GR Exclusive: 'ಮಾತೃ ಮಿಲ್ಲೆಟ್ಸ್' ತಿಂಗಳಿಗೆ 2,000 ಕೆ.ಜಿ ಪೌಡರ್ ಮಾರಾಟ..ಆರೋಗ್ಯದ ಹಾದಿಯಲ್ಲಿ ಲಕ್ಷಗಟ್ಟಲೆ ಲಾಭ!

ಆರೋಗ್ಯವೇ ಸಂಪತ್ತು ಎಂಬ ಮಾತು ಕೇವಲ ಮಾತಲ್ಲ. ಅದೊಂದು ಬದುಕಿನ ತಾತ್ವಿಕ ಶ್ರೇಣಿ. ಆರೋಗ್ಯವೇ ಭಾಗ್ಯ ಎನ್ನುವ ಮಾತು ಎಂದಿಗೂ ಸುಳ್ಳಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಜನರ ಲೈಫ್‌ ಸ್ಟೈಲ್ ನೋಡಿದ್ರೆ, ಆರೋಗ್ಯ ಎನ್ನುವುದು ಕಳೆದುಹೋಗಿರುವ ನಿಧಿ ಎನ್ನಬಹುದು. ಇದನ್ನೇ ಗಮನದಲ್ಲಿಟ್ಟುಕೊಂಡು ಶುರುವಾಗಿದ್ದೇ "ಮಾತೃ ಹೆಲ್ತ್ ಮಿಲ್ಲೆಟ್ಸ್". ಆರು ವರ್ಷಗಳ ಹಿಂದೆ ಶುರುವಾದ ಮಾತೃ ಮಿಲ್ಲೆಟ್ಸ್ ಇಂದು ಎಷ್ಟೋ ಜನರ ಆರೋಗ್ಯದ ಭಾಗವಾಗಿದೆ.

'ಮಾತೃ ಮಿಲ್ಲೆಟ್ಸ್' ಆರೋಗ್ಯದ ಹಾದಿಯಲ್ಲಿ ಲಕ್ಷಗಟ್ಟಲೆ ಲಾಭ!

ಪೂರ್ಣವಾಗಿ ಕಾನೂನುಬದ್ಧವಾಗಿ ಸ್ಥಾಪನೆಯಾದ ಸಂಸ್ಥೆ:

ಜಿಎಸ್‌ಟಿ, FSSAI ಸೇರಿದಂತೆ ಎಲ್ಲಾ ಅಗತ್ಯ ಲೈಸೆನ್ಸ್‌ಗಳನ್ನು ಆನ್‌ಲೈನ್‌ ಮೂಲಕ ಪಡೆದುಕೊಂಡು, ಸಂಪೂರ್ಣವಾಗಿ ಕಾನೂನುಬದ್ಧ ವ್ಯವಹಾರದ ರೂಪ ನೀಡಿದರು. ಚಿನ್ನವನ್ನು ಅಡವಿಟ್ಟು ಆರಂಭವಾದ ಈ ವ್ಯವಹಾರದಲ್ಲಿ ಲಾಭದ ಬಗ್ಗೆ ಯಾವುದೇ ಲೆಕ್ಕಾಚಾರವಿಲ್ಲದೆ, ಆರೋಗ್ಯದ ಸೇವೆಯೇ ಪ್ರಧಾನ ಗುರಿಯಾಯಿತೆಂಬುದು ಅವರ ದೃಷ್ಟಿಕೋನ.

