ಕಡಿಮೆ ತೆರಿಗೆ ಪಾವತಿ ಮಾಡಿದ ಕಾರಣಕ್ಕಾಗಿ ಜಿಎಸ್‌ಟಿ ಪ್ರಾಧಿಕಾರವು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮೇಲೆ ಸುಮಾರು 36,844 ರೂಪಾಯಿ ದಂಡ ವಿಧಿಸಿದೆ ಎಂದು ಜೀವ ವಿಮಾ ನಿಗಮ ಬುಧವಾರ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಬಡ್ಡಿ ಮತ್ತು ದಂಡದ ಜೊತೆಗೆ ಜಿಎಸ್‌ಟಿ ಸಂಗ್ರಹ ಮಾಡಿದ್ದಕ್ಕಾಗಿ ಈ ಆದೇಶವನ್ನು ಸ್ವೀಕರಿಸಿದೆ ಎಂದು ಎಲ್‌ಐಸಿ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.
ಅಕ್ಟೋಬರ್ 9, 2023 ರ ದಿನಾಂಕದ ಸೂಚನೆ ಪ್ರಕಾರ, ಶ್ರೀನಗರದ ರಾಜ್ಯ ತೆರಿಗೆ ಅಧಿಕಾರಿ, ಎಲ್‌ಐಸಿಯ ಕೆಲವು ಇನ್‌ವಾಯ್ಸ್‌ಗಳ ಮೇಲೆ ಶೇಕಡ 18 ರ ಬದಲಿಗೆ ಶೇಕಡ 12 ರಷ್ಟು ಜಿಎಸ್‌ಟಿಯನ್ನು ಪಾವತಿಸಲಾಗಿದೆ. ತೆರಿಗೆ ಪ್ರಾಧಿಕಾರವು 2019-20ರ ಬೇಡಿಕೆ ಆದೇಶ ಮತ್ತು ದಂಡದ ಸೂಚನೆಯನ್ನು ಹೆಚ್ಚಿಸಿದೆ.

ಜಿಎಸ್‌ಟಿ 10,462 ರೂಪಾಯಿ, ದಂಡ 20,000 ರೂಪಾಯಿ ಮತ್ತು ಬಡ್ಡಿಯಾಗಿ 6,382 ರೂಪಾಯಿಯನ್ನು ವಿಧಿಸಲಾಗಿದೆ ಎಂದು ಎಲ್‌ಐಸಿ ನಿಯಂತ್ರಕ ಫೈಲಿಂಗ್‌ನಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ ನಿಗಮದ ಹಣಕಾಸು, ಕಾರ್ಯಾಚರಣೆ ಅಥವಾ ಇತರ ಚಟುವಟಿಕೆಗಳ ಮೇಲೆ ಇದು ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಹೇಳಿದೆ.
290 ಕೋಟಿ ರೂಪಾಯಿ ಜಿಎಸ್‌ಟಿ ಬಿಲ್
ಈ ಹಿಂದೆ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಬಿಜಿಎಸ್‌ಟಿ ಮತ್ತು ಸಿಜಿಎಸ್‌ಟಿ ಕಾಯ್ದೆ 2017 ರ ಅಡಿಯಲ್ಲಿ ಬಿಹಾರದಿಂದ 290 ಕೋಟಿ ರೂಪಾಯಿ ಮೌಲ್ಯದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜೊತೆಗೆ ಬಡ್ಡಿ ಮತ್ತು ದಂಡದ ಆದೇಶವನ್ನು ಸ್ವೀಕರಿಸಿದೆ ಎಂದು ವಿನಿಮಯ ಫೈಲಿಂಗ್ ಮೂಲಕ ಮಾಹಿತಿ ನೀಡಿದೆ.
ಜಿಎಸ್‌ಟಿ ಅಪಲೇಟ್ ಟ್ರೈಬ್ಯೂನಲ್‌ಗೆ ನಿಗದಿತ ಸಮಯದೊಳಗೆ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುತ್ತದೆ ಎಂದು ಸರ್ಕಾರಿ ಸ್ವಾಮ್ಯದ ವಿಮಾ ಗುಂಪು ಹೇಳಿದೆ. ಹಲವಾರು ನಿಯಮಗಳನ್ನು ಎಲ್‌ಐಸಿ ಉಲ್ಲಂಘನೆ ಮಾಡಿದೆ ಎಂದು ಆರೋಪ ಮಾಡಲಾಗಿದೆ.
ಒಟ್ಟು 2,90,49,22,609 ರೂಪಾಯಿಗಳ ಮೊತ್ತದಲ್ಲಿ ಜಿಎಸ್‌ಟಿ ಅಡಿಯಲ್ಲಿ, 1,66,75,78,995 ರೂಪಾಯಿಗಳನ್ನು, ಬಡ್ಡಿಯಾಗಿ 1,07,05,85,715 ರೂಪಾಯಿಗಳನ್ನು ಮತ್ತು ದಂಡವಾಗಿ 16,67,57,899 ರೂಪಾಯಿಗಳನ್ನು ಬಿಹಾರ ಕೋರಿದೆ.
ಮೂರು ಹಣಕಾಸು ವರ್ಷಗಳಿಗೆ ಆದಾಯ ತೆರಿಗೆ ಇಲಾಖೆ 84 ಕೋಟಿ ರೂಪಾಯಿ ದಂಡವನ್ನು ಎಲ್‌ಐಸಿ ಬಳಿ ಕೋರಿ ನೋಟಿಸ್ ಸಲ್ಲಿಸಿದೆ. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿಗಮ ನಿರ್ಧರಿಸಿದೆ ಎಂದು ಜೀವ ವಿಮಾ ನಿಗಮ (ಎಲ್‌ಐಸಿ) ತಿಳಿಸಿದೆ.
2012-13ರ ವರ್ಷಕ್ಕೆ ತೆರಿಗೆ ಪ್ರಾಧಿಕಾರವು 12.61 ಕೋಟಿ ರೂಪಾಯಿ, 2018-19ರ ಹಣಕಾಸು ವರ್ಷಕ್ಕೆ 33.82 ಕೋಟಿ ರೂಪಾಯಿ, 2019-20ರ ಹಣಕಾಸು ವರ್ಷಕ್ಕೆ 37.58 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ ಎಂದು ಎಲ್‌ಐಸಿ ನಿಯಂತ್ರಣ ಫೈಲಿಂಗ್‌ನಲ್ಲಿ ಹೇಳಿದೆ.


Click it and Unblock the Notifications