9 ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ 70,000 ಕೋಟಿ ರುಪಾಯಿ

2020-21ರ ಹಣಕಾಸಿನ ವರ್ಷದಲ್ಲಿ ದೇಶದ 9 ದೊಡ್ಡ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡಬೇಕಾದ ಜಿಎಸ್‌ಟಿ ಪರಿಹಾರ ಮೊತ್ತವು 70 ಸಾವಿರ ಕೋಟಿ ರುಪಾಯಿ ತಲುಪಲಿದೆ ಎಂದು ರೇಟಿಂಗ್ ಸಂಸ್ಥೆ ICRA ಅಂದಾಜಿಸಿದೆ.

ಆರ್ಥಿಕತೆ ಮಂದಗತಿಯನ್ನು ಚುರುಕುಗೊಳಿಸಲು ಕೇಂದ್ರ ಸರ್ಕಾರ ಕಾರ್ಫೋರೇಟ್ ತೆರಿಗೆ ದರ ಕಡಿತಗೊಳಿಸಿತ್ತು. ಈಗಾಗಲೇ ಆದಾಯದ ಕೊರತೆಯ ಒತ್ತಡದಲ್ಲಿರುವ ಕೇಂದ್ರ ಸರ್ಕಾರಕ್ಕೆ ಮುಂಬರುವ ವರ್ಷದಲ್ಲಿ ಈ ಪರಿಹಾರ ಮೊತ್ತವನ್ನು ಇನ್ನಷ್ಟು ಒತ್ತಡವನ್ನು ಬೀರಲಿದೆ.

9 ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ 70,000 ಕೋಟಿ ರುಪಾಯಿ

ಜುಲೈ 2019ರ ಬಜೆಟ್ ಅಂದಾಜು ಮೊತ್ತ 24.6 ಲಕ್ಷ ಕೋಟಿ ರುಪಾಯಿಗೆ ಹೋಲಿಸಿದರೆ ಹಣಕಾಸು ವರ್ಷದಲ್ಲಿ ನಿರೀಕ್ಷೆಗಿಂತ ಕಡಿಮೆ ಜಿಎಸ್‌ಟಿ ಸಂಗ್ರಹವಾಗಿದ್ದು, 3.5 ಲಕ್ಷ ಕೋಟಿಗಳಷ್ಟು ಕಡಿಮೆಯಾಗಿದೆ ಎಂದು ICRA ಅಂದಾಜಿಸಿದೆ. 2020ರ ಹಣಕಾಸು ವರ್ಷದಲ್ಲಿ ಎಲ್ಲಾ ರಾಜ್ಯಗಳ ಒಟ್ಟು ಕೊರತೆ 2.2 ಲಕ್ಷ ಕೋಟಿ ರುಪಾಯಿಗೆ ತಲುಪಲಿದೆ.

ಕೇಂದ್ರ ಸರ್ಕಾರವು 2016-17 ಮೂಲ ವರ್ಷದಲ್ಲಿ ಪರಿಹಾರ ಮೊತ್ತವನ್ನು ಆದಾಯದ ಮೇಲೆ ಶೇಕಡಾ 14ಕ್ಕೆ ನಿಗದಿ ಪಡಿಸಿತ್ತು. ಬಾಕಿ ಉಳಿಸಿಕೊಂಡಿದ್ದ ಜಿಎಸ್‌ಟಿ ಪರಿಹಾರವನ್ನು ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದ್ದು, ಆದಾಯ ನಷ್ಟವನ್ನು ಸರಿದೂಗಿಸಲು ಒಟ್ಟಾರೆ 35,298 ಕೋಟಿ ರುಪಾಯಿಗಳನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+