ಉತ್ಪನ್ನಗಳ ವೈಶಿಷ್ಟ್ಯತೆ:

ಮಾತೃ ಹೆಲ್ತ್ ಮಿಲ್ಲೆಟ್ಸ್‌ನ ಉತ್ಪನ್ನಗಳು ಸಾಮಾನ್ಯ ಮಿಲ್ಲೆಟ್ ಮಿಶ್ರಣವಲ್ಲ. ಇದರಲ್ಲಿ ಸಿರಿಧಾನ್ಯಗಳು, ಮೊಳಕೆ ಬೀಜಗಳು, ಹರ್ಬಲ್ ಮಸಾಲೆ, ನಾಲ್ಕು ವಿಧದ ಸೊಪ್ಪುಗಳು, ಜೀರಿಗೆ, ಮೆಣಸು, ಡ್ರೈಫ್ರೂಟ್ಸ್ ಮುಂತಾದ ಪೌಷ್ಟಿಕ ಅಂಶಗಳು ಸೇರಿಸಿ ಆರೋಗ್ಯಪೂರ್ಣ ಮಿಶ್ರಣ ರೂಪಿಸಲಾಯಿತು. ಇದು ಮಕ್ಕಳಿಂದ ಹಿರಿಯ ನಾಗರಿಕರ ತನಕ ಎಲ್ಲರಿಗೂ ಪೂರಕವಾಗುವಂತಿದೆ.

ಯಾವೆಲ್ಲಾ ಉತ್ಪನ್ನಗಳು ಇವರಲ್ಲಿ ಲಭ್ಯ?

ಮಾತೃ ಹೆಲ್ತ್ ಪ್ರಾಡಕ್ಟ್ಸ್ ಸಂಸ್ಥೆಯು ತಮ್ಮ ವೆಬ್‌ಸೈಟ್‌ನಲ್ಲಿ ವಿವಿಧ ಮಿಲೆಟ್ ಆಧಾರಿತ ಆರೋಗ್ಯಪೂರ್ಣ ಆಹಾರ ಉತ್ಪನ್ನಗಳನ್ನು ಒದಗಿಸುತ್ತಿದೆ.

Maathru Kids Special Millet Health Mix: ಇದು ಮಕ್ಕಳ ಬೆಳವಣಿಗೆಯು ಹಾಗೂ ಪೌಷ್ಟಿಕಾಂಶಕ್ಕಾಗಿ ವಿನ್ಯಾಸಗೊಳ್ಳಲಾಗಿದೆ.

Maathru Pregnancy Millet Health Mix: ಗರ್ಭಿಣಿ ಮಹಿಳೆಯರಿಗೆ ಸೂಕ್ತವಾಗಿದ್ದು, ಗರ್ಭಾವಸ್ಥೆಯ ಪೋಷಣೆಗೆ ಉಪಯುಕ್ತವಾಗಿದೆ.

Maathru Lactating Millet Health Mix: ಎನ್ನುವುದು ಸ್ತನ್ಯಪಾನ ಮಾಡುತ್ತಿರುವ ತಾಯಂದಿರಿಗೆ ಪೌಷ್ಟಿಕ ಆಹಾರವಾಗಿದೆ.

Maathru Women Millet Health Mix: ಲಭ್ಯವಿದ್ದು, ಸಾಮಾನ್ಯ ಮಹಿಳೆಯರಿಗಾಗಿ ದೈನಂದಿನ ಆರೋಗ್ಯ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

Maathru Saindhav Rice Papad: ಎನ್ನುವ ಸೈನಿಕ್ ಉಪ್ಪಿನ ಹುಡಿ ಹಾಗೂ ಮಿಲೆಟ್‌ಗಳಿಂದ ತಯಾರಿಸಿದ ಪಾಪಡ್ ಉತ್ಪನ್ನವೂ ಇಲ್ಲಿ ಲಭ್ಯವಿದೆ.

ಇವುಗಳೆಲ್ಲವೂ ISO ಮತ್ತು FSSAI ಪ್ರಮಾಣಿತವಾಗಿದ್ದು, ನೈಸರ್ಗಿಕ ಹಾಗೂ ಪೌಷ್ಟಿಕತೆಯ ಮೇಲೆ ಕೇಂದ್ರೀಕರಿಸಿಕೊಂಡಿವೆ.

ವ್ಯಾಪಾರದ ವಿಸ್ತಾರ ಮತ್ತು ಮಾದರಿ:

ಪ್ರತಿಯೊಂದು ಕೆ.ಜಿಗೆ 60 ರಿಂದ 70 ರೂ. ಲಾಭ ಸಾಧಿಸುತ್ತಿರುವ ಈ ಸಂಸ್ಥೆ, ಪ್ರತಿ ತಿಂಗಳು ಸುಮಾರು 2000 ಕೆ.ಜಿ ಉತ್ಪನ್ನ ಮಾರಾಟ ಮಾಡುತ್ತಿದೆ. 399 ರೂ. (1 ಕೆ.ಜಿ) ಮತ್ತು 200 ರೂ. (ಅರ್ಧ ಕೆ.ಜಿ) ದರದಲ್ಲಿ ಮಾರಾಟ ನಡೆಯುತ್ತಿದೆ. 60 ರೂ. ಲಾಭ ಎಂದು ಲೆಕ್ಕ ಹಾಕಿದರೂ ಪ್ರತಿ ತಿಂಗಳು ಲಕ್ಷ ಲಕ್ಷ ಸಂಪಾದನೆ ಮಾಡುವ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಮಸಾಲಾ ಉತ್ಪನ್ನಗಳೂ ಲಭ್ಯವಿವೆ. ಖಾಸಗಿ ಗ್ರಾಹಕರಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಿದ್ದು, ಕೊರಿಯರ್‌ ಮೂಲಕ ಮನೆಮನೆಯಿಗೆ ತಲುಪಿಸುತ್ತಿದ್ದಾರೆ. ಅಮೇಜಾನ್, ಫ್ಲಿಪ್‌ಕಾರ್ಟ್‌ ಮಾದರಿಯ ಈ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲದೇ, ತಾವು ನೇರ ಗ್ರಾಹಕರಿಗೂ ತಮ್ಮ ಪ್ರಾಡಕ್ಟ್ ಸಪ್ಲೈ ಮಾಡುತ್ತಾರೆ.

ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿದ ನಾಯಕತ್ವ:

ವಿಪಕ್ಷೀಯ ಕಂಪನಿಗಳು ಉತ್ಪನ್ನ ಮಾರಾಟ ತಡೆಹಿಡಿಯಲು ಯತ್ನಿಸಿದರೂ, ಅವರು ಹಿಂದೇಟುಹಾಕಲಿಲ್ಲ. ಬದಲಾಗಿ, ಗ್ರಾಹಕರ ನೇರ ಸಂಪರ್ಕವನ್ನು ಇನ್ನಷ್ಟು ಬಲಪಡಿಸಿದರು. ಈ ದೃಷ್ಟಿಕೋಣದಿಂದಲೇ ಇವತ್ತು ಸುಮಾರು 60 ಮಂದಿ ಉದ್ಯೋಗಕ್ಕೆ ಅವಕಾಶ ಸಿಕ್ಕಿದೆ. ಅವರು ಹೇಳುವಂತೆ, "ಇಲ್ಲಿ ಬೃಹತ್ ವಿದ್ಯಾಭ್ಯಾಸವಿಲ್ಲ, ಆದರೆ ಮಾರುಕಟ್ಟೆ ಅರಿವು ಇದ್ದರೆ ಸಾಕು."

ಭವಿಷ್ಯದ ಗುರಿಗಳು:

