ಕೋವಿಡ್-19 ಸಾಂಕ್ರಾಮಿಕ ಎರಡನೇ ಅಲೆ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಕೆಲವು ನಿರ್ಬಂಧಗಳ ನಡುವೆಯು ಆಗಸ್ಟ್ 2021 ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 1,12,020 ಕೋಟಿ ರೂಪಾಯಿ ತಲುಪಿದೆ.
ಈ ಒಟ್ಟು ಆದಾಯದಲ್ಲಿ ಸಿಜಿಎಸ್‌ಟಿ 20,522 ಕೋಟಿ, ಎಸ್‌ಜಿಎಸ್‌ಟಿ 26,605 ಕೋಟಿ, ಐಜಿಎಸ್‌ಟಿ 56,247 ಕೋಟಿ (ಸರಕುಗಳ ಆಮದು ಮೇಲೆ ಸಂಗ್ರಹಿಸಿದ 26,884 ಕೋಟಿ ಸೇರಿದಂತೆ) ಮತ್ತು ಸೆಸ್ 8,646 ಕೋಟಿ (ಸರಕುಗಳ ಆಮದು ಮೇಲೆ ಸಂಗ್ರಹಿಸಿದ 646 ಕೋಟಿ ಸೇರಿದಂತೆ) ರೂಪಾಯಿನಷ್ಟಿದೆ.
ಜಿಎಸ್‌ಟಿ ವ್ಯವಸ್ಥೆಯನ್ನು ಪರಿಚಯಿಸಿದ ನಂತರ ಈ ವರ್ಷ ಏಪ್ರಿಲ್‌ನಲ್ಲಿ ಅತಿ ಹೆಚ್ಚು ಆದಾಯ ಸಂಗ್ರಹವಾಗಿತ್ತು. ನಂತರದಲ್ಲಿ ಸ್ವಲ್ಪ ಇಳಿಕೆಯಾಗಿದ್ದರೂ, ಆರ್ಥಿಕತೆ ಪುನಾರಂಭದಿಂದಾಗಿ ಜಿಎಸ್‌ಟಿ ಆದಾಯ ಏರಿಕೆಯಾಗಿದ್ದು, ಸತತ ತಿಂಗಳುಗಳು 1 ಲಕ್ಷ ಕೋಟಿ ರೂಪಾಯಿ ದಾಟಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ, ಆಗಸ್ಟ್ 2021ರ ಆದಾಯವು ಶೇಕಡಾ 30ರಷ್ಟು ಹೆಚ್ಚಾಗಿದೆ. ದೇಶೀಯ ವಹಿವಾಟಿನ ಆದಾಯ (ಸೇವೆಗಳ ಆಮದು ಸೇರಿ) ಕಳೆದ ವರ್ಷದ ಇದೇ ತಿಂಗಳಿಗಿಂತ ಶೇಕಡಾ 27ರಷಷ್ಟು ಹೆಚ್ಚಾಗಿದೆ. ಇನ್ನು 2019-20ರ ಆಗಸ್ಟ್ ತಿಂಗಳ 98,202 ಕೋಟಿಗೆ ಹೋಲಿಸಿದರೆ ಶೇಕಡಾ 14ರಷ್ಟು ಬೆಳವಣಿಗೆಯಾಗಿದೆ.
ಆಗಸ್ಟ್ 2021ರಲ್ಲಿ, ದೇಶದ ವಿವಿಧ ರಾಜ್ಯಗಳಲ್ಲಿ ಜಿಎಸ್‌ಟಿ ಆದಾಯ ಸಂಗ್ರಹವು ಎಷ್ಟಿದೆ , ಎಷ್ಟು ಬೆಳವಣಿಗೆ ಕಂಡಿದೆ ಎಂಬುದನ್ನು ಶೇಕಡವಾರು ಪ್ರಮಾಣದಲ್ಲಿ ಈ ಕೆಳಗೆ ನೀಡಲಾಗಿದೆ
1. ಜಮ್ಮು ಕಾಶ್ಮೀರ 392 ಕೋಟಿ ರೂಪಾಯಿ (20%)
2. ಹಿಮಾಚಲ ಪ್ರದೇಶ 704 ಕೋಟಿ ರೂಪಾಯಿ (18%)
3. ಪಂಜಾಬ್ 1,414 ಕೋಟಿ ರೂಪಾಯಿ (24%)
4. ಚಂಡೀಗಡ 144 ಕೋಟಿ ರೂಪಾಯಿ (4%)
5. ಉತ್ತರಾಖಂಡ 1089 ಕೋಟಿ ರೂಪಾಯಿ (8%)
6. ಹರಿಯಾಣ 5,618 ಕೋಟಿ ರೂಪಾಯಿ (28%)
7. ದೆಹಲಿ 2,880 ಕೋಟಿ ರೂಪಾಯಿ (25%)
8. ರಾಜಸ್ಥಾನ 2,582 ಕೋಟಿ ರೂಪಾಯಿ (18%)
9. ಉತ್ತರ ಪ್ರದೇಶ 5,098 ಕೋಟಿ ರೂಪಾಯಿ (17%)
10. ಬಿಹಾರ 1037 ಕೋಟಿ ರೂಪಾಯಿ (7%)
11. ಸಿಕ್ಕಿಂ 219 ಕೋಟಿ ರೂಪಾಯಿ (49%)
12. ಅರುಣಾಚಲ ಪ್ರದೇಶ 53 ಕೋಟಿ ರೂಪಾಯಿ (52%)
13. ನಾಗಾಲ್ಯಾಂಡ್ 53 ಕೋಟಿ ರೂಪಾಯಿ (2%)
14. ಮೀಜೋರಾಂ 16 ಕೋಟಿ ರೂಪಾಯಿ (31%)
15. ತ್ರಿಪುರಾ 56 ಕೋಟಿ ರೂಪಾಯಿ (30%)
16. ಮೇಘಾಲಯ 119 ಕೋಟಿ ರೂಪಾಯಿ (30%)
17. ಅಸ್ಸಾಂ 959 ಕೋಟಿ ರೂಪಾಯಿ (35%)
18. ಪಶ್ಚಿಮ ಬಂಗಾಳ 3678 ಕೋಟಿ ರೂಪಾಯಿ (20%)
19. ಮಣಿಪುರ 45 ಕೋಟಿ ರೂಪಾಯಿ (71%)
20. ಜಾರ್ಖಂಡ್ 2166 ಕೋಟಿ ರೂಪಾಯಿ (45%)
21. ಒಡಿಶಾ 3317 ಕೋಟಿ ರೂಪಾಯಿ (41%)
22. ಚತ್ತೀಸ್‌ಗಡ 2391 ಕೋಟಿ ರೂಪಾಯಿ (20%)
23. ಮಧ್ಯ ಪ್ರದೇಶ 2438 ಕೋಟಿ ರೂಪಾಯಿ (10%)
24. ಗುಜರಾತ್ 7556 ಕೋಟಿ ರೂಪಾಯಿ (25%)
25. ಮಹಾರಾಷ್ಟ್ರ 15,175 ಕೋಟಿ ರೂಪಾಯಿ (31%)
26. ಕರ್ನಾಟಕ 7429 ಕೋಟಿ ರೂಪಾಯಿ (35%)
27. ಗೋವಾ 285 ಕೋಟಿ ರೂಪಾಯಿ (34%)
28. ಕೇರಳ 1612 ಕೋಟಿ ರೂಪಾಯಿ (31%)
29. ತಮಿಳುನಾಡು 7060 ಕೋಟಿ ರೂಪಾಯಿ (35%)
30. ಪುದುಚೇರಿ 156 ಕೋಟಿ ರೂಪಾಯಿ (14%)
31. ತೆಲಂಗಾಣ 3526 ಕೋಟಿ ರೂಪಾಯಿ (26%)
32. ಆಂಧ್ರಪ್ರದೇಶ 2591 ಕೋಟಿ ರೂಪಾಯಿ (33%)
33. ಲಡಾಖ್ 14 ಕೋಟಿ ರೂಪಾಯಿ (213%)
More From GoodReturns

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

T20 World Cup: ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 96 ರನ್ಗಳ ಗೆಲುವು...ತಂಡಕ್ಕೆ ಸಿಕ್ಕ ಬಹುಮಾನಗಳೇನು?

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications