ಬೆಂಗಳೂರು: ಎಚ್ಎಎಲ್ (HAL) ಏರ್‌ಪೋರ್ಟ್ ನವೀಕರಣಕ್ಕೆ ಸಜ್ಜಾಗಿದ್ದು, ಈಗಾಗಲೇ ಮಾಸ್ಟರ್‌ಪ್ಲಾನ್ ಕೂಡ ಸಿದ್ದವಾಗಿದೆ. ಹಾಗಿದ್ರೆ, ಹೇಗಿರಲಿದೆ ವಿಮಾನ ನಿಲ್ದಾಣ..? ಪ್ರಯಾಣಿಕರಿಕೆ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಹೌದು, 2008 ರವರೆಗೆ ನಗರದ ಪ್ರಾಥಮಿಕ ಏರ್ ಟ್ರಾಫಿಕ್ ಕೇಂದ್ರವಾಗಿ ಸೇವೆ ಸಲ್ಲಿಸಿದ ಬೆಂಗಳೂರಿನ HAL ವಿಮಾನ ನಿಲ್ದಾಣವು ನವೀಕರಣಕ್ಕೆ ಸಜ್ಜಾಗುತ್ತಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಅಧ್ಯಕ್ಷರು ಪ್ರಯಾಣಿಕರಿಗೆ ಪೂರೈಸಬಹುದಾದ ಸೌಲಭ್ಯವನ್ನು ಪುನಶ್ಚೇತನಗೊಳಿಸುವ ಗುರಿಯನ್ನು ಹೊಂದಿರುವ ಮಾಸ್ಟರ್ ಪ್ಲಾನ್ ಗೆ ಅನುಮೋದನೆ ನೀಡಿದ್ದಾರೆ.

ಇನ್ನೂ 2008 ರಿಂದ, ಬೆಂಗಳೂರು ವಿಮಾನ ಪ್ರಯಾಣಿಕರು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಳಸುತ್ತಿದ್ದಾರೆ.ಇದನ್ನು ಮತ್ತೆ ಅಭಿವೃದ್ಧಿಪಡಿಸುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
ವರದಿಯ ಪ್ರಕಾರ ಎಚ್‌ಎಎಲ್ ವಿಮಾನ ನಿಲ್ದಾಣವು ಪ್ರತಿನಿತ್ಯ ಸುಮಾರು 12 ಸಣ್ಣ ವಿಮಾನಗಳನ್ನು ಒಳಗೊಂಡಿದೆ.ಇದರಲ್ಲಿ ರಕ್ಷಣಾ ಪಡೆಗಳು, ವಿಐಪಿಗಳು ಮತ್ತು ಖಾಸಗಿ ಸಂಸ್ಥೆಗಳು ಬಳಸುತ್ತವೆ.ಇದರ ಏಕೈಕ ರನ್‌ವೇ, 3,306 ಮೀಟರ್ ಉದ್ದ ಮತ್ತು 61 ಮೀಟರ್ ಅಗಲವನ್ನು ಹೊಂದಿದೆ, ಇದು 24ಗಂಟೆಗಳ ಕಾಲದವರೆಗೂ ಕೆಲಸಗಳನ್ನು ನಿರ್ವಹಿಸುತ್ತಿದೆ ಮತ್ತು ಈ ನಿಲ್ದಾಣವು 30 ವಿಮಾನ ನಿಲುಗಡೆ ತಾಣವಾಗಿದೆ.
