ಮಳೆ..ಮಳೆ..ಮಳೆ..ಬೇಸಿಗೆ ಅಂತ್ಯಾವಧಿಯಲ್ಲಿ ಮಳೆರಾಯನ ಆರ್ಭಟ ಜೋರಾಗಿಯೇ ಇದೆ. ರಾಜ್ಯದಲ್ಲಿ ಮಳೆಯ ವಾತಾವರಣ ಮನೆ ಮಾಡಿದ್ದು, ಬಿಸಿಯಿಂದ ಕಂಗೆಟ್ಟಿದ್ದ ನೆಲ ಈಗ ತಂಪಾಗಿದೆ. ಸೆಕೆಯಲ್ಲಿ ಬೆವರು ಸುರಿಸುತ್ತಿದ್ದವರು ಈಗ ಬೆಚ್ಚಗೆ ಹೊದ್ದು ಮಲಗುವ ಪದ್ದತಿಗೆ ಹಿಂತಿರುಗಿದ್ದಾರೆ. ನಿನ್ನೆ ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆಯಾಗಿದೆ. ಈ ಮಳೆಯ ಆರ್ಭಟ ದಕ್ಷಿಣ ಒಳನಾಡಿನಲ್ಲಿ ಮುಂದಿನ ಏಳು ದಿನಗಳವರೆಗೂ ಇರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಅಲ್ಲದೇ ರಾಜ್ಯದಲ್ಲಿ ಯೆಲ್ಲೋ ಅಲರ್ಟ್ ಕೂಡ ಸೂಚಿಸಿದೆ.

ಹೌದು, ದಕ್ಷಿಣ ಭಾರತದ ಒಳನಾಡು ಪ್ರದೇಶ..ಅಂದರೆ ಕರ್ನಾಟಕದ ವಿವಿಧ ಜಿಲ್ಲೆಗಳಾದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಹಾಸನ, ಕೊಡಗು, ಬೆಳಗಾವಿ, ಬೀದರ್, ರಾಯಚೂರು, ಯಾದಗಿರಿ, ದಾವಣಗೆರೆ, ಚಿತ್ರದುರ್ಗ ಸೇರಿ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆ ಏಳು ದಿನಗಳ ಕಾಲ ಸುರಿಯಲಿದೆ. ಈ ನಡುವೆ ಬಿರುಗಾಳಿಯ ಸಂಭವವೂ ಎದುರಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಐಎಂಡಿ ಬಿಡುಗಡೆ ಮಾಡಿದ ಹವಾಮಾನ ಮುನ್ಸೂಚನೆ ಬುಲೆಟಿನ್ ಪ್ರಕಾರ, ಕೆಲ ಪ್ರದೇಶಗಳಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬಲವಾದ ಗಾಳಿಯು ಬೀಸುವ ಸಾಧ್ಯತೆಯಿದೆ. ಈ ಹಿನ್ನೆಲೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಹಳದಿ ಘೋಷಿಸಲಾಗಿದೆ.
ವಾಯುಭಾರ ಕುಸಿತದ ಪರಿಣಾಮ:
ಬಂಗಾಳಕೊಲ್ಲಿಯ ಆಗ್ನೇಯ ಭಾಗ, ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳು ಮತ್ತು ತಮಿಳುನಾಡಿನಲ್ಲಿ ವಾಯುಭಾರ ಕುಸಿದ ಪರಿಣಾಮದಿಂದ, ಈ ಭಾರಿ ಮಳೆ ಸಂಭವಿಸುತ್ತಿದೆ ಎನ್ನಲಾಗಿದೆ. ಈ ರೀತಿಯ ವಾತಾವರಣೀಯ ವ್ಯತ್ಯಯಗಳು ದಕ್ಷಿಣ ಒಳನಾಡಿನ ಹವಾಮಾನವನ್ನು ಬದಲಾಗಿಸುತ್ತಿವೆ. ತೆಲಂಗಾಣದಿಂದ ಉತ್ತರ ತಮಿಳುನಾಡುವರೆಗಿನ ವಾಯುಭಾರ ಕುಸಿತದ ಪ್ರಮಾಣ ಹೆಚ್ಚಿದ್ದು, ಇದರ ಪರಿಣಾಮವಾಗಿ ಈ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಜೊತೆಗೆ, ಪರ್ಯಾಯ ದ್ವೀಪ ಪ್ರದೇಶಗಳಾದ್ಯಂತ ಕೂಡ ಮಳೆಯ ಪ್ರಮಾಣ ಹೆಚ್ಚಳವಾಗಿದೆ.
ಇನ್ನು ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅವರು ಹೇಳುವ ಪ್ರಕಾರ, ದಕ್ಷಿಣ ಅರೇಬಿಯನ್ ಸಮುದ್ರದ ಕೆಲವು ಭಾಗಗಳಲ್ಲಿ ದಕ್ಷಿಣ ಪಶ್ಚಿಮ ಮಾನ್ಸೂನ್ ಮತ್ತಷ್ಟು ಪ್ರಗತಿಗೆ ಅನುಕೂಲಕರ ಪರಿಸ್ಥಿತಿಯು ನಿರ್ಮಾಣವಾಗುತ್ತಿದೆ. ಈ ನಿರಂತರ ಚಲನೆ, ಈಗಿನ ವಾತಾವರಣ ವ್ಯವಸ್ಥೆಗಳೊಂದಿಗೆ ಒಟ್ಟುಗೂಡಿ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆಯ ಸಾಧ್ಯತೆಯನ್ನು ತೋರಿಸುತ್ತಿದೆ ಎನ್ನಲಾಗಿದೆ.
