ಗ್ರೇಟರ್ ಬೆಂಗಳೂರು..ಇದೊಂದು ನಗರಾಭಿವೃದ್ಧಿ ಮತ್ತು ಆಡಳಿತ ಸುಧಾರಣೆಗೆ ಸಂಬಂಧಿಸಿದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ವೇಗವಾಗಿ ಬೆಳೆಯುತ್ತಿರುವ ಮಹಾನಗರವಾದ ಬೆಂಗಳೂರನ್ನು ಹೆಚ್ಚು ಸುಸೂತ್ರವಾಗಿ ನಿರ್ವಹಿಸಲು, ಈ ಯೋಜನೆಯು ಸಹಕರಿಸುತ್ತದೆ. ಅಂದರೆ ನಗರವನ್ನು ಹಲವಾರು ಪುರುಸಭೆಗಳಾಗಿ ವಿಂಗಡಿಸುವ ಮೂಲಕ ಆಡಳಿತ ವ್ಯವಸ್ಥೆಯನ್ನು ವಿಕೇಂದ್ರೀಕರಿಸುವ ಪ್ರಸ್ತಾಪವನ್ನು ಈ ಯೋಜನೆ ಒಳಗೊಂಡಿದೆ. ಈ ಒಂದು ಬಹು ನಿರೀಕ್ಷಿತ ಯೋಜನೆಯಾದ ಗ್ರೇಟರ್ ಬೆಂಗಳೂರು ಮಸೂದೆಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ತಡೆ ನೀಡಿದ್ದಾರೆ.

ಹೌದು, ರಾಜ್ಯಪಾಲರಾದ ಥಾವರ್ ಚಂಡ್ ಗೆಹ್ಲೋಟ್ ಅವರು ಈ ಯೋಜನೆಯನ್ನು ತಡೆಹಿಡಿದಿರುವ ಮುಖ್ಯ ಕಾರಣವೇನೆಂದರೆ, ಅವರು ಕೆಲವು ಪ್ರಮುಖ ಸ್ಪಷ್ಟೀಕರಣಗಳನ್ನು ಕೇಳುವ ಮೂಲಕ ಮಸೂದೆಯನ್ನು ಹಿಂತಿರುಗಿಸಿದ್ದಾರೆ. ಅಂದರೆ ಬೆಂಗಳೂರಿನ ಆಡಳಿತವನ್ನು ವಿಕೇಂದ್ರೀಕರಿಸಿ, ನಗರಾಭಿವೃದ್ಧಿಯನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ಪ್ರಸ್ತಾವಿತ ಈ ಮಸೂದೆ, ರಾಜ್ಯಪಾಲರ ಪರಿಶೀಲನೆಗೆ ಒಳಪಟ್ಟಿದೆ. ಆದರೆ ಅವರಿಗೆ ಈ ಯೋಜನೆಯಲ್ಲಿ ಒಂದಷ್ಟು ವಿಚಾರಗಳಲ್ಲಿ ಸ್ಪಷ್ಟನೆ ಕಂಡುಬಂದಿಲ್ಲ. ಹೀಗಾಗಿ ಮಸೂದೆಯನ್ನು ಹಿಂತಿರುಗಿಸಿದ್ದಾರೆ.ಈ ನಿರ್ಧಾರದಿಂದ ಸರ್ಕಾರದ ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ, ಆದರೆ ಮುಂದಿನ ಹಂತಗಳಲ್ಲಿ ಏನಾಗಲಿದೆ ಎಂಬ ಕುತೂಹಲ ನಾಗರಿಕರು ಹಾಗೂ ರಾಜಕೀಯ ವಲಯಗಳಲ್ಲಿ ಮೂಡಿಬಂದಿದೆ.
ನಿಜಕ್ಕೂ ಇದು ಸರ್ಕಾರದ ಪಾಲಿಗೆ ಹಿನ್ನಡೆ ಅಂತಲೇ ಭಾವಿಸಬಹುದು. ಬೆಂಗಳೂರು ನಗರದ ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ವಿಕೇಂದ್ರೀಕರಣವನ್ನು ಪ್ರೋತ್ಸಾಹಿಸಲು ಸರ್ಕಾರ ಕೈಗೊಂಡಿರುವ ಮಹತ್ವದ ಕ್ರಮಗಳಿಗೆ ಹೊಸ ತೊಡಕು ಎದುರಾಗಿರುವುದು ಸತ್ಯ. ಆದರೆ ರಾಜ್ಯಪಾಲರು ಈ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ, 2024ಕ್ಕೆ ಅನುಮೋದನೆ ನೀಡುವ ಮೊದಲು, ಕೆಲವು ಸ್ಪಷ್ಟೀಕರಣದ ಅಗತ್ಯವಿದೆ ಎಂದು ಹೇಳಿದ್ದಾರೆ.
ಅಂದರೆ ಈ ಮಸೂದೆ ಬಗ್ಗೆ ರಾಜಭವನದಲ್ಲಿ ಹಲವು ಹಂತದ ತಪಾಸಣೆ ನಡೆದಿದೆ. 74ನೇ ಸಾಂವಿಧಾನಿಕ ತಿದ್ದುಪಡಿಯು ಕಡ್ಡಾಯಗೊಳಿಸಿರುವ ಮಹಾನಗರ ಯೋಜನಾ ಸಮಿತಿಯ ಪಾತ್ರವನ್ನು ಈ ಮಸೂದೆ ನಿರ್ಲಕ್ಷಿಸುತ್ತದೆ ಎಂಬ ಪ್ರಮುಖ ಕಳವಳವನ್ನು ವ್ಯಕ್ತವಾಗಿದೆ. ನಗರಾಭಿವೃದ್ಧಿಯ ಪ್ರಮುಖ ನಿರ್ಧಾರಗಳನ್ನು ಈ ಸಮಿತಿಯ ಅನುಮೋದನೆಯಿಲ್ಲದೆ ಕೈಗೊಳ್ಳುವ ಶಕ್ತಿ ಹೊಸ ವ್ಯವಸ್ಥೆಗೆ ದೊರೆಯಲಿದೆ ಎಂಬುದನ್ನು ಆಕ್ಷೇಪಣೆ ಮಾಡುವಂತಾಗಿದೆ. ಇದರ ಹೊರತಾಗಿಯೂ, ಸರ್ಕಾರ ಈ ಮಸೂದೆಯನ್ನು ಮುಂದುವರಿಸುವ ಸಂಕಲ್ಪವನ್ನು ತೊಡಗಿಸಿಕೊಂಡಿದೆ.
ಇದಿಷ್ಟೇ ಅಲ್ಲ..ನಾಗರಿಕರು, ನಾಗರಿಕ ಗುಂಪುಗಳು ಮತ್ತು ಬಿಜೆಪಿಯಿಂದ ಈ ಮಸೂದೆಗೆ ಕಳೆದೆರಡು ವರ್ಷದಿಂದ ವಿರೋಧ ವ್ಯಕ್ತವಾಗುತ್ತಿದೆ. ಅವರೆಲ್ಲರೂ ಪ್ರಸ್ತಾವನೆಯನ್ನು ವಿರೋಧಿಸಿ ರಾಜ್ಯಪಾಲರಿಗೆ ವಿವರವಾದ ಜ್ಞಾಪಕ ಪತ್ರಗಳನ್ನು ಸಲ್ಲಿಸಿದ್ದರು. ಪ್ರಸ್ತಾವಿತ ಬದಲಾವಣೆಗಳು ಅಧಿಕಾರಶಾಹಿ ವಿಸ್ತರಣೆ, ಆರ್ಥಿಕ ದುರುಪಯೋಗ, ದುರ್ಬಲಗೊಂಡ ನಾಗರಿಕ ಭಾಗವಹಿಸುವಿಕೆ ಮತ್ತು ಚುನಾಯಿತ ಸ್ಥಳೀಯ ಸಂಸ್ಥೆಗಳ ಅಧಿಕಾರಗಳಲ್ಲಿ ಹಸ್ತಕ್ಷೇಪಕ್ಕೆ ಕಾರಣವಾಗಬಹುದು ವಾದ ವ್ಯಕ್ತವಾಗಿದೆ. ಅಲ್ಲದೇ ವಿಕೇಂದ್ರೀಕರಣ ಮಾದರಿಗಳು ಇತರ ನಗರಗಳಲ್ಲಿ ವಿಫಲವಾಗಿವೆ ಮತ್ತು ಬೆಂಗಳೂರಿನ ಸಾಂಸ್ಕೃತಿಕ ಮತ್ತು ಜನಸಂಖ್ಯಾ ಸಮಗ್ರತೆಗೆ ಸಂಭಾವ್ಯ ಅಪಾಯಗಳ ಬಗ್ಗೆ ಎಚ್ಚರಿಸುತ್ತವೆ ಎಂದು ಹೇಳಿದ್ದಾರೆ.
ಈ ರೀತಿಯ ಕಳವಳಗಳನ್ನೆಲ್ಲಾ ಗಮನಿಸಿದ ರಾಜ್ಯಪಾಲರು, ಈ ಯೋಜನೆ ಬಗ್ಗೆ ಸರ್ಕಾರವು ಮುಂದುವರಿಯುವ ಮೊದಲು ಅವುಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ನಾನು ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಗೆ ಸಂಬಂಧಿಸಿದಂತೆ, ಪ್ರಾತಿನಿಧ್ಯಗಳು ಮತ್ತು ಅವುಗಳ ಕಳವಳಗಳೆರಡನ್ನೂ ಪರಿಶೀಲಿಸಿದ್ದೇನೆ. ಮುಂದೆ ಹೋಗುವ ಮೊದಲು, ಎರಡೂ ಜ್ಞಾಪಕ ಪತ್ರಗಳಲ್ಲಿ ಕಂಡುಬಂದಿರುವ ಈ ಕಳವಳಗಳ ಬಗ್ಗೆ ಸ್ಪಷ್ಟನೆ ನೀಡುವುದು ಅತ್ಯಗತ್ಯ ಎಂದು ಹೇಳಿದ್ದಾರೆ. ಅಲ್ಲದೇ ಇದು ಕಾನೂನು ಮತ್ತು ಸಾರ್ವಜನಿಕ ಹಿತಾಸಕ್ತಿ ಸಮಸ್ಯೆಗಳನ್ನು ಒಳಗೊಂಡಿದೆ. ಹೀಗಾಗಿ ಇದಕ್ಕೆ ಈಗಲೇ ಅನುಮೋದನೆ ನೀಡಲಾಗಲ್ಲ ಎಂದು ಹೇಳಿದ್ದಾರೆ.
ಈ ಮಸೂದೆ ಹಿನ್ನಲೆ ಮತ್ತು ಸರ್ಕಾರದ ಉದ್ದೇಶ:
ಇನ್ನು ಈ ಮಸೂದೆಯ ಹಿನ್ನೆಲೆ ಹಾಗೂ ಉದ್ದೇಶ ಏನೆಂದರೆ, ಬೆಂಗಳೂರಿನ ಆಡಳಿತ ವ್ಯವಸ್ಥೆಯನ್ನು ಸುಧಾರಿಸುವುದಾಗಿದೆ. ನಗರವನ್ನು ಹಲವಾರು ಪುರುಸಭೆಗಳಾಗಿ ವಿಂಗಡಿಸುವ ಮೂಲಕ ಬೃಹತ್ ನಗರವನ್ನು ಉತ್ತಮವಾಗಿ ನಿರ್ವಹಿಸಲು ಈ ಮಸೂದೆಯನ್ನು ಯೋಜಿಸಲಾಗಿತ್ತು. ಬಹು ಪುರಸಭೆಗಳ ರಚನೆಯಿಂದ ಪ್ರತಿ ಪ್ರದೇಶಕ್ಕೆ ಸ್ವಾಯತ್ತತೆ ದೊರಕಲಿದ್ದು, ನಾಗರಿಕ ಸೇವೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನೆರವಾಗಲಿದೆ ಎಂದು ಸರ್ಕಾರ ನಂಬಿದೆ.
ಇನ್ನು ಮಸೂದೆಗೆ ತಡೆ ನೀಡಲಾಗಿದ್ದು, ಸದ್ಯ ಸರ್ಕಾರದ ಮುಂದಿನ ಹೆಜ್ಜೆ ಮಹತ್ವದ್ದಾಗಿದೆ. ರಾಜ್ಯಪಾಲರ ಆಕ್ಷೇಪಣೆಗಳನ್ನು ಸರಿಪಡಿಸುವ ಮೂಲಕ ಮಸೂದೆಯನ್ನು ಅನುಮೋದನೆಗೆ ತರಬೇಕಾದ ಅಗತ್ಯವಿದೆ. ಸರ್ಕಾರದ ಉದ್ದೇಶಗಳು ಅರ್ಥಪೂರ್ಣವಾದರೂ, ನಾಗರಿಕರ ಅನುಮೋದನೆಯಿಲ್ಲದೆ ಯಾವುದೇ ನೀತಿಯನ್ನು ಜಾರಿಗೆ ತರಲು ಸಾಧ್ಯವಿಲ್ಲ. ಇದು ಬೆಂಗಳೂರಿನ ಆಡಳಿತ ಪುನರ್‌ರಚನೆಯ ಹಾದಿಯಲ್ಲಿ ಪ್ರಮುಖ ತಿರುವಾಗಿದೆ. ಈ ವಿಚಾರ ಸರ್ಕಾರ ಮತ್ತು ನಾಗರಿಕರ ಪರಸ್ಪರ ಸಂವಾದದ ಮೂಲಕ ಯಾವುದೇ ಅಡಚಣೆಗಳನ್ನು ನಿವಾರಿಸಿ, ನಗರ ಅಭಿವೃದ್ಧಿಗೆ ಅನುಕೂಲವಾಗುವಂತೆ ಮುನ್ನಡೆಯಬೇಕು.
More From GoodReturns

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Highway: ರಾಜ್ಯದ ಈ ಭಾಗಕ್ಕೆ ಹೈವೇ ಡಿಮ್ಯಾಂಡ್…ಕೇಂದ್ರಕ್ಕೆ ಮನವಿ ಮಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Gruha Lakshmi: ಅಯ್ಯಯ್ಯೊ..79 ಕೋಟಿ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮಾ… 2.3 ಲಕ್ಷ ಫಲಾನುಭವಿಗಳ ಖಾತೆ ತಡೆ!

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Bengaluru Airport: ಇರಾನ್-ಇಸ್ರೇಲ್ ಯುದ್ಧ ಪರಿಣಾಮ ಬೆಂಗಳೂರು ಏರ್ಪೋರ್ಟ್ನಲ್ಲಿ 37 ವಿಮಾನಗಳು ರದ್ದು!

Bengaluru Airport: ಬೆಂಗಳೂರು ಏರ್ಪೋರ್ಟ್ಗೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಭೀತಿ! ಹಲವು ವಿಮಾನ ಹಾರಾಟ ರದ್ದು

Karnataka Property: ಕರ್ನಾಟಕದಲ್ಲಿ ದುಬಾರಿಯಾಗಲಿದೆ ಜಾಗದ ಮೌಲ್ಯ! ಯಾವಾಗದಿಂದ ಗೊತ್ತಾ?



Click it and Unblock the Notifications