ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ಹಾಗೂ ಎಚ್‌ಡಿಎಫ್‌ಸಿ ವಿಲೀನ ಪ್ರಕ್ರಿಯೆಯು ಅಂತ್ಯವಾಗುತ್ತಿದೆ. ಜುಲೈ 1, 2023ರಿಂದ ಜಾರಿಗೆ ಬರುವಂತೆ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನವಾಗಲಿದೆ. ಈ ವಿಲೀನವು ವಿಶ್ವದಲ್ಲೇ ಅತೀ ಮೌಲ್ಯಯುತ, ಅತೀ ದೊಡ್ಡದಾದ ಬ್ಯಾಂಕುಗಳಲ್ಲಿ ಒಂದಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಅನ್ನು ಮಾಡಲಿದೆ. ವರದಿಯ ಪ್ರಕಾರ ಇದು ವಿಶ್ವದಲ್ಲಿಯೇ ನಾಲ್ಕನೇ ಅತೀ ದೊಡ್ಡ ಬ್ಯಾಂಕ್ ಆಗಲಿದೆ.
ಬ್ಲ್ಯೂಬರ್ಗ್ ವರದಿಯ ಪ್ರಕಾರ ಈಕ್ವಿಟಿ ಮಾರುಕಟ್ಟೆ ಬಂಡವಾಳದ ಆಧಾರದಲ್ಲಿ ನಾವು ನೋಡಿದಾಗ ವಿಲೀನದ ಬಳಿಕ ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಫ್‌ಸಿ ವಿಶ್ವದ ನಾಲ್ಕನೇ ಅತೀ ದೊಡ್ಡ ಬ್ಯಾಂಕ್ ಆಗಲಿದೆ. ವಿಶ್ವದಲ್ಲೇ ಅತೀ ದೊಡ್ಡ ಬ್ಯಾಂಕ್ ಜೆಪಿಮಾರ್ಗನ್ ಚೇಸ್ ಆಗಿದೆ. ಅದಾದ ಬಳಿಕ ಎರಡನೇ ಸ್ಥಾನದಲ್ಲಿ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ ಇದೆ. ಮೂರನೇ ಸ್ಥಾನದಲ್ಲಿ ಬ್ಯಾಂಕ್ ಆಫ್ ಅಮೇರಿಕಾ ಇದೆ. ಈಗ ವಿಲೀನದ ಬಳಿಕ 172 ಬಿಲಿಯನ್ ಡಾಲರ್ ಮೌಲ್ಯದೊಂದಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ನಾಲ್ಕನೇ ಅತೀ ದೊಡ್ಡ ಬ್ಯಾಂಕ್ ಆಗಲಿದೆ.

ಅತಿ ದೊಡ್ಡ ಬ್ಯಾಂಕ್ ವಿಲೀನ ಪ್ರಕ್ರಿಯೆ
ಜುಲೈ 1ರಿಂದ ಜಾರಿಗೆ ಬರುವಂತೆ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ವಿಲೀನವಾಗಲಿದೆ. ಜೂನ್ 30ರಂದು ಈ ಎರಡು ಹಣಕಾಸು ಸಂಸ್ಥೆಗಳ ಮಂಡಳಿ ಸಭೆ ನಡೆಯಲಿದ್ದು, ಎಲ್ಲ ಅನುಮೋದನೆಗಳನ್ನು ನಡೆಸಿ ಈ ಪ್ರಕ್ರಿಯೆಯನ್ನು ಕೊನೆಗೊಳಸಲಿದೆ. ಭಾರತದ ಕಾರ್ಪೋರೆಟ್ ಇತಿಹಾಸದಲ್ಲೇ ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನವು ಅತೀ ದೊಡ್ಡ ವಹಿವಾಟಿನದ್ದಾಗಿದೆ. 40 ಬಿಲಿಯನ್ ಡಾಲರ್ ಮೌಲ್ಯದ ವಿಲೀನ ಪ್ರಕ್ರಿಯೆ ಇದಾಗಿದೆ. ಈ ಪ್ರಕ್ರಿಯೆ ಏಪ್ರಿಲ್ 4, 2022ರಂದು ಆರಂಭವಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನದ ಬಳಿಕ ಸುಮಾರು 18 ಲಕ್ಷ ಕೋಟಿ ರೂಪಾಯಿಗಳ ಒಟ್ಟು ಆಸ್ತಿಯನ್ನು ಹೊಂದಿರುತ್ತದೆ. ಹೊಸ ಘಟಕವು ಸುಮಾರು 120 ಮಿಲಿಯನ್ ಗ್ರಾಹಕರನ್ನು ಹೊಂದಿರುತ್ತದೆ. ಆಶ್ಚರ್ಯಕರವಾಗಿ ಇದು ಇದು ಜರ್ಮನಿಯ ಜನಸಂಖ್ಯೆಗಿಂತ ಹೆಚ್ಚಾಗಿದೆ. ಶಾಖೆಯ ಸಂಪರ್ಕವು 8,300 ಕ್ಕೂ ಹೆಚ್ಚಾಗಲಿದೆ. ಒಟ್ಟು 1,77,000 ಉದ್ಯೋಗಿಗಳು ಇರಲಿದ್ದಾರೆ.