ಬೆಂಗಳೂರು ಮಹಾನಗರದಲ್ಲಿ ತುರ್ತು ತಯಾರಿ:
ಇನ್ನು ಭಾರಿ ಮಳೆಯ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆ ಬೆಂಗಳೂರಿನಲ್ಲಿ, ಹಲವು ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಂದರೆ ನಗರದಲ್ಲಿ ಮಳೆಯ ದುರಂತ ಮತ್ತು ಅಪಘಾತಗಳನ್ನು ತಡೆಯುವಂತಹ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹಾಗೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಬೆಂಗಳೂರು ಸಂಚಾರ ಪೊಲೀಸರು, ಹಾಗೂ ಇತರ ಸಂಬಂಧಿತ ಇಲಾಖೆಗಳೊಂದಿಗೆ ತುರ್ತು ಸಮನ್ವಯ ಸಭೆ ನಡೆಸಲಾಗಿದೆ. ರಸ್ತೆಗಳ ಮೇಲೆ ನೀರು ನಿಲ್ಲುವಿಕೆ, ಸಂಚಾರ ದಟ್ಟಣೆ, ಮರ ಬಿದ್ದು ಬ್ಲಾಕ್ ಆಗುವಿಕೆ ಮುಂತಾದ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ. ಪೂರ್ವ ವಲಯ ಡಿಸಿಪಿ ಸಾಹಿಲ್ ಬಾಗ್ಲಾ ಅವರ ಮಾಹಿತಿ ಪ್ರಕಾರ, ಹಲವು ಪ್ರಮುಖ ಸಂಚಾರ ಕೇಂದ್ರಗಳಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳು ಕೈಗೊಳ್ಳಲಾಗಿದೆ.
ಡಿಸಿಪಿ (ಸಂಚಾರ-ಉತ್ತರ) ಸಿರಿ ಗೌರಿ ಡಿಆರ್ ಅವರು ಹೇಳಿದ್ದಾರೆ: ಪ್ರಮುಖ ನೀರು ನಿಲ್ಲುವ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಿಂದ ಮಳೆಯ ನೀರನ್ನು ಶೀಘ್ರವಾಗಿ ಹೊರಹಾಕಲು ಬಿಬಿಎಂಪಿಗೆ ಸೂಚನೆ ನೀಡಲಾಗಿದೆ. ಜೊತೆಗೆ, ಎಲ್ಲ ಇಲಾಖೆಗಳಿಗೆ ಕರ್ತವ್ಯ ಹಂಚಿಕೆಯಾಗಿದ್ದು, ಸಂಚಾರ ಅಡಚಣೆಗೊಳಗಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಬಿಬಿಎಂಪಿಯಿಂದ ತಾತ್ಕಾಲಿಕ ವ್ಯವಸ್ಥೆ:
ಬಿಬಿಎಂಪಿ ಪೂರ್ವ ವಲಯ ಆಯುಕ್ತ ಆರ್. ಸ್ನೇಹಲ್ ಅವರು ಪ್ರಕಟಿಸಿದ ಮಾಹಿತಿಯ ಪ್ರಕಾರ, ನಗರದಲ್ಲಿ ನೀರು ನಿಲ್ಲುವ ಮುಖ್ಯ ಸ್ಥಳಗಳಲ್ಲಿ ತಾತ್ಕಾಲಿಕ ಪಂಪ್ ವ್ಯವಸ್ಥೆ ಸ್ಥಾಪಿಸಲಾಗುತ್ತದೆ. ಮಳೆನೀರು ತಕ್ಷಣವೇ ಹೊರಹಾಕುವ ವ್ಯವಸ್ಥೆಗೆ ಆದ್ಯತೆ ನೀಡಲಾಗಿದ್ದು, ರಸ್ತೆಗಳಲ್ಲಿ ನೀರಿನ ನಿಕ್ಷೇಪವಿಲ್ಲದಂತೆ ನೋಡಿಕೊಳ್ಳಲಾಗುತ್ತದೆ.
ಸಾರ್ವಜನಿಕರಿಗಾಗಿ ಮುನ್ನೆಚ್ಚರಿಕೆ ಸೂಚನೆ:
ಇನ್ನು ಹವಾಮಾನ ಇಲಾಖೆ ಮಳೆ ಹಿನ್ನೆಲೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ನಾಗರಿಕರು ಯಾವುದೇ ಕಾರಣಕ್ಕೂ ಮುನ್ನೆಚ್ಚರಿಕೆಯಿಂದ ಇರಬೇಕು. ಮಳೆಗಾಲದ ಅವಧಿಯಲ್ಲಿ ಅತಿಕಡಿದ ಹಾದಿಗಳಿಂದ ದೂರವಿರಬೇಕು. ಮರದ ನೆರಳು ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲುವುದು ತಪ್ಪಿಸಿ. ವಾಹನದ ಓಟದ ವೇಳೆ ಅಗತ್ಯ ಮುಂಜಾಗ್ರತೆ ವಹಿಸಿ. ಮಕ್ಕಳನ್ನು ರೋಡಿಗೆ ಅತಿ ಹತ್ತಿರ ಬಿಡುವುದು ತಪ್ಪಿಸಿ ಎಂದೆಲ್ಲಾ ಎಚ್ಚರಿಕೆ ನೀಡಿದೆ.


Click it and Unblock the Notifications