ಭೂಮಿಗೆ ಮಳೆಯ ಸ್ಪರ್ಶ ಹೌದು, ರಾಜ್ಯದಲ್ಲಿ ಮಳೆಯ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಬೆಳಂ ಬೆಳಗ್ಗೆ (Heavy rain in Bengaluru) ಜೋರು ಮಳೆಯಾಗಿದ್ದು, ಹಲವೆಡೆ ತುಂತುರು ಮಳೆಯಾಗುತ್ತಿದೆ. ನಿನ್ನೆ ಸುರಿದ ಒಂದು ಸಣ್ಣ ಮಳೆಯಿಂದ ಬೆಂಗಳೂರು ಕೆರಯಂತೆಯಾಗಿದೆ .ಆದ್ದರಿಂದ ಮಳೆಯಲ್ಲಿ ಎಲ್ಲೂ ಓಡಾಟ ಮಾಡಬಾರದು ಮನೆಯಲ್ಲಿ ಸುರಂಕ್ಷಿತವಾಗಿ ಇರಬೇಕು ಎಂದು ಹವಾಮಾನ ಇಲಾಖೆ ಮೂನ್ಸೂಚನೆಯನ್ನು ನೀಡಿದೆ.
ಹೌದು, ಮಳೆಯ ಆರ್ಭಟ ಇನ್ನೂ ಹೀಗೆ ನಾಲ್ಕು ದಿನಗಳ ಕಾಲ ಮುಂದುವರಿಯಲಿದೆ. ಈಗಾಗಲೇ ಮಳೆಯಾಗುವ ಪ್ರದಶಗಳಿಗೆ ಯೆಲ್ಲೋ ಅಲರ್ಟ್ ಜಾರಿ ಮಾಡಿದ್ದು, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾಸನ, ಮುಂಗಾರಿ, ಶಿವಮೊಗ್ಗ ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಲ್ಲಿ ಮಳೆ ಇನ್ನೂ ನಾಲ್ಲ ದಿನಗಳ ಕಾಲ ಮುಂದುವರಿಯುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯ ಬಗ್ಗೆ ಸಾರ್ವಜನಿಕರು ಹೆಚ್ಚಿನ ಗಮನಕೊಟ್ಟ ಸುರಂಕ್ಷಿತವಾಗಿ ಮನೆಯ ಒಳಗೆ ಇರಿ ಎಂದು ಎಚ್ಚರಿಕೆಯನ್ನು ಸಹ ನೀಡಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್?
ಹವಾಮಾನ ಇಲಾಖೆ ನೀಡಿರುವ ಯೆಲ್ಲೋ ಅಲರ್ಟ್ ಪ್ರಕಾರ, ಕೆಳಗಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ.
ಏಪ್ರಿಲ್ 4 ರಂದು: ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು ವಿಜಯಪುರ ಈ ಎಲ್ಲಾ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇರುವುದರಿಂದ, ಹವಾಮಾನ ಇಲಾಖೆ ಹೆಚ್ಚಿನ ಎಚ್ಚರಿಕೆಯನ್ನು ಕೈಗೊಂಡಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತದೆ ಎಮದು ಸೂಚನೆಯನ್ನು ನೀಡಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಏಪ್ರಿಲ್ 5 ಮತ್ತು ಏಪ್ರಿಲ್ 6 ರಂದು, ಬೆಳಗಾವಿ, ಧಾರವಾಡ, ಮತ್ತು ಹಾವೇರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈ ದಿನಗಳಲ್ಲಿ ಉಳಿದ ಭಾಗಗಳಲ್ಲಿ ಕಡಿಮೆ ಶಾಖದ ವಾತವರಣ ಇರುತ್ತದೆ. ಅಂದರೆ ಮಳೆಯಿಲ್ಲದೆ ಹವಾಮಾನ ಶಾಂತವಾಗಿರುತ್ತದೆ.
ಹೀಗಾಗಿ, ಈ ದಿನಗಳಲ್ಲಿ ಉತ್ತಮ ಎಚ್ಚರಿಕೆಯಿಂದ ಇರುವುದರಿಂದ, ಧಾರವಾಡ, ಬೆಳಗಾವಿ ಮತ್ತು ಹಾವೇರಿಗೆ ಹೋಗುವವರು ಗಮನದಲ್ಲಿ ಈ ಮಾಹಿತಿಯನ್ನು ಇಟ್ಟಿಕೊಳ್ಳಬೇಕು.
ದಕ್ಷಿಣ ಒಳನಾಡು ಭಾಗದಲ್ಲಿ ನಾಲ್ಕು ದಿನಗಳ ಕಾಲ ವರುಣಾರ್ಭಟ
ಹವಾಮಾನ ಇಲಾಖೆಯ ಪ್ರಕಾರ, ದಕ್ಷಿಣ ಒಳನಾಡು ಭಾಗದಲ್ಲಿ ನಾಲ್ಕು ದಿನಗಳ ಕಾಲ ಹೆಚ್ಚಿನ ಮಳೆಯಾಗಲಿದ್ದು ಕೆಳಗಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ:
ಏಪ್ರಿಲ್ 4:ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ ಪ್ರದೇಶದಲ್ಲಿ ಮಳೆಯಾಗಲಿದೆ.
