ನೀವು ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಳಕೆದಾದರೇ ಹಾಗಿದ್ದರೆ ಈ ಸುದ್ದಿ ತಪ್ಪದೇ ಓದಿ. ಹೌದು,ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಶುಲ್ಕಗಳು ಮತ್ತು ರಿವಾರ್ಡ್ ಪ್ರೋಗ್ರಾಂನಲ್ಲಿ ಹೆಚ್ಚಿನ ಬದಲಾವಣೆಯನ್ನು ತರಲಿದೆ.ಈ ಹೊಸ ಬದಲಾವಣೆಗಳು ಜುಲೈ ತಿಂಗಳ ಮೊದಲ ದಿನವೇ ಜಾರಿಗೆ ಬರುತ್ತಿವೆ.
ನೀವು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಳ್ಳತ್ತಾರೆ. ಶಾಫಿಂಗ್ ನಿಂದ ಇಡೀದು
ಪ್ರತಿ ಸಣ್ಣ ಕೆಲಸಕ್ಕೂ ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಂಡು ಹಣವನ್ನು ಪಡೆದುಕೊಳ್ಳುತ್ತಾರೆ. ಕ್ರೆಡಿಟ್ ಕಾರ್ಡ್ ನಲ್ಲಿ ಹಣವನ್ನು ತಗೆದುಕೊಂಡರೆ ನಿಮ್ಮಗೆ ಹಣ ಪಾವತಿ ದಿನಾಂಕ ತಿಂಗಳಿಗೊಮ್ಮೆ ಬರುತ್ತದೆ. ಸಂಬಳವನ್ನು ಪಡೆಯುವಂತಹ ವ್ಯಕ್ತಿ ಇದರ ಬಳಕೆಯನ್ನು ಮಾಡಿಕೊಂಡು ಸಂಬಳ ಬಂದ ನಂತರ ಮರುಪಾವತಿಯನ್ನು ಮಾಡುತ್ತೇನೆ.ಆದರೆ ಇನ್ಮುಂದೆ ಕ್ರೆಡಿಟ್ ಕಾರ್ಡ್ ಶುಲ್ಕಗಳು ಅನ್ವಯವಾಗುತ್ತದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಜಾರಿಗೆ ತಂದಿರುವ ಹೊಸ ನಿಯಮಗಳ ಪ್ರಕಾರ, ಜುಲೈ 1 ರಿಂದ ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ದರೆ ನಿಮ್ಮಗೆ ಮರುಪಾವತಿಯ ಹಣದ ಜೊತೆಗೆ ಚಾರ್ಜ್ ಬೆಲ್ ಕೂಡ ಬರುತ್ತದೆ.
ಎಚ್‌ಡಿಎಫ್‌ಸಿ ಕಾರ್ಡ್‌ದಾರರು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಆನ್‌ಲೈನ್ ಗೇಮಿಂಗ್, ವ್ಯಾಲೆಟ್ ಲೋಡಿಂಗ್ ಮತ್ತು ಯುಟಿಲಿಟಿ ಬಿಲ್ ಪಾವತಿಗಳಿಗೆ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದಲ್ಲದೆ, ಅವರು ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸುವುದಿಲ್ಲ. ಆದ್ದರಿಂದ, ಈ ಶುಲ್ಕಗಳು ನಿಮ್ಮ ತಿಂಗಳ ವೆಚ್ಚಗಳ ಮೇಲೆ ಹೆಚ್ಚಿನ
ಪರಿಣಾಮವನ್ನು ಬೀರುವಂತಹ ಸಾಧ್ಯಗಳು ಇವೆ.
ನೀವು ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರಿಕೆಯಿಂದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ನಿಮ್ಮ ಹಣ ಹೆಚ್ಚಾಗಿ ಖರ್ಚು ಆಗುತ್ತದೆ.
ಆನ್‌ಲೈನ್ ಸ್ಕೀಲ್ ಆಧಾರಿತ ಗೇಮಿಂಗ್ ಶುಲ್ಕ
HDFC ಕ್ರೆಡಿಟ್ ಕಾರ್ಡ್‌ನಲ್ಲಿನ ಹೊಸ ಬದಲಾವಣೆಗಳೆಂದರೆ, ನೀವು ಆನ್‌ಲೈನ್ ಗೇಮಿಂಗ್‌ಗಾಗಿ ಕಾರ್ಡ್ ಬಳಸಿದರೆ, ಶೇಕಡಾ 1 ರಷ್ಟು ಶುಲ್ಕವಿರುತ್ತದೆ. ನೀವು ಡ್ರೀಮ್ 11, ರಮ್ಮಿ ಕಲ್ಚರ್, ಜಂಗಲ್ ಗೇಮ್ಸ್, MPL, ಇತ್ಯಾದಿಗಳಿಗೆ ಕಾರ್ಡ್ ಬಳಸಿದರೆ, ಶುಲ್ಕವಿರುತ್ತದೆ.
ನೀವು ಪ್ರತಿ ತಿಂಗಳು ಇವುಗಳ ಮೇಲೆ, ನೀವು 10 ಸಾವಿರಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಶೇಕಡಾ 1 ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಇದು 4,999 ರೂ.ಗಳ ವರೆಗೂ ಇರಬಹುದು. ನಿಮ್ಮಗೆ ಈ ವಹಿವಾಟುಗಳಿಗೆ ರಿವಾರ್ಡ್ ಪಾಯಿಂಟ್‌ಗಳಂತಹ ಯಾವುದೇ ಆಫರ್ ಕೂಡ ಸಿಗವುದಿಲ್ಲ.
