ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ಹಾಗೂ ಎಚ್‌ಡಿಎಫ್‌ಸಿ ವಿಲೀನ ಪ್ರಕ್ರಿಯೆಯು ಅಂತ್ಯವಾಗುತ್ತಿದೆ. ಜುಲೈ 1, 2023ರಿಂದ ಜಾರಿಗೆ ಬರುವಂತೆ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನವಾಗಲಿದೆ. ಈ ಬಗ್ಗೆ ಎಚ್‌ಡಿಎಫ್‌ಸಿ ಚೇರ್‌ಮನ್ ದೀಪಕ್ ಪರೇಖ್ ಮಂಗಳವಾರ ಮಾಹಿತಿ ನೀಡಿದ್ದಾರೆ.
ಎಚ್‌ಡಿಎಫ್‌ಸಿ ಮತ್ತು ಖಾಸಗಿ ಬ್ಯಾಂಕ್‌ನ ಮಂಡಳಿಗಳು ವಿಲೀನವನ್ನು ತೆರವುಗೊಳಿಸಲು ಮತ್ತು ಅನುಮೋದಿಸಲು ಜೂನ್ 30ರಂದು ಸಭೆ ಸೇರಲಿದೆ ಎಂದು ದೀಪಕ್ ಪರೇಖ್ ಸುದ್ದಿಗಾರರಿಗೆ ತಿಳಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಎಚ್‌ಡಿಎಫ್‌ಸಿ ವಿಲೀನವು ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ಪರೇಖ್ ಹೇಳಿದ್ದಾರೆ. ಎಚ್‌ಡಿಎಫ್‌ಸಿ ಉಪಾಧ್ಯಕ್ಷ ಮತ್ತು ಸಿಇಒ ಕೇಕಿ ಮಿಸ್ತ್ರಿ, ನಿಗಮದ ಷೇರುಗಳನ್ನು ಡಿಲಿಸ್ಟ್ ಮಾಡುವ ಪ್ರಕ್ರಿಯೆ ಜುಲೈ 13 ರಿಂದ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

40 ಬಿಲಿಯನ್ ಡಾಲರ್ ಮೌಲ್ಯದ ವಿಲೀನ ಪ್ರಕ್ರಿಯೆ ಇದಾಗಿದೆ. ಈ ಪ್ರಕ್ರಿಯೆ ಏಪ್ರಿಲ್ 4, 2022ರಂದು ಆರಂಭವಾಗಿದೆ. ಆ ಸಂದರ್ಭದಲ್ಲಿ ಉಭಯ ಸಂಸ್ಥೆಗಳು ಈ ಪ್ರಕ್ರಿಯೆ ಪೂರ್ಣವಾಗಲು ಸುಮಾರು 12ರಿಂದ 18 ತಿಂಗಳುಗಳು ಬೇಕಾಗುತ್ತದೆ ಎಂದು ಹೇಳಿಕೊಂಡಿತ್ತು. ಪ್ರಕ್ರಿಯೆ ಆರಂಭವಾಗಿ ಸುಮಾರು 7-8 ತಿಂಗಳುಗಳು ಆಗಿದೆ. ಆದರೆ ಸಂಸ್ಥೆಗಳು ಪ್ರಕ್ರಿಯೆ ಪೂರ್ಣವಾಗಲು 8-10 ತಿಂಗಳು ಬೇಕಾಗುತ್ತದೆ ಎಂದು ನವೆಂಬರ್ ಅಂತ್ಯದಲ್ಲಿ ಹೇಳಿಕೊಂಡಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ಹಾಗೂ ಎಚ್‌ಡಿಎಫ್‌ಸಿ ವಿಲೀನ ಪ್ರಕ್ರಿಯೆ ಪೂರ್ಣವಾಗಲು ಇನ್ನು 4-5 ವಾರಗಳ ಅವಧಿ ಮಾತ್ರ ಬಾಕಿ ಉಳಿದಿದೆ ಎಂದು ಈ ಹಿಂದೆ ಮೇ ತಿಂಗಳಿನಲ್ಲಿ ವರದಿಯಾಗಿದೆ. ಅದಾದ ಬಳಿಕ ಈಗ ಜುಲೈ 1, 2023ರಿಂದ ಜಾರಿಗೆ ಬರುವಂತೆ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನವಾಗಲಿದೆ ಎಂದು ಎಚ್‌ಡಿಎಫ್‌ಸಿ ಚೇರ್‌ಮನ್ ದೀಪಕ್ ಪರೇಖ್ ತಿಳಿಸಿದ್ದಾರೆ.
