ಅಕ್ಟೋಬರ್ 2023 ರಲ್ಲಿ ಜಿಎಸ್‌ಟಿ ಸಂಗ್ರಹಣೆಗಳು ವಾರ್ಷಿಕವಾಗಿ ಶೇಕಡ 13 ರಷ್ಟು ಜಿಗಿತ ಕಂಡಿದ್ದು, ಎರಡನೇ ಅತಿ ಹೆಚ್ಚು ಸಂಗ್ರಹವಾಗಿದೆ. ಅಕ್ಟೋಬರ್‌ನಲ್ಲಿ 1,72,003 ಕೋಟಿ ರೂಪಾಯಿಗಳಷ್ಟು ತಲುಪಿದೆ ಎಂದು ನವೆಂಬರ್ 1 ರಂದು ಬಿಡುಗಡೆಯಾದ ಇತ್ತೀಚಿನ ಅಧಿಕೃತ ಮಾಹಿತಿಯು ತಿಳಿಸಿದೆ.
ಅತಿ ಹೆಚ್ಚು ಮಾಸಿಕ ಜಿಎಸ್‌ಟಿ ಏಪ್ರಿಲ್ 2023 ರಲ್ಲಿ 1,87,035 ಕೋಟಿ ರೂಪಾಯಿ ಆಗಿದೆ. "ಅಕ್ಟೋಬರ್ 2023 ರ ಜಿಎಸ್‌ಟಿ ಆದಾಯ ಸಂಗ್ರಹವು ಎರಡನೆ ಅತಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. 2023 ರ ಏಪ್ರಿಲ್ ನಂತರದ ಸ್ಥಾನದಲ್ಲಿದೆ. 1.72 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ," ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಅಕ್ಟೋಬರ್ 2023 ರ ಒಟ್ಟು ಜಿಎಸ್‌ಟಿ ಆದಾಯವು ಕಳೆದ ವರ್ಷದ ಇದೇ ತಿಂಗಳಿಗಿಂತ ಶೇಕಡ 13 ರಷ್ಟು ಹೆಚ್ಚಳವಾಗಿದೆ. ತಿಂಗಳಿನಲ್ಲಿ, ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇಕಡ 13 ಹೆಚ್ಚಾಗಿದೆ.
ಹಣಕಾಸು ವರ್ಷ 2023-24 ರಲ್ಲಿ ಸರಾಸರಿ ಒಟ್ಟು ಮಾಸಿಕ ಜಿಎಸ್‌ಟಿ ಸಂಗ್ರಹವು ಈಗ 1.66 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ ಶೇಕಡ 11 ರಷ್ಟು ಹೆಚ್ಚಾಗಿದೆ.
ಅಕ್ಟೋಬರ್, 2023 ರಲ್ಲಿ ಒಟ್ಟು ಜಿಎಸ್‌ಟಿ ಆದಾಯವು 1,72,003 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ 30,062 ಕೋಟಿ ರೂಪಾಯಿ ಸಿಜಿಎಸ್‌ಟಿ, 38,171 ಕೋಟಿ ರೂಪಾಯಿ ಎಸ್‌ಜಿಎಸ್‌ಟಿ ಆಗಿದೆ. 91,315 ಕೋಟಿ ಐಜಿಎಸ್‌ಟಿ, 12,456 ಕೋಟಿ ರೂಪಾಯಿ ಸೆಸ್ ಸಂಗ್ರಹವಾಗಿದೆ.
ಸರ್ಕಾರವು ಐಜಿಎಸ್‌ಟಿ 42,873 ಕೋಟಿ ರೂಪಾಯಿ ಮತ್ತು ಎಸ್‌ಜಿಎಸ್‌ಟಿಗೆ 36,614 ಕೋಟಿ ರೂಪಾಯಿ ಸಂಗ್ರಹ ಮಾಡಿದೆ. ನಿಯಮಿತ ಇತ್ಯರ್ಥದ ನಂತರ ಅಕ್ಟೋಬರ್ 2023 ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್‌ಟಿ 72,934 ಕೋಟಿ ರೂಪಾಯಿ ಮತ್ತು ಎಸ್‌ಜಿಎಸ್‌ಟಿ 74,785 ಕೋಟಿ ರೂಪಾಯಿ ಆಗಿದೆ.


Click it and Unblock the Notifications