ಹೆಚ್ಚಾಗಲಿದೆ ಮೊಬೈಲ್‌ ಫೋನ್‌ಗಳ ಬೆಲೆ, ಜಿಎಸ್‌ಟಿ ದರ ಏರಿಕೆ

ಶನಿವಾರ (ಮಾರ್ಚ್‌ 14)ರಂದು ನಡೆದ ಜಿಎಸ್‌ಟಿ ಸಭೆಯಲ್ಲಿ ಮೊಬೈಲ್‌ ಫೋನ್‌ಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು 18 ಪರ್ಸೆಂಟ್‌ಗೆ ಏರಿಸಲಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಜಿಎಸ್‌ಟಿ ಮಂಡಳಿ ಸಭೆ ನಡೆದಿದ್ದು, ಮೊಬೈಲ್‌ಗಳ ಮೇಲಿನ ಜಿಎಸ್‌ಟಿ ದರವನ್ನು 12 ಪರ್ಸೆಂಟ್‌ನಿಂದ 18 ಪರ್ಸೆಂಟ್‌ಗೆ ಹೆಚ್ಚಿಸಲಾಗಿದೆ. ಆದರೆ ಪಾದರಕ್ಷೆ, ಜವಳಿ ಉದ್ಯಮ ಹಾಗೂ ರಸಗೊಬ್ಬರಗಳ ಮೇಲಿನ ಜಿಎಸ್‌ಟಿ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಸಿಎನ್‌ಬಿಸಿ-ಟಿವಿ18 ವರದಿ ಮಾಡಿದೆ.

ಹೆಚ್ಚಾಗಲಿದೆ ಮೊಬೈಲ್‌ ಫೋನ್‌ಗಳ ಬೆಲೆ, ಜಿಎಸ್‌ಟಿ ದರ ಏರಿಕೆ

ಪ್ರಸ್ತುತ ದೇಶದ ಆರ್ಥಿಕ ಪರಿಸ್ಥಿತಿ ಮಂದಗತಿ ಹಾಗೂ ಕೊರೊನಾವೈರಸ್‌ ಹರಡುವಿಕೆಯಿಂದಾಗಿ ರಸಗೊಬ್ಬರಗಳು ಮತ್ತು ಪಾದರಕ್ಷೆಗಳ ಮೇಲಿನ ಜಿಎಸ್‌ಟಿ ದರವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಕೌನ್ಸಿಲ್ ಮುಂದೂಡಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಜವಳಿ ಉದ್ಯಮದ ಮೇಲೂ ಏರಿಕೆಯನ್ನು ಮುಂದೂಡಲಾಗಿದೆ.

ಈಗಾಗಲೇ ಜಿಎಸ್‌ಟಿಯ ತಾಂತ್ರಿಕ ದೋಷಗಳನ್ನು ನಿವಾರಿಸುವ ಪರಿಹಾರ ಮಾರ್ಗಗಳನ್ನು 15 ದಿನಗಳೊಳಗೆ ಸಲ್ಲಿಸುವಂತೆ ಹಣಕಾಸು ಸಚಿವಾಲಯ ಇನ್ಫೋಸಿಸ್‌ಗೆ ಕೇಳಿತ್ತು. ಈ ಸಂಬಂಧ ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಜಿಎಸ್‌ಟಿ ಕೌನ್ಸಿಲ್‌ಗೆ ವಿವರವಾದ ಪಸ್ತುತಿಯನ್ನು ಸಲ್ಲಿಸಿದ್ದಾರೆ ಹಾಗೂ ತೊಂದರೆಗಳನ್ನು ಪರಿಹರಿಸಲು ಮಾರ್ಗಸೂಚಿಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+