ಎಚ್‌ಡಿಎಫ್‌ಸಿ ಬ್ಯಾಂಕ್ - ಎಚ್‌ಡಿಎಫ್‌ಸಿ ವಿಲೀನ
ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನದಿಂದಾಗಿ ಅತೀ ದೊಡ್ಡ ಸ್ಟಾಕ್ ಆಗುವ ಸಾಧ್ಯತೆ ಇದೆ. ಈ ವಿಲೀನದ ಮೂಲಕ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಕೃಷಿ ಸೇರಿದಂತೆ ಆದ್ಯತೆಯ ವಲಯಕ್ಕೆ ಹೆಚ್ಚಿನ ಪ್ರಮಾಣದ ಸಾಲವನ್ನು ಸುಗಮವಾಗಿ ಹಾಗೂ ಶೀಘ್ರವಾಗಿ ನೀಡಲು ಸಾಧ್ಯವಾಗುತ್ತದೆ ಎಂದು ಎಚ್‌ಡಿಎಫ್‌ಸಿ ಹೇಳಿದೆ. ಎಚ್‌ಡಿಎಫ್‌ಸಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಅನ್ನು ವಿಲೀನ ಮಾಡುವುದರಿಂದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಸುರಕ್ಷಿತ ಸಾಲಗಳ ಪ್ರಮಾಣ ಕಡಿಮೆ ಆಗಲಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಎಚ್‌ಡಿಎಫ್‌ಸಿಯ ವಿಲೀನಕ್ಕೆ ಅನುಮೋದನೆ ಪಡೆಯಲು ಷೇರುದಾರರ ಸಭೆಯನ್ನು ನಡೆಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಅಕ್ಟೋಬರ್‌ನಲ್ಲಿ ಅನುಮೋದನೆ ನೀಡಿದೆ. ಈ ವಿಲೀನವನ್ನು ಒಪ್ಪುವ ಮತ್ತು ಅನುಮೋದಿಸುವ ಉದ್ದೇಶಕ್ಕಾಗಿ ಷೇರುದಾರರ ಸಭೆಯನ್ನು ನವೆಂಬರ್ 25, 2022 ರಂದು ಕರೆಯಲಾಗಿದೆ. ಈ ಸಭೆಯಲ್ಲೂ ಕೂಡಾ ವಿಲೀನಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಬ್ಸಿಡಿದಾರರು ವಿಲೀನವಾದ ಸಂಸ್ಥೆಯಲ್ಲಿ ಸಬ್ಸಿಡಿದಾರರಾಗಿಯೇ ಉಳಿಯಲಿದ್ದಾರೆ ಎಂದು ಎಚ್‌ಡಿಎಫ್‌ಸಿ ಚೇರ್‌ಮನ್ ಅತಾನು ಚಕ್ರವರ್ತಿ ತಿಳಿಸಿದ್ದಾರೆ. ಬ್ಯಾಂಕ್‌ನ ಸೇರದ ಕೆಲವು ಘಟಕಗಳ ಹೂಡಿಕೆ ಸ್ಥಗಿತ ಮಾಡಲಾಗುತ್ತದೆ. ಆದರೆ ಸಬ್ಸಿಡಿದಾರರ ವಿಲೀನಕ್ಕೆ ಆರ್‌ಬಿಐ ಹಾಗೂ ಐಆರ್‌ಡಿಎಐನ ಅನುಮೋದನೆ ಬೇಕಾಗುತ್ತದೆ ಎಂದು ಕೂಡಾ ಉಲ್ಲೇಖಿಸಿದ್ದಾರೆ.
ಈಗಾಗಲೇ ಅನುಮೋದನೆ ನೀಡಿರುವ ಹಣಕಾಸು ಸಂಸ್ಥೆಗಳು
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ), ಪೆನ್ಶನ್ ಫಂಡ್ ರೆಗ್ಯೂಲಟರಿ ಆಂಡ್ ಡೆವಲಪ್‌ಮೆಂಡ್ ಅಥಾರಿಟಿ (ಪಿಎಫ್‌ಆರ್‌ಡಿಎ) , ಸ್ಟಾಕ್ ಎಕ್ಸ್‌ಚೇಂಜ್ ಮತ್ತು ಸ್ಪರ್ಧಾತ್ಪಕ ಆಯೋಗ, ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ), ಭಾರತೀಯ ಸ್ಟಾಕ್ ಎಕ್ಸ್‌ಚೇಂಜ್‌ಗಳಾದ ಬಿಎಸ್‌ಇ (ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್), ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಈಗಾಗಲೇ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನಕ್ಕೆ ಅನುಮೋದನೆಯನ್ನು ನೀಡಿದೆ.


Click it and Unblock the Notifications