ಅಮೆರಿಕದಲ್ಲಿ (America) ಕೆಲಸ ಮಾಡುವ ಆಸಕ್ತಿ ಹೊಂದಿರುವ ಯುವಕರಿಗೆ ಮಹತ್ವ ಸುದ್ದಿಯೊಂದಿದೆ. ಯುಎಸ್ ಸಿಟಿಜನ್‌ಶಿಪ್ ಆಂಡ್ ಇಮಿಗ್ರೇಷನ್ ಸರ್ವೀಸಸ್ (USCIS) 2027ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಹೆಚ್-1ಬಿ ವೀಸಾ (H-1BVisa) ನೋಂದಣಿ ಅವಧಿಯನ್ನು ಘೋಷಿಸಿದೆ. ಈ ವೀಸಾ ವಿಶೇಷ ಜ್ಞಾನ, ಸ್ಕಿಲ್ ಹೊಂದಿರುವ ವಿದೇಶಿ ಕಾರ್ಮಿಕರಿಗೆ ಅಮೆರಿಕಾದಲ್ಲಿ ಉದ್ಯೋಗ ಅವಕಾಶಗಳನ್ನು ಒದಗಿಸುವುದಾಗಿದೆ. ಅಲ್ಲದೇ ಪ್ರತೀ ವರ್ಷ 85,000 ವೀಸಾಗಳನ್ನು ವಿತರಿಸಲಾಗುತ್ತದೆ. ಅದರಲ್ಲಿ 65,000 ಸಾಮಾನ್ಯ ಕೋಟಾ ಆಗಿದ್ದರೆ, 20,000 ಮಾಸ್ಟರ್ಸ್ ಕ್ಯಾಪ್ ಆಗಿರುತ್ತೆ.

ಹೌದು, ಅಮೆರಿಕಾದ ಪೌರತ್ವ ಮತ್ತು ವಲಸೆ ಸೇವೆಗಳ ಸಂಸ್ಥೆ (USCIS) 2027ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ H-1B ವೀಸಾ ನೋಂದಣಿ ಅವಧಿಯನ್ನು ಘೋಷಿಸಿದೆ. ಹೆಚ್1ಬಿ ವೀಸಾಗಾಗಿ ಕಾಯುತ್ತಿರುವವರಿಗೆ ಇದು ಮಹತ್ವದ ಸುದ್ದಿಯಾಗಿದ್ದು, ನೋಂದಣಿ ಪ್ರಕ್ರಿಯೆಯು ಮಾರ್ಚ್ 4ರ ಮಧ್ಯಾಹ್ನದಿಂದ (ಪೂರ್ವ ಸಮಯ) ಪ್ರಾರಂಭವಾಗಿ ಮಾರ್ಚ್ 19ರ ಮಧ್ಯಾಹ್ನದವರೆಗೆ ತೆರೆದಿರುತ್ತದೆ ಎನ್ನಲಾಗಿದೆ.
ಅಮೆರಿಕ ಸಂಸ್ಥೆಯ ಪ್ರಕಟನೆಯಲ್ಲಿ ಏನಿದೆ?
USCIS ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯ ಪ್ರಕಾರ, H-1B ವೀಸಾಗೆ ಅರ್ಜಿ ಸಲ್ಲಿಸುವವರು ಮತ್ತು ಪ್ರತಿನಿಧಿಗಳು ಪ್ರತಿ ಫಲಾನುಭವಿಯನ್ನು ಈ ಅವಧಿಯಲ್ಲಿ ತಮ್ಮ ಆನ್‌ಲೈನ್ USCIS ಖಾತೆ ಮೂಲಕ ಡಿಜಿಟಲ್ ಮೂಲಕ ನೋಂದಾಯಿಸಬೇಕು. ಪ್ರತಿ ನೋಂದಣಿಗೆ 215 ಡಾಲರ್ (ಸುಮಾರು ₹17,700) ಶುಲ್ಕವನ್ನು ಪಾವತಿಸಬೇಕಾಗುತ್ತದೆ.
