"ಅಮ್ಮ" ನಮ್ಮ ಜೀವಾಳ ಒಂದು ಜೀವವಷ್ಟೇ ಅಲ್ಲ ತ್ಯಾಗ, ಪ್ರೀತಿ, ಮಮಕಾರದ ಸ್ವರೂಪ ತಾಯಿಯೇ ಆಗಿರುತ್ತಾಳೆ. ಅಂತಹ ತಾಯಿಗೆ ಉಸಿರು ನೀಡಿದ ದೇವತೆ. ನಮ್ಮಗೆ ದಾರೊ ತೋರಿಸಿದ ದೇವತೆ. ಈ ಜಗತ್ತಿನಲ್ಲಿ ನಿಷ್ಕಲ್ಮಷವಾದ ಪ್ರೀತಿ ಇದ್ದೇ ಎಂದರೆ ಅದು ತಾಯಿ ಪ್ರೀತಿ ಅಷ್ಟೇ... ಬೆಲೆ ಕಟ್ಟಲಾಗದ ಅಪರೂಪದ ಮಾಣಕ್ಯ ಅಮ್ಮ..ತಾಯಿಯ ಪ್ರೀತಿ, ತ್ಯಾಗಕ್ಕೆ ನಾವು ಏನೇ ಮಾಡಿದರೂ ಅದು ಕಡಿಮೆ ಆಗುತ್ತದೆ. ನಮ್ಮನ್ನು ಈ ಜಗತ್ತಿಗೆ ತರುವ ಜೀವ ಸೃಷ್ಟಿ. ಪ್ರೀತಿಯನ್ನು ತೋರಿಸಲು ನಮಗೆ ಯಾವುದೇ ವಿಶೇಷ ದಿನ ಅಗತ್ಯವಿಲ್ಲ. ಆದರೆ ತಾಯಂದಿರ ದಿನ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅವಕಾಶ ನೀಡುತ್ತದೆ. ಹಾಗಾಗಿ ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ. ಪ್ರತಿವರ್ಷದಂತೆ ಈ ವರ್ಷ ಕೂಡ ಅಮ್ಮದಿಂದರ ದಿನ ಮೇ 11ರಂದು ತಾಯಿಂದಿರ ದಿನ ಬಂದಿದೆ. ಹಾಗಿದ್ರೆ ನೀವು ನಿಮ್ಮ ತಾಯಿಗೆ ಈ ರೀತಿಯಾಗಿ ಶುಭಾಶಯಗಳನ್ನು ತಿಳಿಸಿ..
ಹೌದು,ಜಗತ್ತಿನ ಮೊದಲ ಸೃಷ್ಟಿ ಅಮ್ಮ... ಎಲ್ಲಾ ತಾಯಿಯರಿಗೂ ಅಮ್ಮನ ದಿನಾಚರಣೆಯ ಶುಭಾಶಗಳು..ಈ ದಿನ ನಿಮ್ಮ ತಾಯಿಗೆ ವಿಶೇಷವಾಗಿ ವಿಶ್ ಮಾಡಬೇಕು ಅಂತಿದ್ರೆ ಈ ಕೆಳಗಿನ ಸಂದೇಶಗಳ ಮೂಲಕ ನಿಮ್ಮ ತಾಯಿ ಶುಭಾಶಯಗಳನ್ನು ತಿಳಿಸಿ..

ತಾಯಂದಿರ ದಿನ (Mothers Day) ವನ್ನು ಮೊದಲು 1908ರಲ್ಲಿ ಅಮೆರಿಕದಲ್ಲಿ ಆಚರಣೆಯನ್ನು ಮಾಡಲಾಗಿತ್ತು. ಅಮೆರಿಕದ ಶಾಂತಿ ಕಾರ್ಯಕರ್ತೆ ಅನಾ ಜಾರ್ವಿಸ್ ತಮ್ಮ ತಾಯಿಯನ್ನು ಬಹಳಷ್ಟು ಪ್ರೀತಿಸುತ್ತಿದ್ದರು. ಅವರು ಮದುವೆಯಾಗಿರಲಿಲ್ಲ. 1905ರಲ್ಲಿ ತಮ್ಮ ತಾಯಿಯ ಮರಣದ ಬಳಿಕ, ತಾಯಿಯ ಮೇಲೆ ಇದ್ದ ಅಪಾರ ಪ್ರೀತಿಯನ್ನು ಗೌರವಿಸಲು ಅವರು ತಾಯಂದಿರ ದಿನವನ್ನು ಪ್ರಾರಂಭಿಸಿದರು. ಅನಾದ ಆದರ್ಶ ಹಾಗೂ ತಾಯಂದಿರ ತ್ಯಾಗವನ್ನು ಗುರುತಿಸಲು, ಈ ದಿನವನ್ನು ವಿಶೇಷವಾಗಿ ಆಯ್ಕೆ ಮಾಡಲಾಯಿತು. ಅನಾ ಜಾರ್ವಿಸ್ ಅವರ ಪ್ರಯತ್ನದ ಫಲವಾಗಿ, ಅಮೆರಿಕದ ಅಧ್ಯಕ್ಷ ವುಡ್ರೋ ವಿಲ್ಸನ್ ಅವರು ಮೇ 9, 1914 ರಂದು ಅಧಿಕೃತವಾಗಿ ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವೆಂದು ಘೋಷಿಸಿದರು.
