ಬೆಂಗಳೂರು, ಮಾರ್ಚ್ 13: ಮೊದಲೆಲ್ಲಾ ಒಬ್ಬರ ಖಾತೆಯಿಂದ ಮತ್ತೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡಬೇಕು ಅಂದ್ರೆ ಬ್ಯಾಂಕ್ಗಳಿಗೆ ಹೋಗಬೇಕಿತ್ತು. ಜಮೆ ಮಾಡಿದ ಹಣ ನಿಮ್ಮ ಖಅತರಗೆ ತಲುಪಲು ಕೆಲ ತಾಸು ಸಮಯ ಬೇಕಿತ್ತು. ನಂತರ ನಡೆದಿರುವ ವಹಿವಾಟನ್ನ ಪಾಸ್ ಬುಕ್ ಎಂಟ್ರಿ ಮಾಡಿಸಿಕೊಳ್ಳಬೇಕಿತ್ತು. ಆದ್ರೆ ಈಗ ದುನಿಯಾ ಫುಲ್ ಚೇಂಜ್ ಆಗಿದೆ. ಕೇವಲ ಸೆಕೆಂಡುಗಳಲ್ಲಿ ಕೂತ ಜಾಗದಲ್ಲಿ ಬೆರಳಂಚಲ್ಲಿ ಬೇಕಾದವರ ಖಾತೆಗೆ ಹಣ ಹಾಕಬಹುದು ಅಥವಾ ನಮ್ಮ ಖಾತೆಗೆ ಹಣ ಹಾಕಿಸಿಕೊಳ್ಳಬಹುದು.ಇದು ವಹಿವಾಟನ್ನು ಎಷ್ಟು ಸುಲಭ ಮಾಡಿದ್ಯೋ , ಕೆಲವೊಮ್ಮೆ ಅಷ್ಟೇ ಯಡವಟ್ಟುಗಳು ಆಗಿಬಿಡುತ್ವೆ.
ಹೌದು, UPI (UNIFIED PAYMENT INTERFACE) ಈಗಂತೂ ಬಹಳ ಜನಪ್ರಿಯವಾಗಿದೆ. ತಳ್ಳುವ ತರಕಾರಿ ಗಾಡಿಯಿಂದ - ಫೈಸ್ಟಾರ್ ಹೋಟೆಲ್ಗಳ ವರೆಗೂ ಇದೀಗ ಈ ಯುಪಿಐ ಪೇಮೆಂಟ್ ವಿಧಾನ ಆವರಿಸಿಕೊಂಡುಬಿಟ್ಟಿದೆ. ಫೋನ್ ಪೇ - ಗೂಗಲ್ ಪೇ , BHIM ಈ ರೀತಿ ಸಾಕಷ್ಟು ಆನ್ಲೈನ್ ಪೇಮೆಂಟ್ ಆ್ಯಪ್ಗಳು ಈ ವಹಿವಾಟುಗಳನ್ನ ಬತ್ತಷ್ಟು ಸುಲಭ ಮಾಡಿಬಿಟ್ಟಿವೆ. ಯುಪಿಐ ಪೇಮೆಂಟ್ ಅನ್ನೋದಂತು ಭಾರತದಲ್ಲಿ ಒಂದು ರೀತಿ ಡಿಜಿಟಲ್ ವಹಿವಾಟಿನ ಕ್ರಾಂತಿಯನ್ನೇ ಮಾಡಿದೆ ಎಂದು ಹೇಳಬೇಹುದು. ಯಾರಿಗೆ ನಾವು ಹಣ ಕಳುಹಿಸಬೇಕೋ ಅವರ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಇದ್ರೆ ಸಾಕು, ಅರೆಕ್ಷಣದಲ್ಲಿ ಹಣ ಅವರ ಅಕೌಂಟ್ ತಲುಪಿರುತ್ತೆ.

