GST ಸಂಗ್ರಹದಲ್ಲಿ ದಾಖಲೆಯನ್ನು ಭಾರತ ದೇಶ ಬರೆದಿದೆ. ಹೌದು, 2025ರ ಮೊದಲ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹ ಒಟ್ಟು 1.96 ಲಕ್ಷ ಕೋಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿಯನ್ನು ತಿಳಿಸಿದೆ.
ಹೌದು,ಕಳೆದ ವರ್ಷ ಜನವರಿಯಲ್ಲಿ GST ಒಟ್ಟು ಸಂಗ್ರಹ 1.74 ಲಕ್ಷ ಕೋಟಿ ಇತ್ತು.ಈ ವರ್ಷ ಜನವರಿಯಲ್ಲಿ ಜಿಎಸ್‌ಟಿ ಸಂಗ್ರಹ ಶೇ.12.3ರಷ್ಟು ಹೆಚ್ಚಾಗಿದೆ.2024 ರಿಂದ 25ರಲ್ಲಿ (ಏಪ್ರಿಲ್ ನಿಂದ ಜನವರಿವರೆಗೆ) ಒಟ್ಟು GST ಸಂಗ್ರಹ ಶೇ.9.4 ಹೆಚ್ಚಳವಾಗಿದೆ.18.29 ಲಕ್ಷ ಕೋಟಿ ಆಗಿದೆ. 2023 ರಿಂದ 24ರ ಇದೇ ಅವಧಿಯಲ್ಲಿ ಇದು 16.71 ಲಕ್ಷ ಕೋಟಿ ಇತ್ತು.2023 ರಿಂದ 24ರಲ್ಲಿ ಒಟ್ಟು GST ಸಂಗ್ರಹ 20.18 ಲಕ್ಷ ಕೋಟಿ ದಾಖಲೆಯಾಗಿದೆ.

ಈ ಅಂಕಿ ಅಂಶಗಳು ದೇಶದ ಆರ್ಥಿಕ ಆರೋಗ್ಯ ಮತ್ತು ಆರ್ಥಿಕ ಚೇತರಿಕೆ ಪ್ರಯತ್ನಗಳಿಗೆ ಉತ್ತಮ ಸೂಚನೆಯಾಗಿದೆ. ಇದು ಜಾಗತಿಕ ಅನಿಶ್ಚಿತತೆಗಳ ನಡುವೆ ಸ್ಥಿತಿಸ್ಥಾಪಕತ್ವವನ್ನು ಸೂಚಿಸುತ್ತದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಹಣಕಾಸು ವರ್ಷಕ್ಕಿಂತ ಶೇ.11.7ರಷ್ಟು ಹೆಚ್ಚಾಗಿದೆ. 2024ರ ಏಪ್ರಿಲ್‌ನಲ್ಲಿ ಒಟ್ಟು GST ಸಂಗ್ರಹ 2.10 ಲಕ್ಷ ಕೋಟಿಗೆ ಏರಿಕೆಯಾಗಿ ದಾಖಲೆಯಾಗಿದೆ.ಈ GST ಸಂಗ್ರಹ ಭಾರತದ ಆರ್ಥಿಕತೆಗೆ ಇದೆ.ದೇಶೀಯ ಬಳಕೆ ಮತ್ತು ಮಧ್ಯಮ ಆಮದು ಚಟುವಟಿಕೆಯನ್ನು ಹೇಳುತ್ತಿದೆ.
ಜನವರಿ GST ಸಂಗ್ರಹ
ಭಾರತದಲ್ಲಿ 2017ರ ಜುಲೈ 1ರಂದು GST ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದಿತು. GST ಕಾಯ್ದೆ 2017ರ ನಿಯಮಗಳ ಪ್ರಕಾರ GST ಜಾರಿಯಿಂದಾಗಿ ನಷ್ಟ ಅನುಭವಿಸುವ ರಾಜ್ಯಗಳಿಗೆ ಐದು ವರ್ಷಗಳವರೆಗೆ ಪರಿಹಾರ ನೀಡಲಾಯಿತು. ಇದರ ನಂತರ ಕೇಂದ್ರ ಹಣಕಾಸು ಸಚಿವರ ನೇತೃತ್ವದಲ್ಲಿ GST ಮಂಡಳಿ ರಚನೆಯಾಯಿತು. ಎಲ್ಲಾ ರಾಜ್ಯಗಳ ಹಣಕಾಸು ಸಚಿವರು GST ಮಂಡಳಿಯ ಸದಸ್ಯರಾಗಿದ್ದಾರೆ.
GST ಮಂಡಳಿಯ ಒಪ್ಪಿಗೆ
GST ಮಂಡಳಿ ಸಭೆ ಸೇರಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. GST ಮಂಡಳಿಯ ಒಪ್ಪಿಗೆಯ ಮೇರೆಗೆ ಕೇಂದ್ರ ಹಣಕಾಸು ಸಚಿವಾಲಯ ವಿವಿಧ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದೆ.ಕೊನೆಯದಾಗಿ GST ಮಂಡಳಿ ಸಭೆ 2024ರ ಡಿಸೆಂಬರ್ 21 ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆದಿತ್ತು.
12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಕಟ್ಟಂಗಿಲ್ಲ
ಬಜೆಟ್‌ನಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಬಜೆಟ್ ದೊಡ್ಡ ಪರಿಹಾರವನ್ನು ನೀಡಿದೆ. ಹೊಸ ಆದಾಯ ತೆರಿಗೆ ಪದ್ಧತಿಯ ಪ್ರಕಾರ, ವಾರ್ಷಿಕ ಆದಾಯ 12 ಲಕ್ಷದವರೆಗಿನ ಉದ್ಯೋಗಿಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.
ಹೊಸ ತೆರಿಗೆ ಸ್ಲ್ಯಾಬ್ ಹೀಗಿದೆ:
4,00,000 ಲಕ್ಷದ ವರೆಗೆ ಯಾವು ದೇ ತೆರಿಗೆ ಇಲ್ಲ
4,00,000ರೂ. ದಿಂದ 8,00,000 ರೂ ಶೇ. 5
8,00,0001 ರೂ ನಿಂದ 12,00,000ರೂ: ಶೇ.10
12,00,001 ದಿಂದ 16 ಲಕ್ಷದವರೆಗೆ - ಶೇ.15
16,00,001 ದಿಂದ 20 ಲಕ್ಷ ರೂ - ಶೇ.20
20,00,001 ದಿಂದ 24ಲಕ್ಷದವರೆಗೆ ಶೇ. 25
24 ಲಕ್ಷದ ಮೇಲ್ಪಟ್ಟುವರೆಗೆ ಶೇ.30ರಷ್ಟು
ಕೇಂದ್ರ ಬಜೆಟ್ನಲ್ಲಿ ಮಧ್ಯಮ ವರ್ಗಕ್ಕೆ ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಮಹತ್ವದ ಘೋಷಣೆ ಮಾಡಲಾಗಿದೆ. ವೈಯಕ್ತಿಕ ಆದಾಯ ತೆರಿಗೆದಾರರು 12 ಲಕ್ಷ ಆದಾಯ ಹೊಂದಿದ್ದರೆ ಇನ್ಮುಂದೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಇದರಿಂದ 12 ಲಕ್ಷದವರೆಗೂ ಆದಾಯ ಹೊಂದಿರುವರಿಗೆ ವಾರ್ಷಿಕವಾಗಿ 80 ಸಾವಿರ ರೂಪಾಯಿ ಉಳಿತಾಯವಾಗಲಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.
More From GoodReturns

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ



Click it and Unblock the Notifications