ಏಪ್ರಿಲ್ 5 ಮತ್ತು 6:ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ತುಮಕೂರುನಈ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ, ಆದ್ದರಿಂದ ಸ್ಥಳೀಯರಿಗೆ ಎಚ್ಚರಿಕೆಯಿಂದ ಇರುಬೇಕು ಎಂದು ಹವಾಮಾನ ಇಲಾಖೆ ಸಲಹೆಯನ್ನು ನೀಡಿದೆ.
ಮಳೆಗಾಲದಲ್ಲಿ ರಕ್ಷಣೆ ಮಾಡಿಕೊಳ್ಳಲು, ಕೆಲವೊಂದು ಎಚ್ಚರಿಕೆ ಮತ್ತು ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅವಶ್ಯಕ ಅವುಗಳು ಯಾವುವು ಎಂಬುದು ಈ ಕೆಳಗಿನಂತೆ ಇದೆ.
ಹವಾಮಾನ ಮುನ್ಸೂಚನೆಗಳ ಕಡೆ ಗಮನ ಕೊಡಿ: ಪ್ರತಿದಿನವೂ ಹವಾಮಾನ ಅಧಿಸೂಚನೆಗಳನ್ನು ಪರಿಶೀಲಿಸಿ. ಸರಕಾರದಿಂದ ಅಥವಾ ಹವಾಮಾನ ಇಲಾಖೆಯಿಂದ ನೀಡಲಾಗುವ ಮುನ್ಸೂಚನೆಗಳನ್ನು ಅನುಕರಣೆ ಮಾಡಿ. ಯೆಲ್ಲೋ ಅಲರ್ಟ್ ಅಥವಾ ಆರಂಜ್ ಅಲರ್ಟ್ ಇದ್ದರೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಮಳೆಗಾಲದ ಸಣ್ಣ ಬೀದಿಗಳಿಂದ ದೂರವಿರಿ: ಮಳೆಗಾಲದಲ್ಲಿ ಬೀದಿಗಳು ಮತ್ತು ಬಲುಪಾತಿ ಪ್ರದೇಶಗಳಲ್ಲಿ ಪ್ರವಾಹ ಹಾಗೂ ಜೋರ್ಪು ಪ್ರಲಯಗಳಾಗಬಹುದು. ಅವುಗಳಲ್ಲಿ ಹೋಗುವುದರಿಂದ ಅನಾಹುತಗಳನ್ನು ತಲುಪಬಹುದು. ಆದ್ದರಿಂದ, ಆ ಪ್ರದೇಶಗಳಲ್ಲಿ ಮುಂದುವರಿಯಲು ಜಾಗರೂಕವಾಗಿರಿ.
ಮನೆಗೆ ಮುಚ್ಚಳ ಅಳವಡಿಕೆ: ನಿಮ್ಮ ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ಚೆನ್ನಾಗಿ ಮುಚ್ಚಿರಿ. ಗಾಳಿಗೆ ಹಾನಿಯಾಗದಂತೆ ನೋಡಿಕೊಳ್ಳಿ
ಮೇಲ್ಚಾವಣಿ ಪರಿಶೀಲಿಸಿ: ಹೆಚ್ಚಿನ ಮಳೆಯಾಗುವ ಸಮಯದಲ್ಲಿ ಕಿಟಕಿಗಳು ಮತ್ತು ದ್ವಾರಗಳನ್ನು ಮುಚ್ಚಿ.ನೀವು ಸೇರುವ/ಹೋಗುವ ಸ್ಥಳಗಳಲ್ಲಿ ನೀರಿನ ಅಡ್ಡತೆಯನ್ನು ಪರಿಶೀಲಿಸಿ. ನದಿಗಳ, ಕೆರೆಗಳನ್ನು, ಹಳ್ಳಿಗಳ ಕಡೆ ಗಮನ ಕೊಡಿ.
ಸುರಕ್ಷಿತ ಸ್ಥಳಗಳ ಬಗ್ಗೆ ತಿಳಿದುಕೊಳ್ಳಿ: ಗಾಳಿಯ ಪ್ರಭಾವ ಮಳೆಯ ಪ್ರಭಾವವನ್ನು ಅರಿಯಿರಿ. ಮಳೆಯ ಸಮಯದಲ್ಲಿ ಗಾಳಿಬಲ ಹೆಚ್ಚಾಗಬಹುದು. ಸ್ತಂಭಗಳು, ಮರಗಳು, ವಿದ್ಯುತ್ ಕಂಬಗಳೀಂದ ದೂರವಿರಿ. ಕೃಷಿ ಹಾಗೂ ಪಶುಪಾಲನೆ ಕಾರ್ಯಗಳಿಗೆ ಸಂಬಂಧಿಸಿದವರು ನೀರಿನ ಭಾರದಿಂದ ಹೊತ್ತೊಯ್ಯಲ್ಪಟ್ಟ ಸ್ಥಳಗಳಲ್ಲಿ ತಮ್ಮ ಕೆಲಸಗಳನ್ನು ಸರಿಪಡಿಸಿಕೊಳ್ಳಿ. ಈ ಹಂತಗಳನ್ನು ಅನುಸರಿಸುವ ಮೂಲಕ, ನೀವು ಮಳೆಗಾಲದಲ್ಲಿ ನಿಮ್ಮ ಮನೆಯ ಹಾಗೂ ಕುಟುಂಬದ ಸುರಕ್ಷತೆಯನ್ನು ಮಾಡಬಹುದು.
More From GoodReturns

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!



Click it and Unblock the Notifications