ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ವಿಚಾರವಾಗಿ ಭಾರೀ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಹಿಂದೂಸ್ತಾನ್ ಏರೊನಾಟಿಕ್ಸ್ ಲಿ ( ಎಚ್‌ಎಎಲ್) ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಕಾರ್ಯಾಚರಣೆಗಳನ್ನು ಪುನರಾರಂಭಿಸುವ ಬಗ್ಗೆ ವದಂತಿಗಳು ಜೋರಾಗಿವೆ. ಈ ಕುರಿತು ಇತ್ತೀಚೆಗೆ ಹಲವಾರು ವರದಿಗಳು ಸಹ ಆಗಿದ್ದವು. ಹಾಗಿದ್ರೆ ಎಚ್‌ಎಎಲ್ ವಿಮಾನ ನಿಲ್ದಾಣ ಪುನರಾರಂಭ ಯಾವಾಗ.. ? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಹೌದು, ಎಚ್‌ಎಎಲ್ ವಿಮಾನ ನಿಲ್ದಾಣವು ಭಾರತೀಯ ವಾಯುಪಡೆಗೆ ಸಂಭಂದಪಟ್ಟಂತೆ ಮಹತ್ವಪೂರ್ಣ ಪಾತ್ರ ವಹಿಸುತ್ತಿದ್ದು, ಇದರ ಜೊತೆಗೆ ವಾಣಿಜ್ಯ ವಿಮಾನ ಸೇವೆಗಳ ಪುನರಾರಂಭದ ಮೂಲಕ ಮತ್ತಷ್ಟು ವಿಸ್ತಾರಗೊಳ್ಳಬಹುದು.

ವಾಣಿಜ್ಯ ವಿಮಾನ ಸೇವೆಗಳ ಪುನರಾರಂಭವು, ಪ್ರಾದೇಶಿಕ ವಿಮಾನೋದ್ಯಮವನ್ನು ಉತ್ತೇಜಿಸಲು ಹಾಗೂ ನಾಗರಿಕ ವಿಮಾನೋದ್ಯಮದ ವೃದ್ಧಿಗೆ ಸಹಕಾರಿಯಾಗಬಹುದು.
ಹೆಚ್ಚು ವಿಮಾನ ಸೇವೆಗಳು ಪ್ರಾದೇಶಿಕ ಸ್ಥಳಗಳನ್ನು ಸಂಪರ್ಕಿಸುವುದರಿಂದ ಉದ್ಯಮ, ಪ್ರವಾಸೋದ್ಯಮ ಹಾಗೂ ಸಂವಹನ (connectivity) ಕ್ಷೇತ್ರಗಳಲ್ಲಿ ಹೊಸ ಆರ್ಥಿಕ ಚಟುವಟಿಕೆಗಳನ್ನು ಹುಟ್ಟುಹಾಕುವ ಸಾಧ್ಯತೆ ಇದೆ. ಇದರಿಂದ ಸ್ಥಳೀಯ ಉದ್ಯೋಗ ಸೃಷ್ಟಿಗೆ ಸಹಾಯಕವಾಗಲು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನವನ್ನು ನೀಡಲು ಸಹಾಕಾರಿಯಾಗುತ್ತದೆ.
ಇದರಿಂದ ಪ್ರಯಾಣಿಕರಿಗೆ ಸುಲಭ ಪ್ರವಾಸ ಮತ್ತು ನಿರ್ವಹಣೆಯೊಂದಿಗೆ, ದೇಶಾದ್ಯಾಂತ ವಾಣಿಜ್ಯ ವಿಮಾನ ಸೇವೆಗಳ ವಿಸ್ತರಣೆ ಸಾಧ್ಯವಾಗಲಿದೆ.
ವಾಣಿಜ್ಯ ವಿಮಾನ ಸೇವೆಗಳು ಪುನರಾರಂಭವಾಗುವುದು, ಪ್ರಾದೇಶಿಕ ವಿಮಾನೋದ್ಯಮಕ್ಕೆ ಸಹಕಾರಿಯಾಗುವಂತೆಯೇ, ಉದ್ಯಮ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೂ ಹೊಸ ಆರ್ಥಿಕ ಚಟುವಟಿಕೆಗಳನ್ನು ತಂದು ಕೊಡಬಹುದು.
ಮುಂದಿನ ತಿಂಗಳು ಮಾರ್ಚ್ ನಲ್ಲಿ ಎರಡನೇ ವಾರದಲ್ಲಿ ದೆಹಲಿಯಲ್ಲಿ ಎಲ್ಲಾ ಪಾಲುದಾರರ ಸಭೆ ನಡೆಯಲಿದೆ. ನಾಗರಿಕ ವಿಮಾನಯಾನ ಸಚಿವರು ಇದರ ನೇತೃತ್ವ ವಹಿಸಲಿದ್ದಾರೆ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA), ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಮತ್ತು HAL ನಂತಹ ಪಾಲುದಾರರನ್ನು ಒಳಗೊಂಡಿರುತ್ತದೆ ಎಂದು ಬೆಂಗಳೂರು ಸಚಿವ ತೇಜಸ್ವಿ ಸೂರ್ಯ ಬುಧವಾರ ಮಾಹಿತಿಯನ್ನು ತಿಳಿಸಿದರು.
ವಿಧಾನಸೌಧದಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ಈ ವಿಮಾನ ನಿಲ್ದಾಣವು 2008 ರವರೆಗೆ ಬೆಂಗಳೂರಿಗೆ ಸೇವೆ ಸಲ್ಲಿಸಿತು. ಆಗ ದೇವನಹಳ್ಳಿಯಲ್ಲಿ ಬಿಐಎಎಲ್ ನಡೆಸುತ್ತಿದ್ದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಯಾಯಿತು.
ಹಳೆಯ ವಿಮಾನ ನಿಲ್ದಾಣವನ್ನು ಪುನಃ ತೆರೆಯುವುದರಿಂದ ಬೆಂಗಳೂರಿಗೆ ಹಲವು ವಿಧಗಳಲ್ಲಿ ಸಹಾಯವಾಗುತ್ತದೆ ಎಂದು ಸಚಿವ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಎಚ್‌ಎಎಲ್ ವಿಮಾನ ನಿಲ್ದಾಣವು ನಗರದ ಹೃದಯ ಭಾಗದಲ್ಲಿ ವಾಣಿಜ್ಯ ವಿಮಾನ ನಿಲ್ದಾಣ ಸೌಲಭ್ಯವನ್ನು ಸೃಷ್ಟಿಸುವ ಮೂಲಕ, ಬಿಎಂಎಲ್ (ಬೆಂಗಳೂರು ಇಂಟರ್‌ನ್ಯಾಷನಲ್ ಏರೋಪೋರ್ಟ್ ಲಿಮಿಟೆಡ್) ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.
ವಾಣಿಜ್ಯ ವಿಮಾನ ಸೇವೆಗಳು ಪುನರಾರಂಭಗೊಂಡಿರುವುದರಿಂದ ನಗರದಲ್ಲಿ ಹೆಚ್ಚಿನ ಪ್ರಯಾಣಿಕರನ್ನು ತನ್ನ ಕಡೆ ಸಳೆದುಕೊಳ್ಳಬಹುದು. ಇದರಿಂದ ಬಿಐಎಎಲ್‌ಗೆ ಹೆಚ್ಚುವರಿ ಆದಾಯವನ್ನು ತರಲು ಸಹಾಯ ಮಾಡುತ್ತದೆ. ಹೀಗಾಗಿ ಎರಡೂ ಸಂಸ್ಥೆಗಳಿಗೆ ಆದಾಯದ ಹರಿವನ್ನು ಹೆಚ್ಚಿಸುವುದರೊಂದಿಗೆ, ಆರ್ಥಿಕ ಚಟುವಟಿಕೆಗಳ ವೃದ್ಧಿಗೆ ಸಹಕಾರಿಯಾಗಲಿದೆ.
ಬಿಐಎಎಲ್ ಮತ್ತು ಎಚ್ ಎಎಲ್ ಕೂಡ ಇದರ ಬಗ್ಗೆ ಹೆಚ್ಚಿನ ಉತ್ಸಾಹವನ್ನು ತೋರುತ್ತಿದ್ದಾರೆ. ನಾಗರಿಕ ವಿಮಾನಯಾನ ಸಚಿವ (ಕೆ ರಾಮಮೋಹನ್ ನಾಯ್ಡು) ಕೂಡ ಇದನ್ನು
HAL ವಿಮಾನ ನಿಲ್ದಾಣದ ಪುನರಾರಂಭಕ್ಕೆ ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿದರು.
ಸಚಿವ ತೇಜಸ್ವಿ ಸೂರ್ಯ ಜನವರಿ ತಿಂಗಳಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ HAL ವಿಮಾನ ನಿಲ್ದಾಣದ ಪುನರಾರಂಭಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮೇಲ್ಮನವಿ ಸಲ್ಲಿಸಿದ್ದಾಗಿ ಮಾಡಿದ್ದರು. ನಾವು ಪ್ರಸ್ತಾವಿತ ಎರಡನೇ ವಿಮಾನ ನಿಲ್ದಾಣಕ್ಕಾಗಿ ಕಾಯುತ್ತಿರುವಾಗ, HAL ನಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಸಾರ್ವಜನಿಕ ಮೂಲಸೌಕರ್ಯವನ್ನು ವ್ಯರ್ಥ ಮಾಡುವುದರಲ್ಲಿ ಯಾವುದೇ ತರ್ಕವಿಲ್ಲ ಎಂದು ಪೋಸ್ಟ್ ಸಹ ಮಾಡಿದ್ದರು.
