ಬೆಂಗಳೂರು, ಜೂನ್ 17: ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಅಲ್ಲಿ ದಿನಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಈ ಹಿನ್ನಲೆಯಲ್ಲಿ ಅಲ್ಲಿನ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಬೆಲೆಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಅಲ್ಲಿನ ಜನರು ಹಣದುಬ್ಬರದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಾಕಿಸ್ತಾನ ಸರ್ಕಾರ ತನ್ನ ಸಾಲವನ್ನು ತೀರಿಸಲು ವಿದೇಶಿ ರಾಷ್ಟ್ರಗಳಿಂದ ಹಣವನ್ನು ಸಾಲ ಪಡೆಯುತ್ತಿದೆ. ಅದರೂ ಹಣದುಬ್ಬರ ಹತೋಟಿಗೆ ಬರುತ್ತಿಲ್ಲ. ಇಂತಹ ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬ ನಿಶ್ಚಿಂತೆಯಿಂದ ಜೀವನ ಸಾಗಿಸುತ್ತಿದ್ದಾನೆ. ಹೌದು ಆತನೇ ಓರ್ವ ಭಿಕ್ಷುಕ. ಹಾಗೆಂದು ಇವ ಭಿಕಾರಿ ಬಿಕ್ಷುಕನಲ್ಲ. ಇವನೋರ್ವ ಪಾಕಿಸ್ತಾನದ ಶ್ರೀಮಂತ ಭಿಕ್ಷುಕ.!
"ಪಾಕಿಸ್ತಾನದ ಅಂಬಾನಿ" ಎಂದು ಪ್ರಸಿದ್ದವಾದ ಈ ಪಾಕ್ ನ ಶ್ರೀಮಂತ ಭಿಕ್ಷುಕನ ಬಗ್ಗೆ ನಿಮಗೆ ಹೆಚಿನ ಮಾಹಿತಿ ಇಲ್ಲದಿರಬಹುದು. ಆದರೆ ಅವರ ಆಸ್ತಿ ಸಾವಿರ ರೂಪಾಯಿ.. ಲಕ್ಷ ರೂಪಾಯಿಗಳಿಂದ.. ಕೋಟಿಗಳಲ್ಲಿ ಅಳೆಯಲಾಗುತ್ತದೆ. ತಮ್ಮ ಮಕ್ಕಳನ್ನು ಹೆಸರಾಂತ ಶಾಲೆಗೆ ಸೇರಿಸುವುದರ ಜೊತೆಗೆ ಒಟ್ಟು 1 ಕೋಟಿ ರೂಪಾಯಿಗೆ ವಿಮೆ ಮಾಡಿಸಿದ್ದಾರೆ.

ಪಾಕಿಸ್ತಾನದ ARY ಸುದ್ದಿ ಕೇಂದ್ರದ ಪ್ರಕಾರ ಶೌಕತ್ ಅಲಿ ಪಾಕ್ ನ ಸಿರಿವಂತ ಭಿಕ್ಷುಕನಾಗಿದ್ದು ಈತ ಪಾಕಿಸ್ತಾನದ ಮುಲ್ತಾನ್ ನಗರದ ಪಂಜಾಬ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾನೆ. ಫೆಡರಲ್ ಬೋರ್ಡ್ ಆಫ್ ರೆವಿನ್ಯೂ (ಎಫ್‌ಬಿಆರ್), ಪಾಕಿಸ್ತಾನದ ಉನ್ನತ ತೆರಿಗೆ ಸಂಗ್ರಹಣಾ ಸಂಸ್ಥೆ, ಅಕ್ಟೋಬರ್ 2021 ರಲ್ಲಿ ಶೌಕತ್ ಭಿಕ್ಷುಕನ ಬ್ಯಾಂಕ್ ಖಾತೆಯಲ್ಲಿ 1.7 ಮಿಲಿಯನ್ ಇತ್ತು(17 ಲಕ್ಷಕ್ಕೂ ಹೆಚ್ಚು) ಎಂದು ವರದಿ ಮಾಡಿದೆ. ಈತ ಈಗಲೂ ಪ್ರತಿದಿನ 1000 ರೂ. ಭಿಕ್ಷೆಯಿಂದ ಸಂಪಾದಿಸುತ್ತಾನೆ.
ಭಿಕಾರಿ ಶೌಕತ್ ಮಕ್ಕಳು ಪಾಕಿಸ್ತಾನದ ಮುಲ್ತಾನ್ ಸಿಟಿಯ ಅತ್ಯಂತ ದುಬಾರಿ ಶಾಲೆಯಲ್ಲಿ ಓದುತ್ತಾರೆ. ತನ್ನ ಹೆಸರಿನಲ್ಲಿ ಒಂದು ಕೋಟಿ ಪಾಕಿಸ್ತಾನಿ ರೂಪಾಯಿಗೆ ವಿಮೆ ಮಾಡಿಸಿದ್ದು ತಾನೇನಾದರೂ ಆಕಸ್ಮಿಕ ಮರಣ ಹೊಂದಿದರೆ ಯಾವುದೇ ಸಮಸ್ಯೆ ಆಗಬಾರದು ಎನ್ನುತ್ತಾರೆ ಶೌಕತ್. ಇದಲ್ಲದೇ ಎರಡು ಐಷಾರಾಮಿ ಮನೆ ಕೂಡಾ ಇದೆ.
ಚೆನ್ನಾಗಿ ಇಂಗ್ಲೀಷ್ ಭಾಷೆ ಮಾತನಾಡುವ ಭಿಕಾರಿ ಶೌಕತ್ ವಿದ್ಯಾವಂತರಾಗಿದ್ದು , ಕೆಲಸಕ್ಕಾಗಿ ಅಲೆದು ಅಲೆದು ಉದ್ಯ್ಗ ಸಿಗದಿದ್ದಾಗ ಭಿಕ್ಷಾಟನೆಗೆ ಬಂದೆ. ನನ್ನ ಹತ್ತಿರ ಸಂಪತ್ತು ಇದ್ದರೂ ಭಿಕ್ಷಾಟನೆ ಬಿಡುವುದಿಲ್ಲ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಪಾಕಿಸ್ತಾನ ಅತ್ಯುತ್ತಮ ಪ್ರಜೆಗಳನ್ನಾಗಿ ಮಾಡುವ ಇರಾದೆ ಇದೆ ಎನ್ನುತ್ತಾರೆ ಶೌಕತ್. ಶೌಕತ್ ಆಗ್ಗಾಗ್ಗೆ ಅವನು ತನ್ನ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರೆ.


Click it and Unblock the Notifications