ಚಂಡೀಗಢ, ಜೂನ್ 15: ಹರಿಯಾಣ ಸರ್ಕಾರವು ಕೇವಲ ಮದ್ಯದಂಗಡಿಗಳ ಹರಾಜಿನಿಂದಲೇ 1,756 ಕೋಟಿ ರೂಪಾಯಿ ಗಳಿಸಿದೆ. ಹೌದು ಹರಿಯಾಣದ ಜಾರಿಗೆ ತರಲಾದ ಹೊಸ ಅಬಕಾರಿ ನೀತಿ 2024-25 ರ ಪ್ರಕಾರ, ರಾಜ್ಯ ಸರ್ಕಾರ ಪೂರ್ವ ಮತ್ತು ಪಶ್ಚಿಮ ವಲಯಗಳ 162 ಅಂಗಡಿಗಳಿಗೆ ಬುಧವಾರ ಆನ್‌ಲೈನ್ ಟೆಂಡರ್ ತೆರೆಯಲಾಗಿದ್ದು, ಇ-ಟೆಂಡರ್ ಮೂಲಕ 1,756 ಕೋಟಿ ರೂಪಾಯಿ ಗಳಿಸಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಅಬಕಾರಿ ನೀತಿಯ ಪ್ರಕಾರ, ಗುರುಗ್ರಾಮದ ಪೂರ್ವ ವಲಯದಲ್ಲಿ ಒಟ್ಟು 69 ಸೆಕ್ಟರ್‌ಗಳಿದ್ದು ಈಗ ಅದು 40ಕ್ಕೆ ಇಳಿಕೆಯಾಗಿದೆ ಮಾತ್ರವಲ್ಲದೇ ಲಿಕ್ಕರ್ ವ್ಯಾಪಾರಿಗಳು ಈಗ ಒಂದು ವಲಯದಲ್ಲಿ ನಾಲ್ಕು ಮದ್ಯದ ಅಂಗಡಿಗಳನ್ನು ತೆರೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುಗ್ರಾಮ್‌ನಲ್ಲಿ ಸುಮಾರು 342 ಮದ್ಯದ ಅಂಗಡಿಗಳಿದ್ದು, ಅಬಕಾರಿ ಇಲಾಖೆಯೂ ಅದನ್ನು ನಗರದಲ್ಲಿ ಪೂರ್ವ ಮತ್ತು ಪಶ್ಚಿಮ ಎಂದು ಎರಡು ವಲಯಗಳಾಗಿ ವಿಂಗಡಿಸಲಾಗಿದೆ. ಗುರುಗ್ರಾಮ್‌ನ ಪೂರ್ವ ವಲಯದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ವೈನ್ ಶಾಪ್ ಅತಿ ಹೆಚ್ಚು ಅಂದರೆ 50.57 ಕೋಟಿ ರೂ ಬಿಡ್ ಆಗಿದೆ. ಬ್ರಿಸ್ಟಲ್ ಚೌಕ್‌ನಲ್ಲಿ ಲಿಕ್ಕರ್ ಶಾಪ್ ಎರಡನೇ ಅತಿ ಹೆಚ್ಚು ಬಿಡ್ ಆಗಿದ್ದು ಇದನ್ನು 48.28 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ.
ಆನ್‌ಲೈನ್ ಟೆಂಡರ್ ಪ್ರಕ್ರಿಯೆಯಡಿ ವೈನ್ ಶಾಪ್‌ಗಳಿಗೆ ಟೆಂಡರ್ ತೆರೆಯಲಾಗಿದೆ, ಇಲಾಖೆಯು ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿನ 162 ಅಂಗಡಿಗಳಿಂದ 1,756 ಕೋಟಿ ರೂಪಾಯಿ ಆದಾಯವನ್ನು ಸಂಗ್ರಹಿಸಿದೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿ ಗುರುಗ್ರಾಮ್ ತಿಳಿಸಿದ್ದಾರೆ.
'ಜೂ.14ರಂದು ಎರಡನೇ ಹಂತದಲ್ಲಿ ಪಶ್ಚಿಮದ ಎರಡು ಹಾಗೂ ಪೂರ್ವದ 20 ವಲಯಗಳ ಹರಾಜು ಪ್ರಕ್ರಿಯೆ ನಡೆಯಲಿದ್ದು, ಎಲ್ಲ ಮದ್ಯದಂಗಡಿಗಳ ಹರಾಜು ಬಳಿಕ ಆದಾಯದ ಪ್ರಮಾಣ ಮತ್ತಷ್ಟು ಹೆಚ್ಚಲಿದೆ' ಎಂದು ಅಬಕಾರಿ ಮತ್ತು ತೆರಿಗೆ ಇಲಾಖೆ ಉಪ ಆಯುಕ್ತ (ಪೂರ್ವ) ಅಮಿತ್ ಭಾಟಿಯಾ ಹೇಳಿದ್ದಾರೆ.
ಬುಧವಾರದಿಂದ ಜಾರಿಗೆ ಬಂದ ಹೊಸ ಅಬಕಾರಿ ನೀತಿ ಜೂನ್ 12, 2025 ರವರೆಗೆ ಜಾರಿಯಲ್ಲಿರುತ್ತದೆ. ಹರಿಯಾಣ ಸರ್ಕಾರದ ಪ್ರಕಾರ, ಟಾಪ್ 10 ಬಿಡ್‌ಗಳಲ್ಲಿ ಐದು ದೆಹಲಿ ಗಡಿಗೆ ಸಮೀಪವಿರುವ ಔಟ್‌ಲೆಟ್‌ಗಳಿಗೆ ಮಾಡಲಾಗಿದೆ.
ಅಬಕಾರಿ ನೀತಿಯು ಗುರುಗ್ರಾಮ್‌ನಲ್ಲಿ ಮದ್ಯದ ಬೆಲೆಯಲ್ಲಿ ಶೇಕಡಾ 20 ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ. ಮದುವೆಯ ಸೀಸನ್ ಆಗಿರುವುದರಿಂದ ಮಳಿಗೆಗಳ ಹರಾಜಿನ ಸಮಯವು ಅನುಕೂಲಕರವಾಗಿದೆ ಮತ್ತು ಮಳಿಗೆಗಳಲ್ಲಿ ಮದ್ಯದ ಬೇಡಿಕೆ ಹೆಚ್ಚಿರುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುಗ್ರಾಮ್ ಪೂರ್ವ ಮತ್ತು ಪಶ್ಚಿಮದ ಕೆಲವು ವಲಯಗಳ ಮುಂದಿನ ಸುತ್ತಿನ ಹರಾಜು ಜೂನ್ 14 ಕ್ಕೆ ನಿಗದಿಯಾಗಿದೆ.


Click it and Unblock the Notifications