ಮಿಸ್ ಆದ್ರೆ ಇನ್ಯಾರ ಖಾತೆಗೋ ಸೆರುತ್ತೆ ಹಣ:
ಹೀಗೆ QR CODE ಸ್ಕ್ಯಾನ್ ಮಾಡೋದು ಅಥವಾ UPI ಮೂಲಕ ಫೋನ್ ನಂಬರ್ ಗೆ ಹಣ ವರ್ಗಾವಣೆ ಮಾಡೋದ್ರಿಂದ ಎಷ್ಟು ಉಪಯೋಗಗಳಿವೆಯೋ ಕೆಲವೊಮ್ಮೆ ಅಷ್ಟೇ ಅನಾನುಕೂಲಗಳೂ ಸಂಭವಿಸುತ್ತವೆ. ಒಂದುವೇಳೆ ಯಡವಟ್ಟಾದ್ರೆ ಯಾರ ಖಾತೆಗೋ ಜಮೆಯಾಗಬೇಕಿರೋ ಹಣ ಇನ್ಯಾರ ಖಾತೆಗೋ ಜಮೆ ಆಗಿಬಿಡುತ್ತೆ. ಹೀಗಾಗಿ ಮೊಬೈಲ್ ನಂಬಳಿ ಟ್ರಾನ್ಸಾಕ್ಷನ್ ಮಾಡುವಾಗ ಒಂದಲ್ಲ ಎರಡೆರಡು ಬಾರಿ ಎಚ್ಚರ ವಹಿಸಬೇಕಾಗುತ್ತೆ. ಆಗಾಗ್ಯೂ ಕೆಲವೊಮ್ಮೆ ಇಂಥ ತಪ್ಪುಗಳು ಸಂಭವಿಸಿಬಿಡುತ್ವೆ.
ಈಗಂತೂ ಬಹಳಷ್ಟು ಜನ ಸಿಮ್ ಗಳನ್ನ ಮೇಲಿಂದ ಮೇಲೆ ಚೇಂಜ್ ಮಾಡ್ತಾನೆಯಿರ್ತಾರೆ. ಹಾಗಾದಾಗ ಹಳೆಯ ನಂಬರ್ ನ ರೀ ಸೈಕಲ್ ಮಾಡಿ ಬೇರೆಯವರಿಗೆ ನೀಡಲಾಗಿರುತ್ತೆ. ಒಂದ್ವೇಳೆ ಹೀಗಾಗಿ, ನಿಮಗೆ ನಿಮ್ಮ ಸ್ನೇಹಿತರ ನಂಬರ್ ಬದಲಾಗಿರೋದು ಗೊತ್ತಿಲ್ಲದೇ ಹಳೆಯ ನಂಬರ್ ಗೆ ಹಣ ಕಳುಹಿಸಿದ್ರೆ ಈ ಹಣ ಇನ್ಯಾರದ್ದೋ ಖಾತೆಗೆ ಹೋಗಿಬಿಡುತ್ತೆ. ಈಗಾಗಲೇ ಬಹಳಷ್ಟು ಮಂದಿಗೆ ಹೀಗೆ ಆಗಿದೆ ಕೂಡ. ಹಾಗಿದ್ರೆ ಈ ರೀತಿ ಸಣ್ಣ ತಪ್ಪಿನಿಂದ ಮತ್ತೊಬ್ಬರ ಖಾತೆಗೆ ಹೋದ ಹಣವನ್ನ ಮರಳಿ ಪಡೆದುಕೊಳ್ಳಲು ಸಾಧ್ಯವಿಲ್ವಾ ?! ಖಂಡಿತಾ ಸಾಧ್ಯವಿದೆ. ಆದ್ರೆ ಅದಕ್ಕೆ ಕೆಲವು ಕ್ರಮಗಳಿವೆ.