ವಾಲೆಟ್ ಲೋಡಿಂಗ್ ವಾಹಿವಾಟು
ಪೇಟಿಎಂ, ಮೊಬಿಕ್ವಿಕ್, ಫ್ರೀಚಾರ್ಜ್, ಓಲಾ ಮನಿ ಮುಂತಾದ ಡಿಜಿಟಲ್ ವ್ಯಾಲೆಟ್‌ಗಳಿಗೆ 10,000 ರೂ.ಗಳಿಗಿಂತ ಹೆಚ್ಚು ಹಣವನ್ನು ಲೋಡ್ ಮಾಡಲು ನಿಮ್ಮ ಕಾರ್ಡ್ ಅನ್ನು ಬಳಸಿದರೆ, ಶೇ.1ರಷ್ಟು ಶುಲ್ಕವಿರುತ್ತದೆ. ಇದು 4,999 ರೂ,ಗಳವರೆಗೆ ಇರಬಹುದು.
ಯುಟಿಲಿಟಿ ಬಿಲ್‌ಗಳು
ನೀವು ಈ ವಿಭಾಗದ ಅಡಿಯಲ್ಲಿ, ಎಚ್‌ಡಿಎಫ್‌ಸಿ 50,000 ಕ್ಕಿಂತ ಹೆಚ್ಚಿನ ಗ್ರಾಹಕ ಕಾರ್ಡ್‌ಗಳಿಗೆ ಮತ್ತು 75,000 ರೂ.ಗಳ ವರೆಗಿನ ಹೆಚ್ಚಿನ ವ್ಯಾಪಾರ ಕಾರ್ಡ್‌ಗಳಿಗೆ ಶೇ. 1 ಶುಲ್ಕ ವಿಧಿಸುತ್ತದೆ. ಈ ಶುಲ್ಕ 4,999 ವರೆಗೆ ಇರುವ ಸಾಧ್ಯತೆಯಿದೆ. ವಿಮಾ ಪಾವತಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಪಷ್ಟಪಡಿಸಿದೆ.
ವಹಿವಾಟುಗಳು
ನೀವು ಡಿಜಿಟಲ್ ವ್ಯಾಲೆಟ್ ಬಳಸಿ ಬಾಡಿಗೆ, ಇಂಧನ ಮತ್ತು ಶಿಕ್ಷಣ ಪಾವತಿಗಳನ್ನು ಮಾಡಿದರೆ, ಗರಿಷ್ಠ ಶುಲ್ಕ 4,999 ಆಗಿರುತ್ತದೆಇಂಧನಕ್ಕೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ಈ ಶುಲ್ಕವು 15,000 ರೂ ಅಥವಾ 30,000 ರೂ. ಮೀರಿದರೆ ಮಾತ್ರ ಅನ್ವಯಿಸುತ್ತದೆ. ಈಗ, ಶಾಲೆಗೆ ಸಂಬಂಧಿಸಿದ ಯಾವುದೇ ವಹಿವಾಟುಗಳನ್ನು ಮಾಡಿದರೆ, ಯಾವುದೇ ಶುಲ್ಕವಿರುವುದಿಲ್ಲ. ಶಾಲೆಗೆ ಸಂಬಂಧಿಸಿದ ವಹಿವಾಟುಗಳನ್ನು ಮಾತ್ರ ಮಾಡಬೇಕು. ಡಿಜಿಟಲ್ ವ್ಯಾಲೆಟ್ ಮೂಲಕ ಮಾಡಿದರೆ ಶುಲ್ಕಗಳನ್ನು ಕಟ್ಟಬೇಕಾಗುತ್ತದೆ.
ವಿಮಾ ವಹಿವಾಟುಗಳು
ಈ ವಹಿವಾಟುಗಳು ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸುತ್ತವೆ ಆದರೆ ನೀವು ಬಳಸುತ್ತಿರುವ ಕಾರ್ಡ್ ಪ್ರಕಾರವನ್ನು ಅವಲಂಬಿಸಿ ಇದಕ್ಕೂ ಕೂಡ ಮಿತಿ ಇರುತ್ತದೆ.
ನಿಮ್ಮ ಹಣಕಾಸು ಪರಿಸ್ಥಿತಿಗಳು ಚನ್ನಾಗಿ ಇರಬೇಕು ಎಂದರೆ ನಿಮ್ಮ ಕಾರ್ಡ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕೆಂದು ಹಣಕಾಸು ತಜ್ಞರು ಸಲಹೆಗಳನ್ನು ನೀಡಿದ್ದಾರೆ. ನೀವೆನಾದರೂ ತುರ್ತು ಪರಿಸ್ಥಿತಿಯಲ್ಲಿ ಕಾರ್ಡ್ ಬಳಸಿದರೆ ನಿಗದಿತ ದಿನಾಂಕದೊಳಗೆ ಪಾವತಿಸಿದ್ದರೆ ಹೆಚ್ಚಿನ ಶುಲ್ಕದಿಂದ ಬಜಾವ್ ಆಗಬಹುದು.


Click it and Unblock the Notifications