ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಆದಾಯದಲ್ಲಿನ ಕೊರತೆ ತುಂಬಿಸುವ ನಿಟ್ಟಿನಲ್ಲಿ ಮೋದಿ ನೇತೃತ್ವದ ಸರ್ಕಾರವು ಸಾಲ ಮಾಡಿ, ಆರು ಸಾವಿರ ಕೋಟಿ ರುಪಾಯಿಯನ್ನು ಹದಿನಾರು ರಾಜ್ಯಗಳಿಗೆ ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ ವಿಶೇಷ ಸಾಲ ಗವಾಕ್ಷಿ ಮೂಲಕ ವರ್ಗಾವಣೆ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ಹೇಳಿದೆ.
"ಹಣಕಾಸು ಸಚಿವಾಲಯ, ಭಾರತ ಸರ್ಕಾರವು ವಿಶೇಷ ಗವಾಕ್ಷಿ ಮೂಲಕ ಜಿಎಸ್ ಟಿ ಪರಿಹಾರ ಸೆಸ್ ಕೊರತೆ ತುಂಬಿಸಿಕೊಳ್ಳಲು ಆರು ಸಾವಿರ ಕೋಟಿ ರುಪಾಯಿಯನ್ನು ಎರಡನೇ ಕಂತಾಗಿ ಹದಿನಾರು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ ಇಂದು ವರ್ಗಾವಣೆ ಮಾಡಲಾಗುತ್ತಿದೆ," ಎಂದು ಕೇಂದ್ರ ಹಣಕಾಸು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.
ಹಣವನ್ನು ಪಡೆಯುವ ಹದಿನಾರು ರಾಜ್ಯ ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳು ಹೀಗಿವೆ:
ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಗೋವಾ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಒಡಿಶಾ, ತಮಿಳುನಾಡು, ತ್ರಿಪುರಾ, ಉತ್ತರಪ್ರದೇಶ, ಉತ್ತರಾಖಂಡ್, ದೆಹಲಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೆರಿ.

ಈ ಮೊತ್ತವನ್ನು ವೇಯ್ಟೆಡ್ ಆವರೇಜ್ ಲೆಕ್ಕಾಚಾರ 4.42 ಪರ್ಸೆಂಟ್ ನಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಹಿಂದೆ ಅಕ್ಟೋಬರ್ 23ನೇ ತಾರೀಕು ಕೇಂದ್ರ ಸರ್ಕಾರವು 6000 ಕೋಟಿ ರುಪಾಯಿ ಸಾಲ ಪಡೆದು, 16 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಗೆ 5.19 ಪರ್ಸೆಂಟ್ ಬಡ್ಡಿ ದರದಲ್ಲಿ ವರ್ಗಾವಣೆ ಮಾಡಿತ್ತು.


Click it and Unblock the Notifications