ಈ ಒಪ್ಪಂದವು ಜಾರಿಗೆ ಬಂದ ಬಳಿಕ ಎಚ್‌ಡಿಎಫ್‌ಸಿ ಬ್ಯಾಂಕ್ ಸಂಪೂರ್ಣವಾಗಿ ಸಾರ್ವಜನಿಕ ಷೇರುದಾರರು ಹಾಗೂ ಪ್ರಸ್ತುತ ಅಸ್ತಿತ್ವದಲ್ಲಿರುವ ಎಚ್‌ಡಿಫ್‌ಸಿ ಷೇರುದಾರರು ಶೇಕಡ 40ರಷ್ಟು ಮಾಲೀಕತ್ವವನ್ನು ಹೊಂದಲಿದ್ದಾರೆ. ಎಲ್ಲ ಎಚ್‌ಡಿಎಫ್‌ಸಿ ಷೇರುದಾರರು ಹೊಂದಿರುವ ಪ್ರತಿ 25 ಷೇರುಗಳಿಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ 42 ಷೇರುಗಳನ್ನು ಪಡೆಯುತ್ತಾರೆ.
ಎಚ್‌ಡಿಎಫ್‌ಸಿ ಮತ್ತು ಖಾಸಗಿ ಬ್ಯಾಂಕ್‌ನ ಮಂಡಳಿಗಳು ವಿಲೀನವನ್ನು ತೆರವುಗೊಳಿಸಲು ಮತ್ತು ಅನುಮೋದಿಸಲು ಜೂನ್ 30ರಂದು ಸಭೆ ಸೇರಲಿದೆ ಎಂದು ದೀಪಕ್ ಪರೇಖ್ ಸುದ್ದಿಗಾರರಿಗೆ ತಿಳಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಎಚ್‌ಡಿಎಫ್‌ಸಿ ವಿಲೀನವು ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ಪರೇಖ್ ಹೇಳಿದ್ದಾರೆ. ಎಚ್‌ಡಿಎಫ್‌ಸಿ ಉಪಾಧ್ಯಕ್ಷ ಮತ್ತು ಸಿಇಒ ಕೇಕಿ ಮಿಸ್ತ್ರಿ, ನಿಗಮದ ಷೇರುಗಳನ್ನು ಡಿಲಿಸ್ಟ್ ಮಾಡುವ ಪ್ರಕ್ರಿಯೆ ಜುಲೈ 13 ರಿಂದ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನದಿಂದಾಗಿ ಅತೀ ದೊಡ್ಡ ಸ್ಟಾಕ್ ಆಗುವ ಸಾಧ್ಯತೆ ಇದೆ. ಈ ವಿಲೀನದ ಮೂಲಕ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಕೃಷಿ ಸೇರಿದಂತೆ ಆದ್ಯತೆಯ ವಲಯಕ್ಕೆ ಹೆಚ್ಚಿನ ಪ್ರಮಾಣದ ಸಾಲವನ್ನು ಸುಗಮವಾಗಿ ಹಾಗೂ ಶೀಘ್ರವಾಗಿ ನೀಡಲು ಸಾಧ್ಯವಾಗುತ್ತದೆ ಎಂದು ಎಚ್‌ಡಿಎಫ್‌ಸಿ ಹೇಳಿದೆ. ಎಚ್‌ಡಿಎಫ್‌ಸಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಅನ್ನು ವಿಲೀನ ಮಾಡುವುದರಿಂದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಸುರಕ್ಷಿತ ಸಾಲಗಳ ಪ್ರಮಾಣ ಕಡಿಮೆ ಆಗಲಿದೆ.


Click it and Unblock the Notifications