ಪಾಪ್ ಕಾರ್ನ್‌ಗೂ GST: ನಿರ್ಮಲಾ ಸೀತಾರಾಮನ್ ಸಖತ್ ಟ್ರೋಲ್! ನೆಟ್ಟಿಗರ ಕಮೆಂಟ್ ನೋಡಿ

ಪಾಪ್ ಕಾರ್ನ್ ಇನ್ನುಂದೆ ಭಾರೀ ದುಬಾರಿಯಾಗಲಿದೆ. ಹೌದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಶನಿವಾರ (ಡಿ.21) ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯಿತು.ಈ ಸಭೆಯಲ್ಲಿ ಪಾಪ್ ಕಾರ್ನ್ ಅನ್ನು ಕೂಡ ಜಿಎಸ್‌ಟಿ ವ್ಯಾಪ್ತಿಗೆ ತರಲು ಒಪ್ಪಿಗೆ ಸೂಚಿಸಲಾಗಿದೆ. ಈ ತೆರಿಗೆ ಹೆಚ್ಚಳ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತಿದ್ದು, ನಿರ್ಮಲಾ ಸೀತಾರಾಮನ್ ಅವರನ್ನು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.

ಪಾಪ್ ಕಾರ್ನ್ನ್ನು ಮೊದಲೇ ಪ್ಯಾಕ್ ಮಾಡದ ಮತ್ತು ಲೇಬಲ್ ಮಾಡದ ಉಪ್ಪು ಮತ್ತು ಮಸಾಲೆಗಳಿಂದ ತಯಾರಿಸಿದ ಪಾಪ್‌ಕಾರ್ನ್‌ನ ಮೇಲಿನ ಜಿಎಸ್‌ಡಿಯ ತೆರಿಗೆಯನ್ನು ಶೇ.5 ಕ್ಕೆ ಹೆಚ್ಚಿಗೆ ಮಾಡಲಾಗಿದೆ.ಇನ್ನೂ ಅದನ್ನು ನೀವು ಪ್ಯಾಕ್ ಮಾಡಿ ಲೇಬಲ್ ಮಾಡಿದರೆ ಅದಕ್ಕೆ ಶೇ.12 ಕ್ಕೆ ಜಿಎಸ್‌ಟಿ ತೆರಿಗೆಯನ್ನು ಹೆಚ್ಚಳ ಮಾಡಲಾಗಿದೆ. ಆದರೆ ಕ್ಯಾರಮೆಲ್‌ನಿಂದ ತಯಾರಿಸಿದ ಪಾಪ್‌ಕಾರ್ನ್ ಅನ್ನು 'ಚೈನೀಸ್ ಮಿಠಾಯಿ' ವಿಭಾಗದಲ್ಲಿ ಇರಿಸಲಾಗಿತ್ತು ಮತ್ತು ಅದರ ಮೇಲೆ ಶೇ.18 ಜಿಎಸ್‌ಟಿ ವಿಧಿಸಲಾಯಿತು. ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕ್ಯಾರಮೆಲ್ ಪಾಪ್ ಕಾರ್ನ್ ಮೇಲೆ ಅತಿ ಹೆಚ್ಚು ತೆರಿಗೆಯನ್ನು ಹೇರಲಾಗಿತ್ತು.

 ಪಾಪ್ ಕಾರ್ನ್‌ಗೂ GST: ನಿರ್ಮಲಾ ಸೀತಾರಾಮನ್ ಸಖತ್ ಟ್ರೋಲ್!

ಜಿಎಸ್‌ಟಿ ಕೌನ್ಸಿಲ್ ಪ್ರಕಾರ, ಮೊದಲು ಪ್ಯಾಕೇಜ್ ಮಾಡಲಾದ ಮತ್ತು ಉಪ್ಪು ಮತ್ತು ಮಸಾಲೆಗಳೊಂದಿಗೆ ಬೆರೆಸಿದ ಪಾಪ್‌ಕಾರ್ನ್‌ಗೆ ಶೇ.12ತೆರಿಗೆ ವಿಧಿಸಲಾಗುತ್ತದೆ. ಆದರೆ ಕ್ಯಾರಮೆಲೈಸ್ಡ್ ಪಾಪ್‌ಕಾರ್ನ್‌ಗೆ ಶೇ. 18 ತೆರಿಗೆ ವಿಧಿಸಲಾಗುತ್ತದೆ.