ಹೊಸದಾಗಿ ಅನುಮೋದಿಸಲಾದ ಯೋಜನೆಯಲ್ಲಿ 2047 ರ ವೇಳೆಗೆ ವಾರ್ಷಿಕವಾಗಿ 40 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಅವಕಾಶಗಳನ್ನು ಒದಗಿಸುತ್ತದೆ. ವಿಮಾನ ಹೊರಡುವ ಸಮಯದಲ್ಲಿ ವಿಮಾನ ನಿಲ್ದಾಣವು ಸುಮಾರು 2,500 ಪ್ರಯಾಣಿಕರನ್ನು ನಿರ್ವಹಿಸಬಹುದು. 2008 ರಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ನಿಲ್ಲಿಸುವ ಮೊದಲು 2007-08 ರ ಆರ್ಥಿಕ ವರ್ಷದಲ್ಲಿ HAL ವಿಮಾನ ನಿಲ್ದಾಣವು 10 ಲಕ್ಷ ಪ್ರಯಾಣಿಕರನ್ನು ನಿರ್ಭಯಿಸುವಂತಹ ಸೌಲಭ್ಯಗಳನ್ನು ಒದಗಿಸುತ್ತಿತ್ತು.
500 ವಾಹನಗಳ ನಿಲುಗಡೆಗೆ ವ್ಯವಸ್ಥೆ
ವಿಮಾನ ನಿಲ್ದಾಣದಲ್ಲಿ 500 ವಾಹನಗಳನ್ನು ನಿಲುಗಡೆ ಮಾಡುವಂತಹ ಆರು ಅಂತಸ್ತಿನ ಬಹು ಹಂತದ ಕಟ್ಟಡದಲ್ಲಿ ಕಾರ್ ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ಮಿಸಲಾಗುವುದು. ಪ್ರವೇಶ ಮತ್ತು ಸಂಚಾರವನ್ನು ಹೆಚ್ಚಿಸಲು ಟರ್ಮಿನಲ್ ಮುಂಭಾಗದ ಎರಡು ಪಥಗಳ ರಸ್ತೆಯನ್ನು ನಾಲ್ಕು ಲೇನ್‌ಗಳಾಗಿ ವಿಸ್ತರಿಸಲಾಗುತ್ತದೆ. ಇದರಿಂದ ಪ್ರಯಾಣಿಕರ ಸಂಚಾರಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ.
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ
ವಿಮಾನ ನಿಲ್ದಾಣದ ರನ್‌ವೇ ಬದಲಾಗದೆ ಉಳಿದಿದ್ದರೂ, 150-ಕಿಮೀ ವ್ಯಾಪ್ತಿಯಲ್ಲಿರುವ ಇತರ ವಿಮಾನ ನಿಲ್ದಾಣಗಳನ್ನು ತಡೆಯುವ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನೊಂದಿಗಿನ ಅದರ ವಿಶೇಷ ಒಪ್ಪಂದವು ಮೇ 24, 2033 ರಂದು ಕೊನೆಗೊಳ್ಳುತ್ತದೆ. 2004 ರಲ್ಲಿ ಸಹಿ ಮಾಡಿದ ರಿಯಾಯಿತಿ ಒಪ್ಪಂದದ ಅಡಿಯಲ್ಲಿ, HAL ವಿಮಾನ ನಿಲ್ದಾಣವನ್ನು ಪುನಃ ತೆರೆಯಲು ನಿರ್ಧರಿಸಲಾಗಿದೆ. ನಾಗರಿಕ ಕಾರ್ಯಾಚರಣೆಗಳಿಗಾಗಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣವಾಗಿ ಹೊಸ ರೂಪವನ್ನೇ ಪಡೆದುಕೊಳ್ಳುತ್ತದೆ.
ಹೆಚ್ಚುವರಿ ವಿಮಾನ ನಿಲ್ದಾಣದ ಬೇಡಿಕೆಯು ಬೆಂಗಳೂರು ನಗರದಲ್ಲಿ ಮುಂದುವರಿಯುತ್ತದೆ. ಪರಿಷ್ಕರಿಸಿದ HAL ವಿಮಾನ ನಿಲ್ದಾಣವು ಹತ್ತಿರದ ನಗರಗಳಿಗೆ ಪ್ರಾದೇಶಿಕ ಸಂಪರ್ಕ ಯೋಜನೆ (UDAAN) ಕಾರ್ಯಾಚರಣೆಗಳಿಗೆ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರಕಟಣೆಗೆ ತಿಳಿಸಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications