ಹಲವಾರು ತಿಂಗಳುಗಳಿಂದ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನ ಪ್ರಕ್ರಿಯೆಯು ನಡೆಯುತ್ತಿದೆ. ಈ ವಿಲೀನವು ದೇಶದ ವಹಿವಾಟಿನ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯುತ್ತಿದೆ. ಆದರೆ ಈ ಪ್ರಕ್ರಿಯೆ ಸಂಪೂರ್ಣವಾಗಲು ಇನ್ನೂ ಕೂಡಾ ಸುಮಾರು 8ರಿಂದ 10 ತಿಂಗಳುಗಳ ಕಾಲ ಬೇಕಾಗುತ್ತದೆ.
ಈ ಬಗ್ಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಮಾಹಿತಿ ನೀಡಿದೆ. ಎಚ್‌ಡಿಎಫ್‌ಸಿಯ ಚೇರ್‌ಮನ್ ದೀಪಕ್ ಪರೇಖ್ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನದ ಬ್ಗಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಪ್ರಕಾರ ಮುಂದಿನ ಸೆಪ್ಟೆಂಬರ್ ವೇಳೆಗೆ ಈ ಪ್ರಕ್ರಿಯೆ ಪೂರ್ಣವಾಗಲಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಎಚ್‌ಡಿಎಫ್‌ಸಿಯ ವಿಲೀನಕ್ಕೆ ಅನುಮೋದನೆ ಪಡೆಯಲು ಷೇರುದಾರರ ಸಭೆಯನ್ನು ನಡೆಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ತನ್ನ ಒಪ್ಪಿಗೆ ನೀಡಿತ್ತು. ಇದರ ಪ್ರಕಾರವಾಗಿ ಷೇರುದಾರರ ಸಭೆಯನ್ನು ನವೆಂಬರ್ 25, 2022 ರಂದು ನಡೆಸಲಾಗಿತ್ತು. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ವಿಲೀನದ ಬಗ್ಗೆ ಮಾಹಿತಿ
ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ ವಿಲೀನದ ವಿಚಾರವಾಗಿ ಈ ಶುಕ್ರವಾರ ಷೇರುದಾರರ ಸಭೆ ನಡೆದಿದೆ. ಕಾರ್ಪೊರೇಟ್ ಇತಿಹಾಸದಲ್ಲೇ ಇದು ಅತೀ ದೊಡ್ಡ ವಿಲೀನವಾಗಿದೆ. 40 ಬಿಲಿಯನ್ ಡಾಲರ್ ಮೌಲ್ಯದ ವಿಲೀನ ಪ್ರಕ್ರಿಯೆ ಇದಾಗಿದೆ. ಈ ಪ್ರಕ್ರಿಯೆ ಏಪ್ರಿಲ್ 4, 2022ರಂದು ಆರಂಭವಾಗಿದೆ. ಆ ಸಂದರ್ಭದಲ್ಲಿ ಉಭಯ ಸಂಸ್ಥೆಗಳು ಈ ಪ್ರಕ್ರಿಯೆ ಪೂರ್ಣವಾಗಲು ಸುಮಾರು 12ರಿಂದ 18 ತಿಂಗಳುಗಳು ಬೇಕಾಗುತ್ತದೆ ಎಂದು ಹೇಳಿಕೊಂಡಿತ್ತು. ಪ್ರಕ್ರಿಯೆ ಆರಂಭವಾಗಿ ಸುಮಾರು 7-8 ತಿಂಗಳುಗಳು ಆಗಿದೆ. ಆದರೆ ಸಂಸ್ಥೆಗಳು ಈಗ ಪ್ರಕ್ರಿಯೆ ಪೂರ್ಣವಾಗಲು 8-10 ತಿಂಗಳು ಬೇಕಾಗುತ್ತದೆ ಎಂದು ಹೇಳಿಕೊಂಡಿದೆ.
ಸಭೆಯಲ್ಲಿ ನಡೆದಿದ್ದು ಏನು?
