ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಶುಕ್ರವಾರ (ಮಾರ್ಚ್ 17) ಗ್ರೀನ್ ಸಿಗ್ನಲ್ ನೀಡಿದೆ. ಈ ಹಿಂದೆ ಹಲವಾರು ಸಂಸ್ಥೆಗಳು ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನಕ್ಕೆ ಅಸ್ತು ಎಂದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ), ಇನ್ಶೂರೆನ್ಸ್ ರೆಗ್ಯೂಲಟರಿ ಆಂಡ್ ಡೆವಲಪ್‌ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್‌ಡಿಎಐ) ಎರಡು ಹಣಕಾಸು ಸಂಸ್ಥೆಗಳ ವಿಲೀನಕ್ಕೆ ಅನುಮೋದನೆ ನೀಡಿದೆ.
ಇನ್ನು ಪೆನ್ಶನ್ ಫಂಡ್ ರೆಗ್ಯೂಲಟರಿ ಆಂಡ್ ಡೆವಲಪ್‌ಮೆಂಡ್ ಅಥಾರಿಟಿ (ಪಿಎಫ್‌ಆರ್‌ಡಿಎ) ಕೂಡಾ ಗ್ರೀನ್ ಸಿಗ್ನಲ್ ನೀಡಿದೆ. ಎನ್‌ಸಿಎಲ್‌ಟಿ ಅನುಮೋದನೆಯ ಬಳಿಕ ನಡೆದ ಷೇರುದಾರರ ಸಭೆಯಲ್ಲಿಯೂ ಕೂಡಾ ಎರಡು ಸಂಸ್ಥೆಗಳ ವಿಲೀನಕ್ಕೆ ಅನುಮೋದನೆ ನೀಡಲಾಗಿದೆ. ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನಕ್ಕೆ ಸ್ಟಾಕ್ ಎಕ್ಸ್‌ಚೇಂಜ್ ಮತ್ತು ಸ್ಪರ್ಧಾತ್ಪಕ ಆಯೋಗವು ಕೂಡಾ ಅಸ್ತು ಎಂದಿದೆ. ಈ ಡೀಲ್ ಬಳಿಕ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಶೇಕಡ 100ರಷ್ಟು ಸಾರ್ವಜನಿಕ ಷೇರುದಾರಿಕೆ ಹೆಚ್ಚಾಗಲಿದೆ. ಎಚ್‌ಡಿಎಫ್‌ಸಿಯಲ್ಲಿ ಪ್ರಸ್ತುತ ಷೇರುದಾರರು ಶೇಕಡ 41ರಷ್ಟು ಷೇರನ್ನು ಹೊಂದಿರಲಿದೆ.

ಎಲ್ಲ ಎಚ್‌ಡಿಎಫ್‌ಸಿ ಷೇರುದಾರರು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಪ್ರತಿ 25 ಷೇರುಗಳಿಗೆ ಶೇಕಡ 42ರಷ್ಟು ಷೇರನ್ನು ಹೊಂದಿರಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ವಿಲೀನದ ಬಳಿಕ ಸಂಸ್ಥೆಯು ದೇಶದ ಮೂರನೇ ಅತೀ ದೊಡ್ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್‌ನ ಮೌಲ್ಯಕ್ಕಿಂತ ಮೂರು ಪಟ್ಟು ಹೆಚ್ಚಳವಾಗಲಿದೆ.
