ್‌ಮಾರ್ಕ್ ನೀಡುವ ಅಧಿಕಾರವಿದೆ.

ಚಿನ್ನಾಭರಣ ಪರಿಶುದ್ದತೆ ಅಳೆಯುವುದು ಹೇಗೆ?

ಚಿನ್ನಾಭರಣಗಳ ಮೇಲೆ ಹಾಲ್‌ಮಾರ್ಕ್ ಕಡ್ಡಾಯಗೊಳಿಸದಿರುವುದರಿಂದ ಆಭರಣ ತಯಾರಕರು ಸಮರ್ಪಕವಾಗಿ ಭಾರತೀಯ ಆಭರಣಗಳನ್ನು ನೀಡದಿರುವುದರಿಂದ ಗ್ರಾಹಕರು ಪರಿಶುದ್ಧವಲ್ಲದ ಆಭರಣಗಳನ್ನು ಖರೀದಿಸುತ್ತಿದ್ದಾರೆ ಎಂದು ಸಿಎಜಿ ತನ್ನ ವರದಿಯಲ್ಲಿ ತಿಳಿಸಿದೆ.

ಜೂನ್ 1ರಿಂದ ಚಿನ್ನಾಭರಣಗಳ ಮೇಲೆ ಹಾಲ್‌ಮಾರ್ಕ್ ಕಡ್ಡಾಯ

Bureau of Indian Standards(ಬಿಐಎಸ್) ಎಲ್ಲಾ ಉತ್ಪನ್ನಗಳ ಗುಣಮಟ್ಟ ಅಳೆಯುವ ದೇಶದ ಸರ್ವೋಚ್ಚ ಸಂಸ್ಥೆಯಾಗಿದ್ದು, ಗ್ರಾಹಕರಿಗೆ ಗುಣಮಟ್ಟದ ಭರವಸೆಯನ್ನು ಕಡ್ಡಾಯಗೊಳಿಸುವ ಅಧಿಕಾರವಿದೆ.

ಈ ಮಾರ್ಕ್ ಚಿನ್ನಾಭರಣವನ್ನು ಎಲ್ಲಿ ತಯಾರು ಮಾಡಲಾಗಿದೆ? ಯಾವ ವರ್ಷ ತಯಾರಿಸಲಾಗಿದೆ ಎಂಬುದನ್ನು ತಿಳಿಸುತ್ತದೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಲಾಗ್ ಇನ್ ಆಗುವುದರ ಮುಖೇನ ಪಡೆದುಕೊಳ್ಳಬಹುದು. ಹಾಲ್ ಮಾರ್ಕ್ ಕೇಂದ್ರಗಳ ವಿವರ ಇಲ್ಲಿದೆ. ಕ್ಲಿಕ್ ಮಾಡಿ.

ಬಿಐಎಸ್‌ನಲ್ಲಿ ಇಲ್ಲಿ ತನಕ 34,647 ಆಭರಣ ಸಂಸ್ಥೆಗಳು ನೋಂದಣಿ ಮಾಡಿಕೊಂಡಿವೆ. ಶೇ 40ರಷ್ಟು ಮಾತ್ರ ಹಾಲ್ ಮಾರ್ಕ್ ಪಡೆಯಲು ಸಾಧ್ಯವಾಗಿವೆ.ಇನ್ಮುಂದೆ ಬಿಐಎಸ್ ನೋಂದಣಿ, ಹಾಲ್ ಮಾರ್ಕ್ ಇಲ್ಲದ ಆಭರಣಗಳಿಗೆ ಮಾನ್ಯತೆ ಇರುವುದಿಲ್ಲ ಎಂದು ನಿರ್ದೇಶಕ ಪ್ರಮೋದ್ ಕುಮಾರ್ ತಿವಾರಿ ಹೇಳಿದ್ದಾರೆ.

ಜೂನ್ 1 ರಿಂದ ಆಭರಣಗಾರರು 14, 18 ಹಾಗೂ 22 ಕ್ಯಾರೆಟ್ ಚಿನ್ನಾಭರಣಗಳನ್ನು ಮಾತ್ರ ಮಾರಾಟ ಮಾಡಬಹುದಾಗಿದೆ. ಅಪರಂಜಿ ಚಿನ್ನ ಮಾರಾಟಕ್ಕೆ ನೋಂದಣಿ, ಪರಿಶುದ್ಧತೆಯ ಮುದ್ರೆ ಅಗತ್ಯ.(ಪಿಟಿಐ)

Read more about: gold ಚಿನ್ನ
English summary

Govt to implement mandatory gold hallmarking from Jun 1

The government on Tuesday said it is fully prepared to implement mandatory hallmarking of gold jewellery and artefacts from June 1, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X