ಸರ್ಕಾರವು ಸುರಂಗ ರಸ್ತೆಗಳಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವ ಬದಲು, ಮೆಟ್ರೋ ಜಾಲವನ್ನು HAL ವಿಮಾನ ನಿಲ್ದಾಣದೊಂದಿಗೆ ಹೇಗೆ ಸಂಯೋಜಿಸಬಹುದು ಎಂಬುದನ್ನು ನೋಡಬೇಕು ಎಂದು ಸಚಿವ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಿದಾಗ, ಬಿಐಎಎಲ್ ಮತ್ತು ಸರ್ಕಾರವು 25 ವರ್ಷಗಳ ಕಾಲ 150 ಕಿ.ಮೀ ವ್ಯಾಪ್ತಿಯಲ್ಲಿ ಬೇರೆ ಯಾವುದೇ ವಿಮಾನ ನಿಲ್ದಾಣ ಇರಬಾರದು ಎಂಬ ಒಪ್ಪಂದಕ್ಕೆ ಬಂದಿತ್ತು. ಇದು 2033 ರಲ್ಲಿ ಕೊನೆಗೊಳ್ಳುತ್ತದೆ. ಹೀಗಾಗಿ, ಬಿಐಎಎಲ್ ಈ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯುವುದು ಮುಂದಿನ ದಾರಿ ಎಂದು ಅವರು ಹೇಳಿದರು.
ನಗರದ ಪೂರ್ವಾರ್ಧದಲ್ಲಿ ಎರಡನೇ ವಿಮಾನ ನಿಲ್ದಾಣವು ತಮಿಳುನಾಡು ಮತ್ತು ಆಂಧ್ರಪ್ರದೇಶದ ಗಡಿಗಳ ಕಡೆಗೆ ನಗರವನ್ನು ವಿಸ್ತರಿಸುತ್ತಲೇ ಇರುತ್ತದೆ. ಅಲ್ಲದೆ, ಎಚ್‌ಎಎಲ್ ವಿಮಾನ ನಿಲ್ದಾಣ ತೆರೆದರೆ, ಬೆಂಗಳೂರು ಮತ್ತು ಮೈಸೂರು ನಡುವೆ ಅಗತ್ಯವಿರುವ ಸ್ಥಳದಲ್ಲಿ ವಿಮಾನ ನಿಲ್ದಾಣ ಸಿಗುತ್ತದೆಯೇ?" ಎಂದು ಅಶ್ವಿನ್ ಮಹೇಶ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಮುಚ್ಚಲು ಕಾರಣವಾದ ಷರತ್ತುಗಳು ಇನ್ನೂ ಜಾರಿಯಲ್ಲಿವೆ. ಯಾವುದೇ ದೀರ್ಘಾವಧಿಯ ಯೋಜನೆಗೆ ನೀತಿಯ ಸ್ಥಿರತೆ ಮುಖ್ಯವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಬೆಲೆಗಳನ್ನು ಕಡಿಮೆ ಮಾಡಲು ಮತ್ತು ಸೇವೆಯ ಗುಣಮಟ್ಟವನ್ನು ಸುಧಾರಿಸಲು ಏಕೈಕ ಮಾರ್ಗವೆಂದರೆ ಸ್ಪರ್ಧೆ. ವಿಮಾನಯಾನ ಸಂಸ್ಥೆಗಳು ಸ್ಪರ್ಧಿಸಲು ಸಾಧ್ಯವಾದರೆ, ವಿಮಾನ ನಿಲ್ದಾಣಗಳು ಸ್ಪರ್ಧಿಸಬೇಕು. ಬಿಡದಿ ಅಥವಾ ತುಮಕೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣವನ್ನು ಪ್ರಾರಂಭಿಸುವುದು ಸಹ ಸ್ವಾಗತಾರ್ಹ ಕಲ್ಪನೆ. ಬಹು ವಿಮಾನ ನಿಲ್ದಾಣಗಳ ಪ್ರಮುಖ ಪ್ರಯೋಜನವೆಂದರೆ ನಗರವು ಬಹು ದಿಕ್ಕುಗಳಲ್ಲಿ ಅಭಿವೃದ್ಧಿ ಹೊಂದುತ್ತದೆ ಎಂದು ಅವರು ವಿವರಿಸಿದರು.
ಡಿಸೆಂಬರ್ 31, 2024 ರ ಹೊತ್ತಿಗೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 75 ದೇಶೀಯ ಮತ್ತು 30 ಅಂತರರಾಷ್ಟ್ರೀಯ ಸ್ಥಳಗಳಿಗೆ ಸೇವೆ ಸಲ್ಲಿಸಿದೆ. ಇದರ ಜಾಲವು ಈಗ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ 12 ಸರಕು ವಿಮಾನಯಾನ ಸಂಸ್ಥೆಗಳನ್ನು ಒಳಗೊಂಡಿದೆ.


Click it and Unblock the Notifications