ವಿಲೀನದ ಬಗ್ಗೆ ಅಧಿಕ ಮಾಹಿತಿ
ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನದಿಂದಾಗಿ ಅತೀ ದೊಡ್ಡ ಸ್ಟಾಕ್ ಆಗುವ ಸಾಧ್ಯತೆ ಇದೆ. ಈ ವಿಲೀನದ ಮೂಲಕ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಕೃಷಿ ಸೇರಿದಂತೆ ಆದ್ಯತೆಯ ವಲಯಕ್ಕೆ ಹೆಚ್ಚಿನ ಪ್ರಮಾಣದ ಸಾಲವನ್ನು ಸುಗಮವಾಗಿ ಹಾಗೂ ಶೀಘ್ರವಾಗಿ ನೀಡಲು ಸಾಧ್ಯವಾಗುತ್ತದೆ ಎಂದು ಎಚ್‌ಡಿಎಫ್‌ಸಿ ಹೇಳಿದೆ. ಎಚ್‌ಡಿಎಫ್‌ಸಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಅನ್ನು ವಿಲೀನ ಮಾಡುವುದರಿಂದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಸುರಕ್ಷಿತ ಸಾಲಗಳ ಪ್ರಮಾಣ ಕಡಿಮೆ ಆಗಲಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಎಚ್‌ಡಿಎಫ್‌ಸಿಯ ವಿಲೀನಕ್ಕೆ ಅನುಮೋದನೆ ಪಡೆಯಲು ಷೇರುದಾರರ ಸಭೆಯನ್ನು ನಡೆಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಅಕ್ಟೋಬರ್‌ನಲ್ಲಿ ಅನುಮೋದನೆ ನೀಡಿದೆ. ಈ ವಿಲೀನವನ್ನು ಒಪ್ಪುವ ಮತ್ತು ಅನುಮೋದಿಸುವ ಉದ್ದೇಶಕ್ಕಾಗಿ ಷೇರುದಾರರ ಸಭೆಯನ್ನು ನವೆಂಬರ್ 25, 2022 ರಂದು ಕರೆಯಲಾಗಿದೆ. ಈ ಸಭೆಯಲ್ಲೂ ಕೂಡಾ ವಿಲೀನಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
40 ಬಿಲಿಯನ್ ಡಾಲರ್ ಮೌಲ್ಯದ ವಿಲೀನ ಪ್ರಕ್ರಿಯೆ ಇದಾಗಿದೆ. ಈ ಪ್ರಕ್ರಿಯೆ ಏಪ್ರಿಲ್ 4, 2022ರಂದು ಆರಂಭವಾಗಿದೆ. ಆ ಸಂದರ್ಭದಲ್ಲಿ ಉಭಯ ಸಂಸ್ಥೆಗಳು ಈ ಪ್ರಕ್ರಿಯೆ ಪೂರ್ಣವಾಗಲು ಸುಮಾರು 12ರಿಂದ 18 ತಿಂಗಳುಗಳು ಬೇಕಾಗುತ್ತದೆ ಎಂದು ಹೇಳಿಕೊಂಡಿತ್ತು. ಪ್ರಕ್ರಿಯೆ ಆರಂಭವಾಗಿ ಸುಮಾರು 7-8 ತಿಂಗಳುಗಳು ಆಗಿದೆ. ಆದರೆ ಸಂಸ್ಥೆಗಳು ಪ್ರಕ್ರಿಯೆ ಪೂರ್ಣವಾಗಲು 8-10 ತಿಂಗಳು ಬೇಕಾಗುತ್ತದೆ ಎಂದು ನವೆಂಬರ್ ಅಂತ್ಯದಲ್ಲಿ ಹೇಳಿಕೊಂಡಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಬ್ಸಿಡಿದಾರರು ವಿಲೀನವಾದ ಸಂಸ್ಥೆಯಲ್ಲಿ ಸಬ್ಸಿಡಿದಾರರಾಗಿಯೇ ಉಳಿಯಲಿದ್ದಾರೆ ಎಂದು ಎಚ್‌ಡಿಎಫ್‌ಸಿ ಚೇರ್‌ಮನ್ ಅತಾನು ಚಕ್ರವರ್ತಿ ತಿಳಿಸಿದ್ದಾರೆ. ಬ್ಯಾಂಕ್‌ನ ಸೇರದ ಕೆಲವು ಘಟಕಗಳ ಹೂಡಿಕೆ ಸ್ಥಗಿತ ಮಾಡಲಾಗುತ್ತದೆ. ಆದರೆ ಸಬ್ಸಿಡಿದಾರರ ವಿಲೀನಕ್ಕೆ ಆರ್‌ಬಿಐ ಹಾಗೂ ಐಆರ್‌ಡಿಎಐನ ಅನುಮೋದನೆ ಬೇಕಾಗುತ್ತದೆ ಎಂದು ಕೂಡಾ ಉಲ್ಲೇಖಿಸಿದ್ದಾರೆ.


Click it and Unblock the Notifications