ಮುಂಬೈನ ಅತ್ಯಂತ ಶ್ರೀಮಂತ ಗಣೇಶೋತ್ಸವದ ಸಂಘಟಕರಲ್ಲಿ ಒಂದೆಂದು ಕರೆಯಲ್ಪಡುವ ಕಿಂಗ್ಸ್ ಸರ್ಕಲ್‌ನಲ್ಲಿರುವ ಜಿಎಸ್‌ಬಿ ಸೇವಾ ಮಂಡಲ್, ನ್ಯೂ ಇಂಡಿಯಾ ಅಶ್ಯೂರೆನ್ಸ್‌ನಿಂದ ದಾಖಲೆಯ 360 ಕೋಟಿ ರೂಪಾಯಿ ಮೌಲ್ಯದ ವಿಮಾ ಪಾಲಿಸಿಯನ್ನು ಪಡೆದುಕೊಂಡಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ ಕಳೆದ ವರ್ಷ ಕಿಂಗ್ಸ್ ಸರ್ಕಲ್‌ನಲ್ಲಿರುವ ಜಿಎಸ್‌ಬಿ ಸೇವಾ ಮಂಡಲ್ 316 ಕೋಟಿ ರೂಪಾಯಿ ಮೌಲ್ಯದ ಪಾಲಿಸಿಯನ್ನು ಖರೀದಿ ಮಾಡಿದೆ. ಈ ವರ್ಷ 360 ಕೋಟಿ ರೂಪಾಯಿ ಮೌಲ್ಯದ ವಿಮಾ ಪಾಲಿಸಿಯನ್ನು ಪಡೆದುಕೊಂಡಿದೆ. ಆದರೆ ಈ ವರ್ಷದ ಅಂಕಿ ಅಂಶವನ್ನು ನಾವು ಗಮನಿಸಿದಾಗ ಪಾಲಿಸಿಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ.

ಆದರೆ ಈ ವಿಮಾ ಕವರೇಜ್‌ಗಾಗಿ ಪಾವತಿಸಿದ ನಿಖರವಾದ ಪ್ರೀಮಿಯಂ ಅನ್ನು ಈ ಮುಂಬೈನ ಗಣೇಶ ಮಂಡಲ್ ಬಹಿರಂಗಪಡಿಸಿಲ್ಲ. ಇನ್ನು ಕಳೆದ ವರ್ಷದಿಂದ ಚಿನ್ನದ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದರ ಪರಿಣಾಮವಾಗಿ ವಿಮಾ ವೆಚ್ಚಗಳ ವೆಚ್ಚಗಳು ಕೂಡಾ ಹೆಚ್ಚಳವಾಗಿದೆ ಎಂದು ವರದಿ ಹೇಳುತ್ತದೆ.
ಜಿಎಸ್‌ಬಿ ಸೇವಾ ಮಂಡಲದಲ್ಲಿರುವ ಗಣಪತಿ ಮೂರ್ತಿಯನ್ನು 66 ಕೆಜಿ ಚಿನ್ನಾಭರಣಗಳು ಮತ್ತು 295 ಕೆಜಿ ಬೆಳ್ಳಿಯಿಂದ ಅಲಂಕರಿಸಲಾಗಿದೆ. ಆದ್ದರಿಂದಾಗಿ ಈ ವಿಮಾ ರಕ್ಷಣೆಯು ಮಹತ್ವವನ್ನು ಪಡೆದುಕೊಂಡಿದೆ. ಈ ವರ್ಷದ ವಿಮೆಯು ಕಳೆದ ವರ್ಷದ ವಿಮೆಗಿಂತ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ ಎಂದು ವರದಿ ಹೇಳುತ್ತದೆ.
