ದೇಶದಲ್ಲಿ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಸಂಗ್ರಹವು ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಸುಮಾರು 1.68 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಇದು ಈವರೆಗೆ ಜಿಎಸ್‌ಟಿ ಸಂಗ್ರಹದಲ್ಲಿ ಅತ್ಯಧಿಕ ಜಿಎಸ್‌ಟಿ ಸಂಗ್ರಹವಾಗಿದೆ.
ಸರ್ಕಾರವು ಸುಧಾರಿತ ಕ್ರಮದ ಅನುಸರಣೆಯಿಂದಾಗಿ ಏಪ್ರಿಲ್‌ನಲ್ಲಿ ಜಿಎಸ್‌ಟಿ ಆದಾಯವು ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ 20 ಪ್ರತಿಶತದಷ್ಟು ಏರಿಕೆ ಕಂಡಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಮಾರ್ಚ್‌ನಲ್ಲಿ 1.42 ಲಕ್ಷ ಕೋಟಿ ರೂಪಾಯಿಗಳಷ್ಟು ಜಿಎಸ್‌ಟಿ ಸಂಗ್ರಹವನ್ನು ಮಾಡಲಾಗಿದೆ. ಈ ಹಿಂದೆ ಮಾರ್ಚ್‌ನಲ್ಲಿ ಸಂಗ್ರಹ ಮಾಡಿದ ಜಿಎಸ್‌ಟಿಯನ್ನು ಅತ್ಯಧಿಕ ಎಂದು ಪರಿಗಣಿಸಲಾಗಿತ್ತು. ಆದರೆ ಈ ಜಿಎಸ್‌ಟಿಗಿಂತ ಏಪ್ರಿಲ್ 2022 ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ಸಾರ್ವಕಾಲಿಕ ಗರಿಷ್ಠವಾಗಿದೆ.

ಮಾರ್ಚ್, ಏಪ್ರಿಲ್ ಜಿಎಸ್‌ಟಿ ಹೋಲಿಕೆ
"ಮಾರ್ಚ್ 2022ರಲ್ಲಿ ಸೃಷ್ಟಿಸಿದ ಒಟ್ಟು ಇ-ವೇ ಬಿಲ್‌ಗಳು 7.7 ಕೋಟಿ ರೂ ಇದ್ದು, 2022ರ ಫೆಬ್ರವರಿ ತಿಂಗಳಲ್ಲಿ ಸೃಷ್ಟಿಯಾದ 6.8 ಕೋಟಿ ಇ-ವೇ ಬಿಲ್‌ಗಳಿಗಿಂತ ಶೇ 13ರಷ್ಟು ಹೆಚ್ಚಾಗಿದೆ. ಇದು ಉದ್ಯಮ ಚಟುವಟಿಕೆಗಳು ವೇಗದಲ್ಲಿ ಚೇತರಿಸಿಕೊಳ್ಳುತ್ತಿದೆ ಎಂಬುವುದನ್ನು ತೋರಿಸಿದೆ. ಕಳೆದ ವರ್ಷ ಇದೇ (ಏಪ್ರಿಲ್) ತಿಂಗಳಿಗೆ ಹೋಲಿಕೆ ಮಾಡಿದರೆ, ಈ ತಿಂಗಳಲ್ಲಿ ಆಮದು ಸರಕುಗಳಿಂದ ಬರುವ ಆದಾಯವು ಶೇ 30ರಷ್ಟು ಅಧಿಕ ಮತ್ತು ಆಂತರಿಕ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಬಂದ ಆದಾಯವು ಶೇ 17ರಷ್ಟು ಹೆಚ್ಚಿದೆ," ಎಂದು ಕೇಂದ್ರ ಹಣಕಾಸು ಸಚಿವಾಲಯ ಉಲ್ಲೇಖ ಮಾಡಿದೆ.
ಇನ್ನು ಏಪ್ರಿಲ್‌ನಲ್ಲಿ ಒಟ್ಟು ಜಿಎಸ್‌ಟಿ ಆದಾಯ 1,67,540 ಕೋಟಿ ರೂ. ಆಗಿದೆ. ಈ ಪೈಕಿ ಸಿಜಿಎಸ್‌ಟಿ ರೂ.33,159 ಕೋಟಿ, ಎಸ್‌ಜಿಎಸ್‌ಟಿ ರೂ.41,793 ಕೋಟಿ, ಐಜಿಎಸ್‌ಟಿ ರೂ.81,939 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ರೂ.36,705 ಕೋಟಿ ಸೇರಿದಂತೆ) ಮತ್ತು ಸೆಸ್ ರೂ.69 ಕೋಟಿ. ಸಂಗ್ರಹವಾಗಿದೆ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 857 ಕೋಟಿ ರೂ. ಸೇರಿದಂತೆ) ಸಚಿವಾಲಯ ಮಾಹಿತಿ ನೀಡಿದೆ.


Click it and Unblock the Notifications