ಸರ್ಕಾರಿ ನೌಕರರೇ ಇಲ್ಲಿ ಕೇಳಿ..! ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಇಂದು ದೊಡ್ಡ ಸಿಹಿ ಸುದ್ದಿಯೊಂದನ್ನು ಕೊಟ್ಟಿದೆ. ಹೌದು, ಸರ್ಕಾರಿ ನೌಕರರಿಗೆ ಬಜೆಟ್ ಮಂಡನೆಗೂ ಮುನ್ನವೇ 8ನೇ ವೇತನ ಆಯೋಗ ರಚನೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ಬಹುದಿನದ ಬೇಡಿಕೆ ನೆರವೇರಿದೆ. ಹಾಗಿದ್ರೆ, ಗ್ರಾಚ್ಯುಟಿ ನಿಯಮಗಳು ಪ್ರಕಾರ 5, 7, 10 ವರ್ಷಗಳ ಸೇವೆಗೆ ನೌಕಕರು ಪಡೆಯುವ ಗ್ರಾಚ್ಯುಟಿ ಎಷ್ಟು? ಗ್ರಾಚ್ಯುಟಿ ಪಡೆಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ? ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಸರ್ಕಾರ ಉದ್ಯೋಗಿಗಳಿಗೆ ಅವರ ನಿರಂತರ ಸೇವೆಯನ್ನು ಗುರುತಿಸಿ ಅವರ ಶ್ರಮ ಮತ್ತು ಕೊಡುಗೆಗಳನ್ನು ಗೌರವಿಸಲು ಪಾವತಿಸುವ ಮೊತ್ತವನ್ನೇ ಗ್ರಾಚ್ಯುಟಿ ಎನ್ನುತ್ತಾರೆ. ಇನ್ನೂ ನೌಕರರಿಗೆ ಸರ್ಕಾರವು ನಿಗದಿಪಡಿಸಿದ ಗ್ರಾಚ್ಯುಟಿಯು ಪಿಂಚಣಿ ಮತ್ತು ಭವಿಷ್ಯ ನಿಧಿಗೆ ಸಮವಾಗಿ ಇರುತ್ತದೆ.10ಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸಂಸ್ಥೆಗಳಿಗೆ ಗ್ರಾಚ್ಯುಟಿ ನಿಯಮಗಳು ಅಪ್ಲೈ ಆಗುತ್ತವೆ.

ಒಂದೇ ಸಂಸ್ಥೆಯಲ್ಲಿ 5 ವರ್ಷಗಳ ಕಾಲ ಕೆಲಸವನ್ನು ಮಾಡಿದ ಉದ್ಯೋಗಿಗೆ ಮಾತ್ರ ಗ್ರಾಚ್ಯುಟಿಗೆ ಅರ್ಹನಾಗುತ್ತೇನೆ ಎಂದು ಗ್ರಾಚ್ಯುಟಿ ನಿಯಮಗಳು ಹೇಳುತ್ತಾವೆ.ನೌಕರನ ಸೇವೆಯ ಪೂರ್ಣಗೊಂಡ ಪ್ರತಿ ವರ್ಷಕ್ಕೆ 15 ದಿನಗಳ ವೇತನದ ದರದಲ್ಲಿ ಗ್ರಾಚ್ಯುಟಿಯನ್ನು ಪಾವತಿಸಬೇಕಾಗುತ್ತದೆ ಎಂದು ಗ್ರಾಚ್ಯುಟಿ ನಿಯಮದಲ್ಲಿ ಮಾಹಿತಿ ತಿಳಿಸಲಾಗಿದೆ.
ಗ್ರಾಚ್ಯುಟಿ ಲೆಕ್ಕ ಹಾಕುವುದು ಹೇಗೆ?
ಗ್ರಾಚ್ಯುಟಿ ಲೆಕ್ಕಾಚಾರದ ಸೂತ್ರ:
(ಕೊನೆಯ ಸಂಬಳ) x (ಸೇವೆಯ ವರ್ಷಗಳು) x (15/26) ಗುಣಾಕಾರ ಮಾಡಬೇಕಾಗುತ್ತದೆ.
ಅಂತಿಮ ಸಂಬಳದ ವಿವರ: ಮೂಲ ವೇತನ, ತುಟ್ಟಿಭತ್ಯೆ (ಡಿಎ) ಮತ್ತು ಕಮಿಷನ್ ಒಳಗೊಂಡಿರಬೇಕಾಗುತ್ತದೆ.
ಕೆಲಸದ ದಿನಗಳ ಲೆಕ್ಕ : ಒಂದು ತಿಂಗಳಲ್ಲಿ 26 ಕೆಲಸದ ದಿನಗಳನ್ನು ಲೆಕ್ಕಕ್ಕೆ ತಗೆದುಕೊಳ್ಳಲಾಗುತ್ತದೆ.
15 ದಿನದ ಸರಾಸರಿ ಮೊತ್ತ: 15 ದಿನಗಳ ಸಂಬಳದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ.
ನಿಮ್ಮಗೆ ತಿಂಗಳಿಗೆ 30,000 ರೂ ಸಂಬಳ ಬರುತ್ತಿದ್ದು, ನಿಮ್ಮ ಸೇವಾ ಅವಧಿ ಐದು ವರ್ಷಗಳು ಅಂದರೆ ಹೇಗೆ ಲೆಕ್ಕಚಾರವನ್ನು ಮಾಡಬೇಕು ಎಂಬುವುದನ್ನು ಈ ಕೆಳಗಿಂತೆ ನೀಡಲಾಗಿದೆ.
5 ವರ್ಷಗಳ ಸೇವೆಯಲ್ಲಿ ನಿಮಗೆ ಸಿಗುವ ಗ್ರಾಚ್ಯುಟಿ ಮೊತ್ತ
ಕೊನೆಯ ಸಂಬಳ: 30,000 ರೂ, ಅಂದರೆ ನ
ಲೆಕ್ಕಾಚಾರ: 30,000 x 5 x (15/26)
ಒಟ್ಟು ಗ್ರಾಚ್ಯುಟಿ ಮೊತ್ತ: 86,538.46 ರೂಗಳು ನಿಮಗೆ ಸಿಗುತ್ತದೆ.
7 ವರ್ಷಗಳ ಸೇವೆಯಲ್ಲಿ ನಿಮಗೆ ಸಿಗುವ ಗ್ರಾಚ್ಯುಟಿ ಹಣ
ಕೊನೆಯ ಸಂಬಳ: 30,000 ರೂ.
ಲೆಕ್ಕಾಚಾರ: 30,000 x 7 x (15/26)
ಒಟ್ಟು ಗ್ರಾಚ್ಯುಟಿ ಮೊತ್ತ: 1,21,153.84 ರೂಗಳು ನಿಮ್ಮಗೆ ಗ್ರಾಚ್ಯುಟಿ ಹಣ ಸಿಗುತ್ತದೆ.
10 ವರ್ಷಗಳ ಸೇವೆಯಲ್ಲಿ ನಿಮಗೆ ಸಿಗುವ ಗ್ರಾಚ್ಯುಟಿ ಹಣ
ಕೊನೆಯ ಸಂಬಳ: 30,000
ಲೆಕ್ಕಾಚಾರ: 30,000 x 10 x (15/26)
ಒಟ್ಟು ಗ್ರಾಚ್ಯುಟಿ ಮೊತ್ತ: 1,73,076.92 ರೂಗಳು ಸಿಗುತ್ತದೆ.
ಗ್ರಾಚ್ಯುಟಿಯಿಂದ ನಿಮಗೆ ಸಿಗುವ ಲಾಭಗಳೇನು?
*ಉದ್ಯೋಗದ ಕೊನೆಯಲ್ಲಿ ಒಂದು ದೊಡ್ಡ ಮೊತ್ತದ ಹಣ ಸಿಗುತ್ತದೆ.
*ಪಿಎಫ್‌ನಂತೆ, ಗ್ರಾಚ್ಯುಟಿಗೆ ಸರ್ಕಾರವು ಗ್ಯಾರಂಟಿ ನೀಡುತ್ತದೆ.
*ಗ್ರಾಚ್ಯುಟಿ ಮೊತ್ತವು ನಿಮಗೆ ತೆರಿಗೆ ವಿನಾಯಿತಿ ಸಹ ಸಿಗುತ್ತದೆ.
*5 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ನಿರಂತರವಾಗಿ ಕಂಪನಿಯಲ್ಲಿ ಸೇವೆ ಸಲ್ಲಿಸಿದ ಪ್ರತಿಯೊಬ್ಬ ಉದ್ಯೋಗಿಯು ಗ್ರಾಚ್ಯುಟಿಯ ಪ್ರಯೋಜನವನ್ನು ಪಡೆಯಬಹುದು.
ಗ್ರಾಚ್ಯುಟಿ ನಿಯಮಗಳು ಯಾವ ಸಂದರ್ಭಗಳಲ್ಲಿ ಬದಲಾಗುತ್ತವೆ?
*ಕಂಪನಿಯು ಗ್ರಾಚ್ಯುಟಿ ಕಾಯ್ದೆಯಡಿಯಲ್ಲಿ ನೋಂದಾಯಿಸದಿದ್ದರೆ, ನಿಯಮಗಳು ಬದಲಾಗಬಹುದು.
*ತಿಂಗಳ ವೇತನದ ಅರ್ಧದಷ್ಟು ಮೊತ್ತವನ್ನು ಪ್ರತಿ ವರ್ಷ ಪಾವತಿಸಲಾಗುತ್ತದೆ.
*ಸಂಬಳ ಪಡೆಯುವ ಉದ್ಯೋಗಿಗಳು, ಸರ್ಕಾರಿ ನೌಕರರು ಮತ್ತು ಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಗ್ರಾಚ್ಯುಟಿ ತುಂಬಾ ಉಪಯೋಗವಾಗುತ್ತದೆ.
*ಹೀಗೆ ನೀವು ನಿಮ್ಮ ಉದ್ಯೋಗದ ಜೊತೆ ಗ್ರಾಚ್ಯುಟಿ ಹಣವನ್ನು ಉಳಿತಾಯ ಮಾಡಿಕೊಂಡ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡಿಕೊಳ್ಳಬಹುದು.


Click it and Unblock the Notifications