For Quick Alerts
ALLOW NOTIFICATIONS  
For Daily Alerts

GST Collections in December 2022: ಡಿಸೆಂಬರ್‌ನಲ್ಲಿ 1.49 ಟ್ರಿಲಿಯನ್ ರೂ ಜಿಎಸ್‌ಟಿ ಸಂಗ್ರಹ!

|

ಡಿಸೆಂಬರ್ ತಿಂಗಳ ಜಿಎಸ್‌ಟಿ ಸಂಗ್ರಹ ಡೇಟಾವನ್ನು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದೆ. ಡಿಸೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ 1.49 ಟ್ರಿಲಿಯನ್ ರೂಪಾಯಿ ಜಿಎಸ್‌ಟಿ ಸಂಗ್ರಹ ಆಗಿದೆ. ನವೆಂಬರ್‌ನಲ್ಲಿ ಆದ ಜಿಎಸ್‌ಟಿ ಸಂಗ್ರಹಕ್ಕಿಂತ ಸುಮಾರು ಶೇಕಡ 2.5ರಷ್ಟು ಜಿಎಸ್‌ಟಿ ಸಂಗ್ರಹವಾಗಿದೆ.

ಡಿಸೆಂಬರ್ 2022ರಲ್ಲಿ ಜಿಎಸ್‌ಟಿ ಸಂಗ್ರಹ 1,49,507 ಕೋಟಿ ರೂಪಾಯಿ ಆಗಿದೆ. ಅಂದರೆ ಕಳೆದ ತಿಂಗಳ ಜಿಎಸ್‌ಟಿ ಸಂಗ್ರಹಕ್ಕಿಂತ ಶೇಕಡ 2.5ರಷ್ಟು ಜಿಎಸ್‌ಟಿ ಸಂಗ್ರಹ ಅಧಿಕವಾಗಿದೆ. ನವೆಂಬರ್ 2022ರಲ್ಲಿ 1,45,867 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಸತತ 10 ತಿಂಗಳು 1.4 ಲಕ್ಷ ಕೋಟಿ ರೂಪಾಯಿಗೂ ಅಧಿಕ ಜಿಎಸ್‌ಟಿ ಸಂಗ್ರಹವಾಗಿದೆ.

GST Collections in November 2022: ನವೆಂಬರ್ ಜಿಎಸ್‌ಟಿ ಸಂಗ್ರಹ ಶೇ. 11 ಏರಿಕೆGST Collections in November 2022: ನವೆಂಬರ್ ಜಿಎಸ್‌ಟಿ ಸಂಗ್ರಹ ಶೇ. 11 ಏರಿಕೆ

ಇನ್ನು ಕಳೆದ ವರ್ಷದಿಂದ ಈ ವರ್ಷದ ಡಿಸೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹವು ಶೇಕಡ 15ರಷ್ಟು ಅಧಿಕ ಸಂಗ್ರಹವಾಗಿದೆ. ಅಂದರೆ 2021ರ ಡಿಸೆಂಬರ್‌ನಲ್ಲಿ ನಡೆದ ಜಿಎಸ್‌ಟಿ ಸಂಗ್ರಹಕ್ಕಿಂತ 2022ರ ಡಿಸೆಂಬರ್ ಜಿಎಸ್‌ಟಿ ಸಂಗ್ರಹ ಶೇಕಡ 15ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ 1,29,780 ಕೋಟಿ ರೂಪಾಯಿ ಆಗಿದೆ.

 GST Collections: ಡಿ.ನಲ್ಲಿ 1.49 ಟ್ರಿಲಿಯನ್ ರೂ ಜಿಎಸ್‌ಟಿ ಸಂಗ್ರಹ

ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ ಎಷ್ಟಾಗಿದೆ?

