ಫೆಬ್ರವರಿಯಲ್ಲಿ ಜಿಎಸ್‌ಟಿ ಆದಾಯ ಸಂಗ್ರಹ 1.13 ಲಕ್ಷ ಕೋಟಿ ರೂಪಾಯಿ

ಫೆಬ್ರವರಿಯಲ್ಲಿ ಸಂಗ್ರಹವಾದ ಒಟ್ಟು ಜಿಎಸ್‌ಟಿ ಆದಾಯವು 1.13 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ಸೋಮವಾರ ಹಣಕಾಸು ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದೆ.

ಕೋವಿಡ್-19 ಲಾಕ್‌ಡೌನ್‌ನಲ್ಲಿ ಸಂಪೂರ್ಣ ನೆಲಕಚ್ಚಿದ್ದ ಆದಾಯ ಸಂಗ್ರಹವು ನಂತರ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಾ ಬಂದಿದ್ದು, ಇದೀಗ ಸತತ ಐದನೇ ತಿಂಗಳು ಜಿಎಸ್‌ಟಿ ಆದಾಯ ಸಂಗ್ರಹವು 1 ಲಕ್ಷ ಕೋಟಿ ರೂಪಾಯಿ ದಾಟಿದೆ. ಇದು ಆರ್ಥಿಕ ಚೇತರಿಕೆಯ ಸ್ಪಷ್ಟ ಸೂಚನೆಯಾಗಿದೆ ಮತ್ತು ತೆರಿಗೆ ಕುರಿತಾಗಿ ಆಡಳಿತವು ಕೈಗೊಂಡ ವಿವಿಧ ಕ್ರಮಗಳ ಪರಿಣಾಮವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಫೆಬ್ರವರಿಯಲ್ಲಿ ಜಿಎಸ್‌ಟಿ ಆದಾಯ ಸಂಗ್ರಹ 1.13 ಲಕ್ಷ ಕೋಟಿ ರೂಪಾಯಿ

ಫೆಬ್ರವರಿಯಲ್ಲಿ ಒಟ್ಟು 1,13,143 ಕೋಟಿ ರೂ. ಆದಾಯ ಸಂಗ್ರಹವಾಗಿದ್ದು, ಇದು ಕಳೆದ ವರ್ಷದ ಫೆಬ್ರವರಿಯ ಜಿಎಸ್‌ಟಿ ಸಂಗ್ರಹಕ್ಕಿಂತ ಶೇಕಡಾ 7ರಷ್ಟು ಹೆಚ್ಚಾಗಿದೆ. ಫೆಬ್ರವರಿಯ ಒಟ್ಟು ಜಿಎಸ್‌ಟಿ ಸಂಗ್ರಹದಲ್ಲಿ ಸಿಜಿಎಸ್‌ಟಿ (ಕೇಂದ್ರ ಜಿಎಸ್‌ಟಿ) ಗೆ 21,092 ಕೋಟಿ ರೂ., ಎಸ್‌ಜಿಎಸ್‌ಟಿಗೆ 27,273 ಕೋಟಿ ರೂ., ಐಜಿಎಸ್‌ಟಿ (ಇಂಟಿಗ್ರೇಟೆಡ್ ಜಿಎಸ್‌ಟಿ) ಗೆ 55,253 ಕೋಟಿ ರೂ. 9,525 ಕೋಟಿ (ಸರಕುಗಳ ಆಮದಿಗೆ 660 ಕೋಟಿ ರೂ. ಸೇರಿದಂತೆ) ಸಂಗ್ರಹವಾಗಿದೆ.

ಜಿಎಸ್‌ಟಿ ಆದಾಯ ಸಂಗ್ರಹವು ಜನವರಿಯಲ್ಲಿ ದಾಖಲೆಯ 1,19,847 ಕೋಟಿ ರೂ. ಇದರಲ್ಲಿ ಸಿಜಿಎಸ್‌ಟಿ (ಕೇಂದ್ರ ಜಿಎಸ್‌ಟಿ) 21,923 ಕೋಟಿ ರೂ., ಎಸ್‌ಜಿಎಸ್‌ಟಿ (ರಾಜ್ಯ ಜಿಎಸ್‌ಟಿ) 29,014 ಕೋಟಿ ರೂ., ಐಜಿಎಸ್‌ಟಿ 60,288 ಕೋಟಿ ರೂ. (883 ಕೋಟಿ ಆಮದುಗಳನ್ನು ಸ್ವೀಕರಿಸಲಾಗಿದೆ).

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+