ಜಿಎಸ್‌ಟಿ ಸಂಗ್ರಹಣೆಯು ಏರಿಕೆಯಾಗುತ್ತಾ ಸಾಗುತ್ತಿದೆ. 2023ರ ಆಗಸ್ಟ್‌ನಲ್ಲಿ ಜಿಎಸ್‌ಟಿ ಸಂಗ್ರಹಣೆಗಳು ವರ್ಷದಿಂದ ವರ್ಷಕ್ಕೆ ಶೇಕಡ 11ರಷ್ಟು ಏರಿಕೆಯಾಗಿದೆ. ತೆರಿಗೆ ಸಂಗ್ರಹ ಪ್ರಕ್ರಿಯೆ ಸರಿಯಾದ ಪಾಲನೆ ಮತ್ತು ವಂಚನೆ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಆಗಸ್ಟ್‌ನಲ್ಲಿ ಜಿಎಸ್‌ಟಿ ಹೆಚ್ಚಾಗಿ, 1.6 ಲಕ್ಷ ಕೋಟಿ ರೂಪಾಯಿಗೆ ಜಿಗಿದಿದೆ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ತಿಳಿಸಿದರು.
ಆಗಸ್ಟ್ 2022 ರಲ್ಲಿ ಜಿಎಸ್‌ಟಿ ಸಂಗ್ರಹವು 1,43,612 ಕೋಟಿ ರೂಪಾಯಿ ಆಗಿದೆ. "ಮುಂಚಿನ ತಿಂಗಳುಗಳಂತೆ ವರ್ಷದ ಬೆಳವಣಿಗೆಯು ಸುಮಾರು ಶೇಕಡ 11ರಷ್ಟಿದೆ," ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಹೇಳಿದರು. ಜಿಎಸ್‌ಟಿ ಸಂಗ್ರಹವು ಆಗಸ್ಟ್‌ನಲ್ಲಿ ಶೇಕಡ 11ರಷ್ಟು ಬೆಳವಣಿಗೆಯಾಗಿ ಸರಿಸುಮಾರು 1.60 ಲಕ್ಷ ಕೋಟಿ ರೂಪಾಯಿ ಆಗಿದೆ.

ಆಗಸ್ಟ್‌ನ ನಿರೀಕ್ಷಿತ ಜಿಎಸ್‌ಟಿ ಆದಾಯ ನಿಖರ ಸಂಖ್ಯೆಗಳ ಮಾಧ್ಯಮಗಳು ಪ್ರಶ್ನಿಸಿದ್ದು ಅದಕ್ಕೆ ಪ್ರತಿಕ್ರಿಯಿಸಿದ ಸಂಜಯ್ ಮಲ್ಹೋತ್ರಾ ಡೇಟಾವನ್ನು ಶುಕ್ರವಾರ ನಂತರ ಬಿಡುಗಡೆ ಮಾಡಲಾಗುತ್ತದೆ. ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇಕಡ 7.8 ರಷ್ಟಿತ್ತು ಎಂದು ಮಾಹಿತಿ ನೀಡಿದ್ದಾರೆ.
"ಜೂನ್ ತ್ರೈಮಾಸಿಕದಲ್ಲಿ ಜಿಎಸ್‌ಟಿ ಆದಾಯವು ಶೇಕಡ 11ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಇದು ತೆರಿಗೆ ಎಂದು ನಾವು ಹೇಳಬಹುದು. ಜಿಡಿಪಿ ಅನುಪಾತವು 1.3 ಕ್ಕಿಂತ ಹೆಚ್ಚಾಗಿದೆ," ಎಂದು ಮಲ್ಹೋತ್ರಾ ಹೇಳಿದರು. ಹಾಗೆಯೇ ನಾಮಿನಲ್ ಜಿಡಿಪಿಗಿಂತ ಜಿಸ್‌ಟಿ ಸಂಗ್ರಹಣೆಯು ಅಧಿಕ ಬೆಳೆದಿದೆ.
ಜಿಎಸ್‌ಟಿ ಸಂಖ್ಯೆಗಳ ಕುರಿತು, ಪ್ರೈಸ್ ವಾಟರ್‌ಹೌಸ್ ಮತ್ತು ಕೋ ಎಲ್‌ಎಲ್‌ಪಿ ಪಾಲುದಾರ ಪ್ರತೀಕ್ ಜೈನ್ ಮಾತನಾಡಿ, "ಜಿಎಸ್‌ಟಿ ಸಂಗ್ರಹಣೆಗಳು ಈಗ ನಿಯಮಿತವಾಗಿ 1.6 ಲಕ್ಷ ಕೋಟಿ ರೂಪಾಯಿಗೆ ದಾಟುತ್ತಿದೆ. ಹಣಕಾಸು ವರ್ಷದ 2024ಕ್ಕೆ ಅಂದಾಜು ಮಾಡಿದ್ದಕ್ಕಿಂತ ಹೆಚ್ಚಾಗಿದೆ," ಎಂದು ಹೇಳಿದರು.
"ಹಿಂದಿನ ವರ್ಷದ ಜಿಎಸ್‌ಟಿ ಸಂಗ್ರಹಕ್ಕಿಂತ ಎರಡಂಕಿಯ ಬೆಳವಣಿಗೆಯು ಉತ್ತೇಜನಕಾರಿಯಾಗಿದೆ. ಹಬ್ಬದ ಸೀಸನ್‌ನಲ್ಲಿ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮೇರಾ ಬಿಲ್, ಮೇರಾ ಅಧಿಕಾರ್ (ಇಂದು ಪ್ರಾರಂಭಿಸಲಾಗಿದೆ) ನಂತಹ ಅಭಿಯಾನಗಳು ಸಾಮಾನ್ಯ ನಾಗರಿಕರನ್ನು ಹೆಚ್ಚು ಉತ್ತಮ ಪರಿಸರ ವ್ಯವಸ್ಥೆಯನ್ನು ರಚಿಸಲು ಪ್ರೇರೇಪಿಸುತ್ತದೆ. ತೆರಿಗೆ ವಂಚನೆಯನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ," ಎಂದು ಕೂಡಾ ಪ್ರತೀಕ್ ಜೈನ್ ತಿಳಿಸಿದರು.
ಇನ್ನು ಇತ್ತೀಚೆಗೆ ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ಗಳ ಮೇಲಿನ ಜಿಎಸ್‌ಟಿಯು 2023ರ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ. ಜಾರಿಗೆ ಬಂದ ಆರು ತಿಂಗಳಲ್ಲಿ ಪರಿಶೀಲಿಸಲಾಗುವುದು ಎಂದು ಜಿಎಸ್‌ಟಿ ಕೌನ್ಸಿಲ್ ಬುಧವಾರ ಸ್ಪಷ್ಟಪಡಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಜಿಎಸ್‌ಟಿ ಸಭೆಯು ನಡೆದಿದ್ದು, ರಾಜ್ಯಗಳ ಹಣಕಾಸು ಸಚಿವರುಗಳು ಹಾಜರಿದ್ದರು.


Click it and Unblock the Notifications