ಡಿಸೆಂಬರ್‌ 2022ರಲ್ಲಿ ಜಿಎಸ್‌ಟಿ ಆದಾಯವು 1,49,507 ಕೋಟಿ ರೂಪಾಯಿ ಆಗಿದೆ. ಈ ಪೈಕಿ 26,711 ಕೋಟಿ ರೂಪಾಯಿ ಸಿಜಿಎಸ್‌ಟಿ ಆಗಿದೆ. ಇನ್ನು 33,357 ಕೋಟಿ ರೂಪಾಯಿ ಎಸ್‌ಜಿಎಸ್‌ಟಿ ಆಗಿದೆ. 78,434 ಕೋಟಿ ರೂಪಾಯಿ ಐಜಿಎಸ್‌ಟಿ ಆಗಿದೆ. ಇದರಲ್ಲಿ 40,263 ಕೋಟಿ ರೂಪಾಯಿ ಆಮದು ಮೊತ್ತ ಕೂಡಾ ಆಗಿದೆ. 11,005 ಕೋಟಿ ರೂಪಾಯಿ ಸೆಸ್ ಆಗಿದೆ. ಇದರಲ್ಲಿ 850 ಕೋಟಿ ರೂಪಾಯಿ ಆಮದು ಮೊತ್ತ ಕೂಡಾ ಆಗಿದೆ.

ಸರ್ಕಾರವು 36,669 ಕೋಟಿ ರೂಪಾಯಿ ಸಿಜಿಎಸ್‌ಟಿಯ ಸೆಟಲ್‌ಮೆಂಟ್ ನಡೆದಿದೆ. 31,094 ಕೋಟಿ ರೂಪಾಯಿ ಎಸ್‌ಜಿಎಸ್‌ಟಿಯ ಲೆಕ್ಕಾಚಾರವು ಕೂಡಾ ಚುಕ್ತಾ ಆಗಿದೆ. ಕಳೆದ ತಿಂಗಳ ಲೆಕ್ಕಾಚಾರದ ಪ್ರಕಾರ ಸರ್ಕಾರವು 33,997 ಕೋಟಿ ರೂಪಾಯಿ ಸಿಜಿಎಸ್‌ಟಿ, 28,538 ಕೋಟಿ ರೂಪಾಯಿ ಎಸ್‌ಜಿಎಸ್‌ಟಿ ಚುಕ್ತ ಮಾಡಿದೆ.

GST Collections in October 2022 : ಸರ್ಕಾರಕ್ಕೆ ತೆರಿಗೆ ಸುಗ್ಗಿ, ಎರಡನೇ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹGST Collections in October 2022 : ಸರ್ಕಾರಕ್ಕೆ ತೆರಿಗೆ ಸುಗ್ಗಿ, ಎರಡನೇ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹ

ನವೆಂಬರ್ ಜಿಎಸ್‌ಟಿ ಸಂಗ್ರಹ

ನವೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ 1.46 ಲಕ್ಷ ಕೋಟಿ ರೂಪಾಯಿ ಆಗಿದೆ. ವರ್ಷದಿಂದ ವರ್ಷಕ್ಕೆ ಶೇಕಡ 11ರಷ್ಟು ಹೆಚ್ಚಳವಾಗಿದೆ. ನವೆಂಬರ್ 2022ರಲ್ಲಿ 1,45,867 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಸಿಜಿಎಸ್‌ಟಿ 25,681 ಕೋಟಿ ರೂಪಾಯಿ ಆಗಿದ್ದು ಎಸ್‌ಜಿಎಸ್‌ಟಿ 32,651 ಕೋಟಿ ರೂಪಾಯಿ ಆಗಿದೆ. ಐಜಿಎಸ್‌ಟಿ 77,103 ಕೋಟಿ ರೂಪಾಯಿ ಆಗಿದೆ.

English summary

GST Collection in December 2022: GST collections Stood At Rs 1.49 Trillion

GST Revenue Collection in December 2022: The gross GST revenue collected in the month of December 2022 stood at Rs 1.49 Trillion, Know more.
Story first published: Monday, January 2, 2023, 13:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X