ಮಿಲ್ಲೆಟ್ ಆಧಾರಿತ ಕುಕೀಸ್, ರೊಟ್ಟಿ, ಇಡ್ಲಿ, ದೋಸೆ ಮಿಶ್ರಣ, ಪ್ರೋಟೀನ್ ಪೌಡರ್, ಸ್ಲಿಮ್ ಪೌಡರ್ ಮುಂತಾದ ರೆಡಿ ಟು ಕುಕ್ ಉತ್ಪನ್ನಗಳ ತಯಾರಿ ಮುಂದಿನ ಹಂತದಲ್ಲಿ ಆರಂಭಿಸಲು ಉತ್ಸುಕರಾಗಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ "ಮಾತೃ ಮಿಲ್ಲೆಟ್ಸ್" ಸಂಸ್ಥೆಯನ್ನು ನಂಬರ್ 1 ಸ್ಥಾನಕ್ಕೆ ತಲುಪಿಸಲು ಉದ್ದೇಶವಿದೆ. ಕೆಲವರ ವಿರೋಧಗಳಿಂದ ಈ ಗುರಿ ಹಿಂದಿನ ಎರಡು ವರ್ಷಗಳಲ್ಲೇ ತಲುಪಲೇಬೇಕಿತ್ತು ಎಂಬವರ ಅನುಭವಗಳು, ಇಂದು ಅವರಿಗೆ ಇನ್ನಷ್ಟು ಧೈರ್ಯ ತಂದಿವೆ.

"ಮಾತೃ ಮಿಲ್ಲೆಟ್ಸ್ ನನ್ನ ಕನಸು, ಆದರೆ ಲಾಭವೊಂದೇ ಅದರ ಉದ್ದೇಶವಲ್ಲ. ಅದರಲ್ಲಿ ಜನರ ಆರೋಗ್ಯವಿದೆ. ಕೊರೋನಾ ಸಮಯದಲ್ಲಿ ಅನುಭವಿಸಿದ ಸಮಸ್ಯೆಗಳೇ ಈ ನಿರ್ಧಾರಕ್ಕೆ ಪ್ರೇರಣೆ. ಚಿನ್ನವನ್ನು ಅಡವಿಟ್ಟು ಮೊದಲ ಹೆಜ್ಜೆ ಇಟ್ಟೆ. ಲಾಭ ಎಷ್ಟೇ ತಡವಾಗಲಿ, ನಂಬಿಕೆಯು ಯಾವತ್ತೂ ಕುಸಿಯಲಿಲ್ಲ."
- ವನಜಾಕ್ಷಿ, ಸಂಸ್ಥಾಪಕಿ, ಮಾತೃ ಹೆಲ್ತ್ ಮಿಲ್ಲೆಟ್ಸ್

ಪ್ರಶಸ್ತಿಗಳು:

ಹಲವು ಸಂಘ ಸಂಸ್ಥೆಗಳು, ಕೃಷಿ ಇಲಾಖೆ, ಬೇರೆ ಬೇರೆ ಸಂಸ್ಥೆಗಳು, ಮಾಧ್ಯಮಗಳು ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಂದಲೂ ಪ್ರಶಸ್ತಿ ಲಭಿಸಿದೆ. ಈ ವರೆಗೂ ಇವರ ಸಾಧನೆ ಮೆಚ್ಚಿ 180 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.

'ಮಾತೃ ಮಿಲ್ಲೆಟ್ಸ್' ಆರೋಗ್ಯದ ಹಾದಿಯಲ್ಲಿ ಲಕ್ಷಗಟ್ಟಲೆ ಲಾಭ!

ಈ ನಿಟ್ಟಿನಲ್ಲಿ ಈಗ ಹೊಸ ಇನ್ವೆಸ್ಟರ್ ಸಿಕ್ಕರೆ, ಗುರಿ ದಾರಿ ಮತ್ತಷ್ಟು ಸುಗಮವಾಗಬಹುದೆಂಬ ನಂಬಿಕೆಯೂ ಇದೆ. ತಮ್ಮ ಉದ್ಯಮದ ನಿಷ್ಠೆ ಮತ್ತು ಗಂಭೀರತೆಗೆ ಆಧಾರವಾಗಿ, ಈ ಕನಸು ಮುಂದಿನ ಹಂತ ತಲುಪುವುದು ನಿಶ್ಚಿತವೆಂಬ ವಿಶ್ವಾಸ ಅವರ ಮಾತುಗಳಲ್ಲಿ ಕಾಣಿಸುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+