ಇದಾದ ನಂತರ, ಅಮೆರಿಕದೊಂದಿಗೆ ಭಾರತ ಸೇರಿದಂತೆ ಅನೇಕ ದೇಶಗಳು ಈ ದಿನವನ್ನು ತಾಯಂದಿರ ದಿನವಾಗಿ ಆಚರಿಸಲು ಆರಂಭಿಸಿದವು. ಈ ದಿನ ತಾಯಿಗೆ ಪ್ರೀತಿ, ಗೌರವ, ಧನ್ಯತೆಗಳನ್ನು ವ್ಯಕ್ತಪಡಿಸುವ ವಿಶೇಷ ದಿನವಾಗಿದೆ.
ನಿಮ್ಮ ತಾಯಿಗೆ ವಿಶೇಷವಾಗಿ ಈ ರೀತಿಯಲ್ಲಿ ವಿಶ್ ಮಾಡಿ..
1.ಅಮ್ಮಾ, ನೀನು ನನ್ನ ಕಣ್ಣುಗಳ ಬೆಳಕು,
ನೀ ನನ್ನ ಮೊದಲ ಟೀಚರ್, ನನ್ನ ಪ್ರೇರಣೆಯ ಶಕ್ತಿ.
ಈ ಭೂಮಿಗೆ ನನ್ನನ್ನು ತಂದ ನಿನ್ನ ಪ್ರೀತಿಗೆ
ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ.
ನಿನ್ನ ಪ್ರೀತಿಗೆ, ತ್ಯಾಗಕ್ಕೆ,ಹೃತ್ಪೂರ್ವಕ ಧನ್ಯವಾದಗಳು.
2.ನಿಮ್ಮ ನಿಷ್ಕಲ್ಮಶವಾದ ಪ್ರೀತಿ ಬೆಂಬಲಕ್ಕೆ ಧನ್ಯವಾದಗಳು ತಾಯಂದಿರ ದಿನದ ಶುಭಾಶಯಗಳು!
ಜಗತ್ತಿನ ಅತ್ಯುತ್ತಮ ತಾಯಿಗೆ - ನಿಮ್ಮ ಶಕ್ತಿ ನನಗೆ ಪ್ರತಿದಿನ ಸ್ಫೂರ್ತಿ ನೀಡುತ್ತದೆ.
3.ನೀವು ಕೇವಲ ನನ್ನ ತಾಯಿಯಲ್ಲ ,ನೀವು ನನ್ನ ಆತ್ಮೀಯ ಸ್ನೇಹಿತೆ. ತಾಯಂದಿರ ದಿನದ ಶುಭಾಶಯಗಳು!
4.ನೀವು ನಮ್ಮ ಕುಟುಂಬದ ಹೃದಯ ತಾಯಂದಿರ ದಿನದ ಶುಭಾಶಯಗಳು!
5.ನೀವು ನನ್ನ ಮೊದಲ ಗುರು, ಮಾರ್ಗದರ್ಶಕ ಮತ್ತು ನಾಯಕ. ತಾಯಂದಿರ ದಿನದ ಶುಭಾಶಯಗಳು!
6.ನಾನು ಕೆಲವೊಮ್ಮೆ ನಿಮಗೆ ಬೇಸರ ತಂದಿದ್ದರೆ ಕ್ಷಮಿಸಿ. ನಾನು ನಿನ್ನನ್ನು ಪ್ರೀತಿಸುವ ಕಾರಣದಿಂದ ಹಾಗೆ ಮಾಡಿರಬಹುದು!ನಾನು ಹೇಗಿರಬೇಕು ಎಂದು ಕನಸು ಕಾಣುತ್ತಿದ್ದೆ ಎಂಬುದಕ್ಕೆ, ನೀವು ಯಾವಾಗಲೂ ಬುದ್ಧಿವಂತ ಉದಾಹರಣೆಯಾಗಿದ್ದೀರಿ.ತಾಯಂದಿರ ದಿನದ ಹೃತ್ಪೂರ್ವಕ ಶುಭಾಶಯಗಳು
7. ನೀನೇ ನನ್ನ ಪ್ರೇರಣೆ, ನಿನ್ನ ಪ್ರೀತಿ ನನ್ನ ಬದುಕಿನ ದಾರಿ.ನೀವು ಇಲ್ಲದೆ ನನ್ನ ಒಂದು ದಿನವೂ ಅಪೂರ್ಣ! ತಾಯಂದಿರ ದಿನದ ಹೃದಯಭರಿತ ಶುಭಾಶಯಗಳು ಅಮ್ಮ..
ಈ ಮೇಲಿನ ಸಂದೇಶಗಳನ್ನು ನಿಮ್ಮ ತಾಯಿ ತಿಳಿಸಿ ಶುಭಾಶಯಗಳನ್ನು ತಿಳಿಸಿ ತಾಯಿಯನ್ನು ಯಾವಗಲೂ ಖುಷಿಯಾಗಿ ಇರಿಸಿ... ತಾಯಿ ಸಮತೋಷದ ಮುಂದೆ ಬೇರೆ ಯಾವುದು ಇಲ್ಲ.


Click it and Unblock the Notifications