USCIS ಮಾರ್ಚ್ 31ರೊಳಗೆ ಅರ್ಜಿಗಳ ಆಯ್ಕೆಯ ಕುರಿತ ನಾಟಿಫಿಕೇಶನ್ ಕಳುಹಿಸುವ ಸಾಧ್ಯತೆ ಇದೆ. H-1B ವೀಸಾ, ಅಮೆರಿಕಾದ ಉದ್ಯೋಗದಾತರಿಗೆ ತಾಂತ್ರಿಕ ಮತ್ತು ವಿಶೇಷ ಕೌಶಲ್ಯದ ವೃತ್ತಿಗಳಲ್ಲಿ ವಿದೇಶಿ ಪ್ರಜೆಗಳನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಅವಕಾಶ ನೀಡುತ್ತದೆ. 2027ರ ಆರ್ಥಿಕ ವರ್ಷದಿಂದ, ಉದ್ದೇಶಿತ ಫಲಾನುಭವಿಯ ನೋಂದಣಿ ಯಶಸ್ವಿಯಾಗಿ ಆಯ್ಕೆಯಾದರೆ ಮಾತ್ರ ಉದ್ಯೋಗದಾತರು H-1B ಮನವಿ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಲಾಗಿದೆ.
ನೋಂದಣಿ ಮಾಡುವುದು ಹೇಗೆ?
ಎಲ್ಲಾ H-1B ಕ್ಯಾಪ್ ನೋಂದಣಿಗಳನ್ನು USCIS ಆನ್‌ಲೈನ್ ಖಾತೆ ಮೂಲಕವೇ ಸಲ್ಲಿಸಬೇಕು ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಖಾತೆ ಇಲ್ಲದ ಉದ್ಯೋಗದಾತರು ಖಾತೆಯನ್ನು ಕಡ್ಡಾಯವಾಗಿ ರಚಿಸಬೇಕು. ಪ್ರತಿನಿಧಿಗಳು ತಮ್ಮ ಖಾತೆಗಳಿಗೆ ಕಂಪನಿ ಗ್ರಾಹಕರನ್ನು ಯಾವುದೇ ಸಮಯದಲ್ಲಿ ಸೇರಿಸಬಹುದು. ಆದಾಗ್ಯೂ, ಫಲಾನುಭವಿಯ ವಿವರಗಳು ಮತ್ತು 215 ಡಾಲರ್ ನೋಂದಣಿ ಶುಲ್ಕವನ್ನು ಮಾರ್ಚ್ 4ರಂದು ನೋಂದಣಿ ವಿಂಡೋ ತೆರೆದ ನಂತರವಷ್ಟೇ ಸಲ್ಲಿಸಬಹುದು. ನೋಂದಣಿ ಅವಧಿ ಮುಗಿದ ನಂತರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಮಾರ್ಚ್ 31, 2026 ರೊಳಗೆ ಆಯ್ಕೆಯಾದವರಿಗೆ ಅಧಿಸೂಚನೆಗಳನ್ನು ಕಳುಹಿಸಲಾಗುತ್ತೆ ಎಂದು ವರದಿಯಾಗಿದೆ.
ಕಂಪನಿಗಳು ಅಥವಾ ಫಲಾನುಭವಿಗಳು ಅದಕ್ಕಾಗಿ ಮೊದಲು ತಮ್ಮ ದಾಖಲೆಗಳನ್ನು ಸಿದ್ಧಪಡಿಸಬೇಕು. ಅಲ್ಲದೇ ಯುಎಸ್‌ಸಿಐಎಸ್ ಖಾತೆಯನ್ನು ರಚಿಸಬೇಕು.
ಹೆಚ್1ಬಿ ವೀಸಾ ಎಂದರೇನು?
H-1B ವೀಸಾ ಎಂದರೆ ಅಮೆರಿಕಾದಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡಲು ಅನುಮತಿ ನೀಡುವ ಒಂದು ನಾನ್-ಇಮಿಗ್ರಂಟ್ ವರ್ಕ್ ವೀಸಾ. ಇದನ್ನು ಮುಖ್ಯವಾಗಿ ಕಂಪನಿಗಳು, ತನ್ನ ಉದ್ಯೋಗಿಗಳಿಗಾಗಿ ಬಳಸುತ್ತದೆ.


Click it and Unblock the Notifications