ಈಗಿನ ಜೀವನಶೈಲಿ ಹೇಗಾಗಿದೆ ಎಂದರೆ ಜೀವನಕ್ಕಾಗಿ ಕೆಲಸವೋ, ಕೆಲಸಕ್ಕಾಗಿ ಜೀವನವೋ ಎಂಬಂತಾಗಿದೆ. ಕೆಲಸದ ಒತ್ತಡಗಳು ಉದ್ಯೋಗಿಗಳ ಆರೋಗ್ಯದ ಮೇಲೆ ಎಷ್ಟು ಒತ್ತಡ ಹೇರುತ್ತಿವೆ ಎಂದರೆ, ನಿಜಕ್ಕೂ ಬದುಕು ನಶ್ವರ ಎಂದೆನಿಸುತ್ತದೆ. ಇದಕ್ಕೆ ಉದಾಹರಣೆಯಾಗಿ ಬೆಂಗಳೂರು ಮೂಲದ ಉದ್ಯಮಿಯೊಬ್ಬರು, ಮೂಗಿನ ರಕ್ತಸ್ರಾವ ಮತ್ತು 230/120 mmHg ಎಂಬ ಅತ್ಯಂತ ಅಪಾಯಕಾರಿ ರಕ್ತದೊತ್ತಡದದಿಂದ ಐಸಿಯು ದಾಖಲಾಗಿದ್ದಾರೆ. ಅವರೇ ಸ್ವತಃ ಹೇಳಿದ್ದಾರೆ, ಜೀವನಕ್ಕಿಂತ ಕೆಲಸ ಮುಖ್ಯವಲ್ಲ ಎಂದು..ಈಗಿನ ದಿನಗಳಲ್ಲಿ ಇದೊಂದು ಸಣ್ಣ ಉದಾಹರಣೆಯಾಗಿರಬಹುದು. ಆದರೆ ಇದೇ ರೀತಿ ಅದೆಷ್ಟೋ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಹೌದು, ಕೆಲಸದ ಒತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಕೇವಲ ಒಂದು ಘಟನೆ ಮಾತ್ರವಲ್ಲ, ಬದಲಾಗಿ ಇತ್ತೀಚಿನ ವರ್ಷಗಳಲ್ಲಿ ಉಭಯ ಮಹಾನಗರಗಳಲ್ಲಿಯೂ, 30ರಿಂದ 40ರ ನಡುವೆ ಇರುವ ವಯಸ್ಕರಲ್ಲಿ ನಿರಂತರವಾಗಿ ಕಂಡುಬರುತ್ತಿರುವ ಗಂಭೀರ ಸಮಸ್ಯೆಯ ಪ್ರತಿಬಿಂಬವಾಗಿದೆ.
ಅಧಿಕ ರಕ್ತದೊತ್ತಡದ ಬಿಕ್ಕಟ್ಟು ಎಂದರೇನು?
ಅಧಿಕ ರಕ್ತದೊತ್ತಡವನ್ನು ವೈದ್ಯಕೀಯ ಭಾಷೆಯಲ್ಲಿ ಹೈಪರ್ ಸೆನ್ಸಿಟಿವ್ ಎಮರ್ಜೆನ್ಸಿ ಎಂದು ಕರೆಯುತ್ತಾರೆ. ಅಂದರೆ ಇದು ಅತ್ಯಂತ ತೀವ್ರವಾದ ಮತ್ತು ತುರ್ತು ಸ್ಥಿತಿ ಎನ್ನಬಹುದಾಗಿದೆ. ಅಂದರೆ ಸಾಮಾನ್ಯವಾಗಿ ನಮ್ಮ ರಕ್ತದೊತ್ತಡ 120/80 mmHg ಇರುತ್ತದೆ. ಆದರೆ ಕೆಲಸದ ಒತ್ತಡದಿಂದಾಗಿ ರಕ್ತದ ಒತ್ತಡ ಹೆಚ್ಚಾಗಿ ಕಂಡುಬರುತ್ತಿದೆ. 180/120 ಅಥವಾ ಅದಕ್ಕಿಂತ ಹೆಚ್ಚು ಒತ್ತಡ ಎದುರಾಗುತ್ತಿದ್ದು ಇದು ಹೃದಯ, ಮೂಳೆಮಜ್ಜೆ, ಕಣ್ಣು, ಕಿಡ್ನಿ ಮತ್ತು ಮೆದುಳಿನ ಕಾರ್ಯಕ್ಷಮತೆ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಈ ರೀತಿಯ ಬಿಕ್ಕಟ್ಟಿಗೆ ತಡೆಗಟ್ಟದರೆ ಹೃದಯಾಘಾತ, ಸ್ಟ್ರೋಕ್ ಅಥವಾ ಕಿಡ್ನಿ ವೈಫಲ್ಯವೂ ಸಂಭವಿಸಬಹುದು.
ಈ ಬಿಕ್ಕಟ್ಟಿಗೆ ಪ್ರಮುಖ ಕಾರಣಗಳೇನು..?
ಈ ಹೆಚ್ಚುವರಿಯಾದ ರಕ್ತದ ಒತ್ತಡ ಕೇವಲ ಒಂದೇ ಕಾರಣದಿಂದ ಸಂಭವಿಸುವುದಿಲ್ಲ. ಇದು ಹಲವಾರು ಪರಿಸ್ಥಿತಿಗಳ ಫಲವಾಗಿದೆ. ತೀವ್ರ ಒತ್ತಡ ಮತ್ತು ನಿದ್ರೆಯ ಕೊರತೆ: ದೈನಂದಿನ ಜೀವನದಲ್ಲಿ ಕೆಲಸದ ಒತ್ತಡ, ವೈಯಕ್ತಿಕ ಬದುಕಿನ ದಣಿವು ಮತ್ತು ನಿದ್ರೆಯ ಕೊರತೆ ನಮ್ಮ ದೇಹದಲ್ಲಿ ಕಾರ್ಟಿಸೋಲ್ ಎಂಬ ಒತ್ತಡ ಹಾರ್ಮೋನನ್ನು ಹೆಚ್ಚಿಸುತ್ತದೆ. ಇದು ಹೃದಯದ ಬಡಿತವನ್ನು ತ್ವರಿತಗೊಳಿಸಿ ರಕ್ತದೊತ್ತಡವನ್ನು ನಿಲ್ಲಿಸದಂತೆ ಏರಿಸುತ್ತದೆ. ಕೆಲವೊಮ್ಮೆ ವಿಶ್ರಾಂತಿ ಹಾಗೂ ಹೂಂಸುವ ಸಮಯವನ್ನು ತಡೆಹಿಡಿದಾಗ ದೇಹದ ಪ್ರಾಕೃತಿಕ ಶಮನ ವ್ಯವಸ್ಥೆಯು ಹದಗೆಡುತ್ತದೆ. ನಿದ್ರೆಯ ಕೊರತೆ ದೀರ್ಘಾವಧಿಯಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಿಂದ ಹೊರತಗೆಯಬಹುದು. ಅಲ್ಲದೇ ಗಾಢ ನಿದ್ರೆಯ ತೊಂದರೆಗಳು ಕೂಡ ಎದುರಾಗುತ್ತವೆ. ಈ ತೊಂದರೆಗಳು ರಾತ್ರಿ ಸಮಯದಲ್ಲಿ ದೇಹದ ರಕ್ತಪೂರಿತಿಕೆಯು ಸರಿಯಾಗದಂತೆ ಮಾಡಿ, ಹೃದಯದ ಮೇಲೆ ಒತ್ತಡ ತಂದಿಡುತ್ತದೆ. ಹಲವಾರು ರೋಗಿಗಳು ರಕ್ತದೊತ್ತಡದ ಔಷಧವನ್ನು ನಿಯಮಿತವಾಗಿ ತೆಗೆದುಕೊಳ್ಳುವುದಿಲ್ಲ ಅಥವಾ ಮಧ್ಯದಲ್ಲಿ ನಿಲ್ಲಿಸುತ್ತಾರೆ. ಇದರಿಂದಾಗಿ ಬಿಪಿಯ ಮಟ್ಟ ತ್ವರಿತವಾಗಿ ಏರಿದಾಗ ದೇಹ ತೀವ್ರವಾಗಿ ಪ್ರತಿಕ್ರಿಯಿಸುತ್ತದೆ.
ಬಿಪಿಯನ್ನು ನಿಯಂತ್ರಣ ಹೇಗೆ..?
30 ವರ್ಷವಾದ ಬಳಿಕ ಎಲ್ಲರೂ ಮನೆಬಳಕೆಗೆ ಸರಿಯಾದ ರಕ್ತದೊತ್ತಡ ಮಾಪಕವನ್ನು ಇಟ್ಟುಕೊಳ್ಳಬೇಕು. ಪ್ರತಿದಿನದ ಮಟ್ಟವನ್ನು ದಾಖಲಿಸಿಕೊಳ್ಳುವುದು ಉತ್ತಮ.ಉಪ್ಪಿನ ಸೇವನೆಯು ರಕ್ತದೊತ್ತಡವನ್ನು ತೀವ್ರಗೊಳಿಸಬಹುದು. ಹಾಗಾಗಿ ಕಡಿಮೆ ಉಪ್ಪು, ಹೆಚ್ಚಿನ ಫಲಗಳು, ತರಕಾರಿ ಮತ್ತು ಫೈಬರ್ ಆಗಿರುವ ಆಹಾರವನ್ನು ಸೇವಿಸುವುದು ಸೂಕ್ತ. ಧ್ಯಾನ, ಪ್ರಾಣಾಯಾಮ, ಹವ್ಯಾಸದ ಹಿತಕರ ಚಟುವಟಿಕೆಗಳು ಒತ್ತಡವನ್ನು ಕಡಿಮೆ ಮಾಡಬಹುದು.
ಅಧಿಕ ರಕ್ತದೊತ್ತಡದ ಬಿಕ್ಕಟ್ಟು ತಕ್ಷಣದ ಚಿಕಿತ್ಸೆ ಮತ್ತು ಜಾಗ್ರತೆಯ ಅಗತ್ಯವಿರುವ ಗಂಭೀರ ಆರೋಗ್ಯ ಸಮಸ್ಯೆ. ಇದು ಕೇವಲ ವಯೋವೃದ್ಧರ ಸಮಸ್ಯೆಯೇ ಅಲ್ಲ, ಇಂದಿನ ತಕ್ಷಣದ, ಒತ್ತಡಪೂರ್ಣ ಜೀವನಶೈಲಿಯಲ್ಲಿರುವ ಯುವಜನತೆಗೆ ಕೂಡ ಅಪಾಯವಾಗಿದೆ. ನಿತ್ಯ ಆರೋಗ್ಯ ತಪಾಸಣೆ, ಸಜಾಗ ಮನೋಭಾವ, ಸಮತೋಲಿತ ಆಹಾರ ಮತ್ತು ಶ್ರೇಷ್ಠ ಜೀವನಶೈಲಿಯಿಂದ ಮಾತ್ರ ಇದಕ್ಕೆ ತಡೆಯಿಡಲು ಸಾಧ್ಯ.


Click it and Unblock the Notifications