ಜಿಎಸ್‌ಬಿ ಸೇವಾ ಮಂಡಲದ ಟ್ರಸ್ಟಿಯಾದ ಅಮಿತ್ ಪೈ ತಮ್ಮ ಸಮಗ್ರ ಪಾಲಿಸಿ ಹೇಗೆ ಹಂಚಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. "360 ಕೋಟಿ ರೂಪಾಯಿಗಳಲ್ಲಿ, 38.47 ಕೋಟಿ ರೂಪಾಯಿಗಳನ್ನು ಎಲ್ಲಾ-ಅಪಾಯದ ವಿಮಾ ಪಾಲಿಸಿಗೆ ಹಂಚಲಾಗಿದೆ. ಇದು ಚಿನ್ನ ಮತ್ತು ಬೆಳ್ಳಿಯ ವಸ್ತುಗಳು ಮತ್ತು ಆಭರಣಗಳಿಗೆ ಸಂಬಂಧಿಸಿದ ಅಪಾಯಗಳನ್ನು ಒಳಗೊಂಡಿದೆ," ಎಂದು ಅಮಿತ್ ಪೈ ತಿಳಿಸಿದರು.
"ಹೆಚ್ಚುವರಿಯಾಗಿ, ಭೂಕಂಪದ ಅಪಾಯವನ್ನು ಒಳಗೊಂಡಂತೆ ಬೆಂಕಿ ಮತ್ತು ವಿಶೇಷ ಅಪಾಯಕ್ಕಾಗಿ 2 ಕೋಟಿ ರೂಪಾಯಿ ವಿಮೆ ಪಡೆಯಲಾಗಿದೆ. ಸಾರ್ವಜನಿಕ ಸುರಕ್ಷತೆಗಾಗಿ, ಪೆಂಡಾಲ್ ಮತ್ತು ಭಕ್ತರನ್ನು ರಕ್ಷಿಸಲು, 30 ಕೋಟಿ ರೂಪಾಯಿಗಳ ವಿಮೆ ಪಡೆಯಲಾಗಿದೆ. ಸ್ವಯಂಸೇವಕರು ಮತ್ತು ಸಿಬ್ಬಂದಿಯ ಯೋಗಕ್ಷೇಮವನ್ನು ಖಾತ್ರಿಪಡಿಸುವ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಗೆ ಬರೋಬ್ಬರಿ 289.50 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ," ಎಂದು ಅಮಿತ್ ಪೈ ಹೇಳಿದರು.
ಇತರ ಗಣೇಶೋತ್ಸವ ಮಂಡಲಗಳು ತಮ್ಮ ವಾರ್ಷಿಕ ಉತ್ಸವದ ಸಿದ್ಧತೆಗಳ ಪ್ರಮುಖ ಭಾಗವಾಗಿ ವಿಮೆಗೆ ಆದ್ಯತೆ ನೀಡುತ್ತವೆ ಎಂಬುದು ಗಮನಿಸಬೇಕಾದ ಸಂಗತಿ. ಲಾಲ್‌ಬಾಗ್‌ನ ಗಣೇಶ್ ಗಲ್ಲಿಯ ಮುಂಬೈ ಚಾ ರಾಜಾ ಜಂಟಿ ಕಾರ್ಯದರ್ಶಿ ಅನಿಕೇತ್ ಸಿಂಗ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, "ನಮ್ಮ ಒಟ್ಟು ವಿಮಾ ಮೊತ್ತವು ಸುಮಾರು 1 ಲಕ್ಷ ರೂಪಾಯಿ ಪ್ರೀಮಿಯಂನೊಂದಿಗೆ ಸರಿಸುಮಾರು 7 ಕೋಟಿ ರೂಪಾಯಿಯಷ್ಟಿದೆ," ಎಂದು ತಿಳಿಸಿದರು.