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಇಒ, ಮಾನೆಜಿಂಗ್ ಡೈರೆಕ್ಟರ್ ಆಗಿರುವ ಸಸಿಧರನ್ ಜಗದೀಶನ್ ಪ್ರಕ್ರಿಯೆ ನಿರ್ದಿಷ್ಟವಾಗಿ ಯಾವಾಗ ಕೊನೆಯಾಗಲಿದೆ ಎಂದು ಹೇಳುವುದು ಉತ್ತಮವೆಂದು ಅಭಿಪ್ರಾಯಿಸಿದ್ದಾರೆ. ಸುಮಾರು 8-10 ತಿಂಗಳು ಬೇಕಾಗುತ್ತದೆ. ಈ ವಿಲೀನವು ಸಂಸ್ಥೆಗೆ ಸಹಾಯವಾಗಲಿದೆ. ಅದಕ್ಕಾಗಿ ಎಚ್‌ಡಿಎಫ್‌ಸಿ ಧನ್ಯವಾದ. ಸುಮಾರು 3,500 ಎಚ್‌ಡಿಎಫ್‌ಸಿ ಉದ್ಯೋಗಿಗಳು ನಮ್ಮ ಬ್ಯಾಂಕ್‌ನಲ್ಲಿರುವ 1.61 ಸಿಬ್ಬಂದಿಗಳೊಂದಿಗೆ ಸೇರ್ಪಡೆಯಾಗಲಿದೆ. ಆದರೆ 508ರಷ್ಟು ಎಚ್‌ಡಿಎಫ್‌ಸಿ ಬ್ರಾಂಚ್‌ಗಳು ವಿಲೀನವಾಗಲಿದೆ ಎಂದು ತಿಳಿಸಿದ್ದಾರೆ. ಶನಿವಾರ ರಾತ್ರಿಯ ಒಳಗೆ ಈ ಸಭೆಯಲ್ಲಿ ನಡೆದ ಮತದಾನ ಪ್ರಕ್ರಿಯೆ ಪೂರ್ಣವಾಗಲಿದೆ ಎನ್‌ಸಿಎಲ್‌ಟಿ ಸಭೆಯ ಮುಖ್ಯಸ್ಥರಾದ ಗೌತಮ್ ದೋಶಿ ಹೇಳಿದ್ದಾರೆ.
ಸಂಸ್ಥೆಯು ಸಿಇಒ ಹೇಳುವುದೇನು?
ಎಚ್‌ಡಿಎಫ್‌ಸಿ ಚೇರ್‌ಮನ್ ದೀಪಕ್ ಪರೇಖ್ ಷೇರುದಾರರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಇನ್ನು ಆರ್‌ಬಿಐನೊಂದಿಗೆ ವಿಲೀನದ ಪ್ರಕ್ರಿಯೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಚೇರ್‌ಮನ್ ಆಗಿ ಚಕ್ರವರ್ತಿ ಉಳಿಯಲಿದ್ದಾರೆ. ವಯಸ್ಸಿನ ನಿರ್ಬಂಧವಿದೆ ಎಂಬ ಕಾರಣಕ್ಕೆ ಅವರೇನು ಬೋರ್ಡ್ ಆಫ್ ಡೈರೆಕ್ಟರ್ಸ್‌ನಲ್ಲಿ ಇಲ್ಲದಿರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಏನು ಉಲ್ಲೇಖಿಸಿದೆ?
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಬ್ಸಿಡಿದಾರರು ವಿಲೀನವಾದ ಸಂಸ್ಥೆಯಲ್ಲಿ ಸಬ್ಸಿಡಿದಾರರಾಗಿಯೇ ಉಳಿಯಲಿದ್ದಾರೆ ಎಂದು ಎಚ್‌ಡಿಎಫ್‌ಸಿ ಚೇರ್‌ಮನ್ ಅತಾನು ಚಕ್ರವರ್ತಿ ತಿಳಿಸಿದ್ದಾರೆ. ಬ್ಯಾಂಕ್‌ನ ಸೇರದ ಕೆಲವು ಘಟಕಗಳ ಹೂಡಿಕೆ ಸ್ಥಗಿತ ಮಾಡಲಾಗುತ್ತದೆ. ಆದರೆ ಸಬ್ಸಿಡಿದಾರರ ವಿಲೀನಕ್ಕೆ ಆರ್‌ಬಿಐ ಹಾಗೂ ಐಆರ್‌ಡಿಎಐನ ಅನುಮೋದನೆ ಬೇಕಾಗುತ್ತದೆ ಎಂದು ಕೂಡಾ ಉಲ್ಲೇಖಿಸಿದ್ದಾರೆ.


Click it and Unblock the Notifications