ನಿಮ್ಮ ಈ ಟ್ರಾನ್ಸಾಕ್ಷನ್ಗೂ ಫೋನ್ ಪೆ, ಗೂಗಲ್ ಪೇ ಗೂ ಏನು ಸಂಬಂಧವಿರುವುದಿಲ್ಲ. ಒಂದು ವೇಳಿ ತಪ್ಪು ಟ್ರಾನ್ಸಾಕ್ಷನ್ ಆದಲ್ಲಿ ನೀವು ನಿಮ್ಮ ಬ್ಯಾಂಕ್ ನ ಸಂಪರ್ಕಿಸಬೇಕು. ನಂತರ ಏತಕ್ಕಾಗಿ ಈ ರೀತಿ ರಾಂಗ್ ಟ್ರಾನ್ಸಾಕ್ಷನ್ ಆಗಿದೆ ಎಂಬುದನ್ನ ಅವರಿಗೆ ಮನದಟ್ಟು ಮಾಡಬೇಕು. ಇದಕ್ಕೆ ಬೇಕಾದ ದಾಖಲೆಗಳನ್ನ ಒದಗಿಸಬೇಕು. ಆ ನಂತರ ಬ್ಯಾಂಕ್ ಆ ಖಾತೆಯಿಂದ ಹಣವನ್ನ ರಿವರ್ಸ್ ಮಾಡಿ ಮರಳಿ ನಿಮ್ಮ ಖಾತೆಗೆ ಕ್ರೆಡಿಟ್ ಮಾಡಲು ಸಾಧ್ಯವಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಟಲ್ ವಹಿವಾಟುಗಳ ಓಂಬುಡ್ಸ್ಮನ್ ಸ್ಕೀಮ್ 2019ರ ಪ್ರಕಾರ ಇಂಥ ಟ್ರಾನ್ಸಾಕ್ಷನ್ಗಳನ್ನ ಬ್ಯಾಂಕ್ ರಿವರ್ಸ್ ಮಾಡಬಹುದು ಎಂಬ ಅವಕಾಶವಿದೆ. ಆದ್ರೆ ಒಂದ್ವೇಳೆ ಬ್ಯಾಂಕ್ನಿಂದ ಇದು ಸಾಧ್ಯವಾಗದಿದ್ರೆ ಆಗ NPCI ಮೂಲಕ ದೂರು ದಾಖಲಿಸಿ ವಿವಾದ ಪರಿಹರಿಸಿಕೊಳ್ಳಬೇಕಾಗುತ್ತದೆ.
ಇದಕ್ಕಾಗಿ NPCI ವೆಬ್ಸೈಟ್ಗೆ ಭೇಟಿ ಕೊಟ್ಟು ಯುಪಿಐ ಟ್ರಾಸ್ನಾಕ್ಷನ್ ವಿಭಾಗಕ್ಕೆ ಹೋಗಿ ಅಲ್ಲಿ ಕೇಳುವ ಎಲ್ಲಾ ಮಾನದಂಡಗಳನ್ನ ಅನುಸರಿಸಿ, ದಾಖಲೆಗಳನ್ನ ಒದಗಿಸಿ ದೂರು ದಾಖಲಿಸಿದ್ರೆ , ನಂತರ ನಿಮ್ಮ ಹಣವನ್ನ ಹಿಂಪಡೆಯಬಹುದು. ಇದು ಸಾವಿದ್ದರೂ ಕೂಡ ಸ್ವಲ್ಪ ತ್ರಾಸಬದ್ಧ ಅನ್ನಿಸಬಹುದು. ಆದ್ರೆ ಬೇಕೆ ಆಯ್ಕೆ ಇಲ್ಲ. ಹೀಗಾಗಿ ಯುಪಿಐ ವಹಿವಾಟಿನಲ್ಲಿ ಫೋನ್ ನಂಬರ್ ಬಳಸಿ ಹಣ ವರ್ಗಾಯಿಸುವಾಗ ಜಾಗರೂಕರಾಗಿರಬೇಕು. ಹಣ ವರ್ಗಾಯಿಸುವ ಮೊದಲು ನಂಬರ್ ಖಚಿತ ಪಡಿಸಿಕೊಂಡು ನಂತರ ಮುಂದುವರೆದ್ರೆ ನಿಮ್ಮ ಹಣ ಸೇಫ್.


Click it and Unblock the Notifications