"ಈ ಕವರೇಜ್ ಪ್ರಾಥಮಿಕವಾಗಿ ಗಣೇಶ ಮೂರ್ತಿಗೆ ಅಲಂಕಾರ ಮಾಡಲಾಗಿರುವ ನಗದು ಮತ್ತು ಬೆಲೆಬಾಳುವ ಆಭರಣಗಳನ್ನು ಒಳಗೊಂಡ ಕಳ್ಳತನದ ಘಟನೆಗಳಿಂದ ಉಂಟಾಗುವ ಆರ್ಥಿಕ ನಷ್ಟದಿಂದ ರಕ್ಷಣೆ ಮಾಡುತ್ತದೆ. ಜೊತೆಗೆ, ಇದು ಬೆಂಕಿ ಮತ್ತು ಸಂಬಂಧಿತ ಅಪಾಯಗಳ ವಿರುದ್ಧ ರಕ್ಷಣೆ ನೀಡುತ್ತದೆ. 200 ಸ್ವಯಂಸೇವಕರಿಗೆ ಅಪಘಾತ ರಕ್ಷಣೆಯನ್ನು ನೀಡಲಾಗಿದೆ. ಭೂಕಂಪ ಮತ್ತು ಭಯೋತ್ಪಾದನೆ ಸಂಬಂಧಿಸಿದ ವಿಮಾ ರಕ್ಷಣೆ ಇದೆ," ಎಂದು ಅನಿಕೇತ್ ಸಿಂಗ್ ಮಾಹಿತಿ ನೀಡಿದ್ದಾರೆ.
20 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳ ಜೊತೆಗೆ 2.5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಸರ ಮತ್ತು ಕಿರೀಟವನ್ನು ಧರಿಸಿರುವ ಗಣೇಶ ಗಲ್ಲಿಯ ವಿಗ್ರಹದೊಂದಿಗೆ ಗಣೇಶನ ವಿಗ್ರಹದ ಅಲಂಕಾರಗಳ ವಿಮೆಯು ಇದೆ. ನ್ಯೂ ಇಂಡಿಯಾ ಅಶ್ಯೂರೆನ್ಸ್ ಮತ್ತು ಓರಿಯಂಟಲ್ ಇನ್ಶುರೆನ್ಸ್ ಕಂಪನಿಯಂತಹ ವಿಮಾ ಕಂಪನಿಗಳು ಗಣೇಶೋತ್ಸವ ಸಂಘಟಕರ ವಿಮೆಯನ್ನು ಪೂರೈಸುತ್ತಿದೆ.
ಓರಿಯಂಟಲ್ ಇನ್ಶೂರೆನ್ಸ್‌ನ ಮ್ಯಾನೇಜರ್ ಸಚಿನ್ ಖಾನ್ವಿಲ್ಕರ್ ಮಾತನಾಡಿ, "ಪ್ರಸ್ತುತ, ನಮ್ಮ ವ್ಯಾಪ್ತಿಯಲ್ಲಿ 22 ಗಣಪತಿ ಮಂಡಲಗಳಿವೆ. ಗಣೇಶೋತ್ಸವದ ವಿಮೆಯ ಪ್ರಾಥಮಿಕ ಗಮನವು ಚಿನ್ನದ ಆಭರಣಗಳು ಮತ್ತು ದಾನಪೇಟಿ (ನಗದು ದೇಣಿಗೆ ಬಾಕ್ಸ್) ಅನ್ನು ಭದ್ರಪಡಿಸುವುದು ಆಗಿದೆ," ಎಂದು ತಿಳಿಸಿದರು.
"ಹೌಸಿಂಗ್ ಸೊಸೈಟಿಗಳಲ್ಲಿನ ಸಣ್ಣ ಮಂಡಲಗಳು ತಮ್ಮ ವಿಗ್ರಹಗಳನ್ನು 1-2 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿಂದ ಅಲಂಕರಿಸುತ್ತವೆ. ಇದರ ಜೊತೆಗೆ, ನಾವು ಕಾರ್ಯಕರ್ತರಿಗೆ ವೈಯಕ್ತಿಕ ಅಪಘಾತ ವಿಮೆ ನೀಡಲಾಗುತ್ತದೆ. ನೈಸರ್ಗಿಕ ವಿಕೋಪಗಳು ಮತ್ತು ಭಯೋತ್ಪಾದನಾ ಕೃತ್ಯಗಳಿಗೂ ವಿಮೆ ಇದೆ," ಎಂದು ಹೇಳಿದರು.


Click it and Unblock the Notifications