ಈ ತೆರಿಗೆ ಹೆಚ್ಚಳ ಮೇಲೆ ಸಭೆಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪಾಪ್‌ಕಾರ್ನ್ ಅನ್ನು ಸಕ್ಕರೆಯೊಂದಿಗೆ (ಕ್ಯಾರಮೆಲ್ ಪಾಪ್‌ಕಾರ್ನ್) ಬೆರೆಸಿದಾಗ ಅದರ ಅಗತ್ಯ ಸ್ವರೂಪವು ಸಕ್ಕರೆ ಕ್ಯಾಂಡಿಯಾಗಿ ಬದಲಾಗುತ್ತದೆ ಮತ್ತು ಆದ್ದರಿಂದ 18 ಪ್ರತಿಶತ ಜಿಎಸ್‌ಟಿಯನ್ನು ನೀಡಲಾಗಿದೆ ಎಂದು ಪಾಪ್‌ಕಾರ್ನ್ ಮೇಲೆ ಮೂರು ರೀತಿಯ ತೆರಿಗೆಯ ಹೆಚ್ಚಳವನ್ನು ವಿಧಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್; ನೆಟ್ಟಿಗರ ಕಮೆಂಟ್ ನೋಡಿ

ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಒಂದೇ ಉತ್ಪನ್ನಕ್ಕೆ ಪ್ರತ್ಯೇಕ ತೆರಿಗೆಯನ್ನು ವಿಧಿಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಪ್ರಶ್ನೆ ಮಾಡಿದ್ದಾರೆ, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗುತ್ತಿದೆ.

ವಿಮೆಯ ಮೇಲಿನ GST ಅನ್ನು ತೆಗೆದುಹಾಕುವುದಕ್ಕಿಂತ ಪಾಪ್‌ಕಾರ್ನ್ ಮೇಲಿನ GST ಸರ್ಕಾರಕ್ಕೆ ಹೆಚ್ಚು ಮುಖ್ಯವೆಂದು ತೋರುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಒಬ್ಬರು ನಿರ್ಮಲಾ ಸೀತಾರಾಮನ್ ಹಾಗೂ ಪಾಪ್‌ಕಾರ್ನ್ ಫೋಟೋ ಹಾಕಿ ಪೋಸ್ಟ್ ಮಾಡಿದ್ದರೆ. ಈ ಫೋಸ್ಟ್ ಗೆ ಕಾಮೆಂಟ್ ಗಳ ಸುರಿಮಳೆಯೇ ಬಂದಿದೆ.

ಮುಂದೇನು? ನೀರು ಕುಡಿದರೆ ಶೇ.5 ಜಿಎಸ್‌ಟಿ, ನುಂಗಿದರೆ ಶೇ.12 ಜಿಎಸ್‌ಟಿ, ಚೆಲ್ಲಿದರೆ ಶೇ.18 ಜಿಎಸ್‌ಟಿ ಎಂದು ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ಟೀಕಿಸಿದ್ದಾರೆ.ಈ ಫೋಸ್ಟ್ ಬಗ್ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ ಈ ಕಾಮೆಂಟ್‌ಗಳ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿದೆ.

ಮತ್ತೊಬ್ಬರು "ಒಂದು ರಾಷ್ಟ್ರ, ಒಂದು ಚುನಾವಣಾ ವಕೀಲರು ಪಾಪ್‌ಕಾರ್ನ್‌ಗೆ ಒಂದೇ ತೆರಿಗೆ ದರವನ್ನು ವಿಧಿಸಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಪಾಪ್‌ಕಾರ್ನ್ ಒಂದು ಐಷಾರಾಮಿ ತಿಂಡಿ ಆದ್ದರಿಂದ ಅದರ ಮೇಲೆ ಶೇ.18ಜಿಎಸ್‌ಟಿ ಅರ್ಥಪೂರ್ಣವಾಗಿದೆ, ಆದರೆ ಖರೀದಿಸಿದ ಹಳೆಯ ಕಾರುಗಳ ಮೇಲೆ ಅದೇ ದರ ಏಕೆ. ಕಡಿಮೆ ಶ್ರೀಮಂತರಿಂದ? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಹೀಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಮಾಡುತ್ತಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವೈರಲ್ ಆಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+